Webdunia - Bharat's app for daily news and videos

Install App

ಸೆನ್ಸೆಕ್ಸ್: ಭರ್ಜರಿ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ

Webdunia
ಮಂಗಳವಾರ, 7 ಜೂನ್ 2016 (12:01 IST)
ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 100 ಪಾಯಿಂಟ್‌ಗಳ ಏರಿಕೆ ಕಂಡಿದೆ
 
ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮಾರುಕಟ್ಟೆಯಲ್ಲಿ ಚೇತರಿಕೆಯಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ಮುಂದಾಗಿದ್ದರಿಂದ ಶೇರುಪೇಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 65.69 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 100.12 ಪಾಯಿಂಟ್‌ಗಳ ಏರಿಕೆ ಕಂಡು 26,877.57 ಅಂಕಗಳಿಗೆ ತಲುಪಿದೆ.
 
ವಾಹನೋದ್ಯಮ, ಬ್ಯಾಂಕಿಂಗ್, ವಿದ್ಯುತ್, ರಿಯಲ್ಟಿ, ಉಕ್ಕು ಮತ್ತು ಗೃಹೋಪಕರಣ ವಸ್ತುಗಳ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಭರ್ಜರಿ ಚೇತರಿಕೆ ಕಂಡಿವೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 29,40 ಪಾಯಿಂಟ್‌ಗಳ ಏರಿಕೆ ಕಂಡು 8,230.45 ಅಂಕಗಳಿಗೆ ತಲುಪಿದೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.80 ರಷ್ಟು ಏರಿಕೆ ಕಂಡಿದ್ದರೆ, ಜಪಾನ್‌ನ ನಿಕೈ ಸೂಚ್ಯಂಕ ಶೇ.0.36 ರಷ್ಟು ಚೇತರಿಕೆಯಾಗಿದೆ. ಆದರೆ, ಶಾಂಘೈ ಶೇರುಪೇಟೆ ಸೂಚ್ಯಂಕ ಶೇ.2.18 ರಷ್ಟು ಕುಸಿತ ಕಂಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭೀಕರ ಭೂಕುಸಿತವಾಗಿದ್ದ ವಯನಾಡಿನಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ

ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಿದ ಮಗ: ಮನನೊಂದು ದಂಪತಿ ಆತ್ಮಹತ್ಯೆ

ಕೆಆರ್‌ಎಸ್‌ ಉದ್ಯಾನವನದಲ್ಲಿ ಕಾವೇರಿ ಆರತಿಗೆ ರಾಜ್ಯ ಸರ್ಕಾರ ಚಿಂತನೆ

CBSE ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೊಸ ಪದ್ಧತಿ: ಮುಂದಿನ ವರ್ಷದಿಂದಲೇ ಜಾರಿಗೆ

ಸಂವಿಧಾನಕ್ಕೆ ಏನಾದ್ರೂ ಅಪಾಯವಿದ್ರೆ ಅದು ನಿಮ್ಮಿಂದಲೇ ಮಿಸ್ಟರ್ ಮೋದಿ: ಮಲ್ಲಿಕಾರ್ಜುನ ಖರ್ಗೆ

ಮುಂದಿನ ಸುದ್ದಿ
Show comments