Webdunia - Bharat's app for daily news and videos

Install App

ಸೆನ್ಸೆಕ್ಸ್: ನಿಫ್ಟಿಗೆ ಅಚ್ಚರಿಯ ನೂರಂಶ ಏರಿಕೆ

ರಾಜೇಶ್ ಪಾಲವೀಯಾ
ಗುರುವಾರದ ಶೇರು ವಹಿವಾಟಿನಲ್ಲಿ ಸಮರ್ಥ ಆರಂಭ ಕಂಡ ಮಾರುಕಟ್ಟೆ ತನ್ನ ಏರುಗತಿಯನ್ನು ಉಳಿಸಿಕೊಂಡಿತಲ್ಲದೆ, ನಿಫ್ಟಿಯು 5100 ಗೆರೆಯನ್ನು ದಾಟಿದರೆ, ಸೆನ್ಸೆಕ್ಸ್ 17300ಕ್ಕಿಂತ ಮೇಲೇರಿತು. ಇಡೀ ದಿನ ಮಿಡ್‌ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್‌ಗಳು ಏರುಗತಿಯಲ್ಲೇ ಇದ್ದವು. ಮಾರುಕಟ್ಟೆಯೂ ಪ್ರಬಲವಾಗಿತ್ತು. ಜಾಗತಿಕವಾಗಿ ನೋಡಿದರೆ, ಏಷ್ಯಾ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಫಲ ಕಂಡುಬಂದಿತು. ಯೂರೋಪಿನಲ್ಲಿಯೂ ಇದೇ ಪರಿಸ್ಥಿತಿ. ರಿಯಲ್ ಎಸ್ಟೇಟ್, ಸಾಫ್ಟ್‌ವೇರ್ ಮತ್ತು ಕ್ಯಾಪಿಟಲ್ ಸರಕುಗಳು ಮುಂಚೂಣಿಯಲ್ಲಿದ್ದವು.

ಶುಕ್ರವಾರವೂ ಮಾರುಕಟ್ಟೆಗೆ ಸಂಬಂಧಿಸಿ ಅತ್ಯಂತ ಮಹತ್ವದ ದಿನ. ಯಾಕೆಂದರೆ ಮಧ್ಯಾಹ್ನ ವೇಳೆಗೆ ಹಣದುಬ್ಬರದ ದರವೂ ಘೋಷಣೆಯಾಗುತ್ತದೆ. ಇದು ಮಾರುಕಟ್ಟೆ ಮೇಲೆ ಪ್ರಮುಖವಾಗಿ ಪರಿಣಾಮ ಬೀರಬಹುದಾಗಿದೆ. ಗುರುವಾರ ಮಾರುಕಟ್ಟೆ ಕೊನೆಗೊಂಡ ರೀತಿಯನ್ನು ನೋಡಿದರೆ, ನಿಫ್ಟಿಯಲ್ಲಿ ಸುಮಾರು 15-20 ಅಂಶ ಏರಿಕೆಯೊಂದಿಗೆ ನಾಳೆ ಮಾರುಕಟ್ಟೆ ಪ್ರಾರಂಭವಾಗುವ ನಿರೀಕ್ಷೆ ಇದೆ.

5130-5140 ರ ಆಸುಪಾಸು ಆರಂಭಗೊಳ್ಳಲಿರುವ ನಿಫ್ಟಿ, ಏರುಗತಿಯನ್ನು ಕಾಯ್ದುಕೊಂಡರೆ 5175-5190 ವರೆಗೂ ಏರುವ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿನ ಪ್ರಮುಖ ಶೇರುಗಳು 5190ಕ್ಕಿಂತ ಮೇಲೇರುವ ಸಾಧ್ಯತೆಗಳಿರುವುದರಿಂದ ನಿಫ್ಟಿಯೂ ಕಿರು ಅವಧಿಯಲ್ಲಿ 5050-5015 ವರೆಗೆ ಏರಬಹುದಾಗಿದೆ.

ಮೇ 19ರಂದು ಬುದ್ಧ ಜಯಂತಿ ಪ್ರಯುಕ್ತ ಮಾರುಕಟ್ಟೆಗೆ ರಜೆ ಇರುವುದರಿಂದ ಶುಕ್ರವಾರದ ವಹಿವಾಟಿನ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಶುಕ್ರವಾರದ ವಹಿವಾಟಿನಲ್ಲಿ ನಿಫ್ಟಿ ಏರುಗತಿ ಕಾಣುವ ನಿರೀಕ್ಷೆ ಇದೆ. ಶುಕ್ರವಾರದ ವ್ಯವಹಾರದ ಸಂದರ್ಭ ಪ್ರಜ್ ಇಂಡ್, ಚಂಬಲ್ ಫರ್ಟಿ, ಡಿಎಲ್ಎಫ್, ಸೈಲ್, ಸೀಮೆನ್ಸ್ ಮುಂತಾದವುಗಳ ಮೇಲೆ ಗಮನ ಹರಿಸಬಹುದು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

Show comments