Select Your Language

Notifications

webdunia
webdunia
webdunia
webdunia

ಸೆನ್ಸೆಕ್ಸ್: ಅಲ್ಪ ಕುಸಿತ ಕಂಡ ಸಂವೇದಿ ಸೂಚ್ಯಂಕ

ಸೆನ್ಸೆಕ್ಸ್: ಅಲ್ಪ ಕುಸಿತ ಕಂಡ ಸಂವೇದಿ ಸೂಚ್ಯಂಕ
ಮುಂಬೈ , ಮಂಗಳವಾರ, 30 ಸೆಪ್ಟಂಬರ್ 2014 (11:34 IST)
ಭಾರತೀಯ ರಿಸರ್ವ್ ಬ್ಯಾಂಕ್‌ನ ನಾಲ್ಕನೇ ದ್ವಿಮಾಸಿಕ ಆರ್ಥಿಕ ಪರಿಷ್ಕರಣೆ ಮುಂದಿರುವಂತೆ ಹೂಡಿಕೆದಾರರು ಶೇರುಗಳ ಖರೀದಿಗೆ ನಿರಾಸಕ್ತಿ ತೋರಿದ್ದರಿಂದ ಸೂಚ್ಯಂಕ 8 ಪಾಯಿಂಟ್‌ಗಳ ಅಲ್ಪ ಕುಸಿತ ಕಂಡಿದೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 8 ಪಾಯಿಂಟ್‌ಗಳ ಅಲ್ಪ ಕುಸಿತ ಕಂಡು 26,610.71 ಅಂಕಗಳಿಗೆ ತಲುಪಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 5.50 ಪಾಯಿಂಟ್‌ಗಳ ಇಳಿಕೆ ಕಂಡು 7953.40 ಅಂಕಗಳಿಗೆ ತಲುಪಿದೆ.
 
ಹಿಂಡಾಲ್ಕೋ, ಟಿಸಿಎಸ್, ಎಕ್ಸಿಸ್ ಬ್ಯಾಂಕ್, ಗೇಲ್ ಇಂಡಿಯಾ ಮತ್ತು ಕೋಲ್ ಇಂಡಿಯಾ ಕಂಪೆನಿಗಳ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
 
ಏತನ್ಮಧ್ಯೆ, ಎಚ್‌ಡಿಎಫ್‌ಸಿ, ಟಾಟಾ ಪವರ್, ಡಾ.ರೆಡ್ಡಿ ಲ್ಯಾಬ್ , ಬಜಾಜ್ ಅಟೋ ಮತ್ತು ಭಾರ್ತಿ ಏರ್‌ಟೆಲ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 
ಚೀನಾ, ದಕ್ಷಿಣ ಕೊರಿಯಾ, ಹಾಂಗ್‌ಕಾಂಗ್‌, ತೈವಾನ್, ಜಪಾನ್ ಮತ್ತು ಸಿಂಗಾಪೂರ್ ಶೇರುಪೇಟೆಗಳು ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿವೆ.
 

Share this Story:

Follow Webdunia kannada