Webdunia - Bharat's app for daily news and videos

Install App

ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದ ಸೂಚ್ಯಂಕ ಕುಸಿತ

Webdunia
ಶುಕ್ರವಾರ, 10 ಜೂನ್ 2016 (11:27 IST)
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 80 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಐಟಿ, ತಂತ್ರಜ್ಞಾನ, ವಾಹನೋದ್ಯಮ, ಬ್ಯಾಂಕಿಂಗ್, ಹೆಲ್ತ್‌ಕೇರ್ ಮತ್ತು ಎಫ್‌ಎಂಸಿಜಿ ಶೇರುಗಳ ಖರೀದಿಗೆ ಹೂಡಿಕೆದಾರರು ನಿರಾಸಕ್ತಿ ತೋರಿದ್ದರಿಂದ ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 80.38 ಪಾಯಿಂಟ್‌ಗಳ ಕುಸಿತ ಕಂಡು 26,683.08 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 23.25 ಪಾಯಿಂಟ್‌ಗಳ ಕುಸಿತ ಕಂಡು 8,180.25 ಅಂಕಗಳಿಗೆ ತಲುಪಿದೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.75 ರಷ್ಟು ಕುಸಿತ ಕಂಡಿದ್ದರೆ, ಜಪಾನ್‌ನ ನಿಕೈ ಸೂಚ್ಯಂಕ ಶೇ.0.49 ರಷ್ಟು ಇಳಿಕೆ ಕಂಡಿದೆ. ಚೀನಾ ಮಾರುಕಟ್ಟೆಗೆ ಇಂದು ರಜೆ ಘೋಷಿಸಲಾಗಿದೆ.
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.11 ರಷ್ಟು ಕುಸಿತ ಕಂಡಿದೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಪಹಲ್ಗಾಮ್‌ ದಾಳಿ: ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

ಸ್ಟೇಟ್ ಸ್ಪಾನ್ಸರ್ ಕರಪ್ಷನ್‌ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಮುಂದಿನ ಸುದ್ದಿ
Show comments