Select Your Language

Notifications

webdunia
webdunia
webdunia
webdunia

ಸೆನ್ಸೆಕ್ಸ್: ವಹಿವಾಟಿನ ಅಂತ್ಯಕ್ಕೆ ಪಾತಾಳಕ್ಕೆ ಕುಸಿದ ಶೇರುಸೂಚ್ಯಂಕ

ಸೆನ್ಸೆಕ್ಸ್: ವಹಿವಾಟಿನ ಅಂತ್ಯಕ್ಕೆ ಪಾತಾಳಕ್ಕೆ ಕುಸಿದ ಶೇರುಸೂಚ್ಯಂಕ
ಮುಂಬೈ , ಬುಧವಾರ, 2 ಸೆಪ್ಟಂಬರ್ 2015 (19:56 IST)
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 243 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಚೀನಾ, ಯುರೋಪ್ ಮತ್ತು ಅಮೆರಿಕದ ಶೇರುಪೇಟೆಗಳ ವಹಿವಾಟಿನಲ್ಲಿ ಕುಸಿತ ಕಂಡಿದ್ದರಿಂದ ದೇಶಿಯ ಶೇರುಪೇಟೆಯ ಮೇಲೆ ಪ್ರಭಾವ ಬೀರಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 242.88 ಪಾಯಿಂಟ್‌ಗಳ ಕುಸಿತ ಕಂಡು 25,453.56 ಅಂಕಗಳಿಗೆ ತಲುಪಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 68.85 ಪಾಯಿಂಟ್‌ಗಳ ಇಳಿಕೆ ಕಂಡು 7,717 ಅಂಕಗಳಿಗೆ ತಲುಪಿದೆ.
 
ರಿಯಲ್ಟಿ, ಎಫ್‌ಎಂಸಿಜಿ, ಐಟಿ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿದ್ದರಿಂದ ಸೂಚ್ಯಂಕ ಮತ್ತಷ್ಟು ಕುಸಿತವಾಗುವುದನ್ನು ತಡೆದಿದೆ ಎಂದು ಮೂಲಗಳು ತಿಳಿಸಿವೆ.
 
ಚೀನಾ, ಜಪಾನ್ ಮತ್ತು ಸಿಂಗಾಪೂರ್ ಶೇರುಪೇಟೆಗಳು ಶೇ.1.1.8 ರಷ್ಟು ಕುಸಿತ ಕಂಡಿವೆ. ಫ್ರಾನ್ಸ್, ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್ ಶೇರುಪೇಟೆಗಳು ಕೂಡಾ ಶೇ.0.37 ರಷ್ಟು ಕುಸಿತ ಕಂಡಿವೆ.

Share this Story:

Follow Webdunia kannada