Select Your Language

Notifications

webdunia
webdunia
webdunia
webdunia

ಸೆನ್ಸೆಕ್ಸ್: 300 ಪಾಯಿಂಟ್‌ಗಳ ಭರ್ಜರಿ ಚೇತರಿಕೆ ಕಂಡ ಸೂಚ್ಯಂಕ

ಸೆನ್ಸೆಕ್ಸ್: 300 ಪಾಯಿಂಟ್‌ಗಳ ಭರ್ಜರಿ ಚೇತರಿಕೆ ಕಂಡ ಸೂಚ್ಯಂಕ
ಮುಂಬೈ , ಸೋಮವಾರ, 25 ನವೆಂಬರ್ 2013 (13:06 IST)
PTI
ಜಾಗತಿಕ ಮಾರುಕಟ್ಟೆಯ ಚೇತರಿಕೆಯಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 300 ಪಾಯಿಂಟ್‌ಗಳ ಭರ್ಜರಿ ಚೇತರಿಕೆ ಕಂಡಿದೆ.

ಬ್ಯಾಂಕಿಂಗ್, ಬಂಡವಾಳ ವಸ್ತುಗಳು, ರಿಯಲ್ಟಿ, ಎಫ್‌ಎಂಸಿಜಿ, ಉಕ್ಕು ಮತ್ತು ಸಾರ್ವಜನಿಕ ಕ್ಷೇತ್ರದ ಶೇರುವಹಿವಾಟು ಚೇತರಿಕೆ ಕಂಡಿದ್ದರಿಂದ ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 299.39 ಪಾಯಿಂಟ್‌ಗಳ ಏರಿಕೆ ಕಂಡು 20,326.66 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 91.20 ಪಾಯಿಂಟ್‌ಗಳ ಏರಿಕೆ ಕಂಡು 6,086.65 ಅಂಕಗಳಿಗೆ ತಲುಪಿದೆ.

ಐಸಿಐಸಿಐ ಬ್ಯಾಂಕ್, ಲಾರ್ಸನ್ ಆಂಡ್ ಟರ್ಬೋ, ಸೆಸಾ ಸ್ಟೆರ್ಲೈಟ್, ಎಚ್‌ಡಿಎಫ್‌ಸಿ ಬ್ಯಾಂಕ್, ಹೀರೋ ಮೋಟಾರ್ ಕಾರ್ಪೋರೇಶನ್, ಟಾಟಾ ಮೋಟಾರ್ಸ್ ಮತ್ತು ಐಟಿಸಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ತೈವಾನ್, ಹಾಂಗ್‌ಕಾಂಗ್, ಇಂಡೋನೇಷ್ಯಾ, ಜಪಾನ್, ಸಿಂಗಾಪೂರ್ ಮತ್ತು ದಕ್ಷಿಣ ಕೊರಿಯಾ ಶೇರುಪೇಟೆಗಳು ಭರ್ಜರಿ ಚೇತರಿಕೆ ಕಂಡಿವೆ.

Share this Story:

Follow Webdunia kannada