Select Your Language

Notifications

webdunia
webdunia
webdunia
webdunia

ಲಾಂಭಾಂಶ ಕಾಯ್ದಿರಿಸುವಿಕೆ; ಆರಂಭದಲ್ಲೇ ಸೆನ್ಸೆಕ್ಸ್ ಕುಸಿತ

ಲಾಂಭಾಂಶ ಕಾಯ್ದಿರಿಸುವಿಕೆ; ಆರಂಭದಲ್ಲೇ ಸೆನ್ಸೆಕ್ಸ್ ಕುಸಿತ
ಮುಂಬೈ , ಸೋಮವಾರ, 23 ಜನವರಿ 2012 (10:52 IST)
ಹೂಡಿಕೆದಾರರು ಲಾಂಭಾಂಶ ಕಾಯ್ದಿರಿಸುವಿಕೆಯ ತಂತ್ರಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ದಿನದ ಆರಂಭಿಕ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕವು ಶೇಕಡಾ 0.47ರಷ್ಟು ಕುಸಿತವನ್ನು ಅನುಭವಿಸಿದೆ.

ದಿನದ ಆರಂಭಿಕ ವಹಿವಾಟಿನಲ್ಲಿ 79.69 ಪಾಯಿಂಟ್ ಕುಸಿತ ಅನುಭವಿಸಿರುವ ಸಂವೇದಿ ಸೂಚ್ಯಂಕವು 16,659.32 ಅಂಶಗಳಿಗೆ ಇಳಿಕೆ ಕಂಡಿದೆ. ಕಳೆದೆರಡು ದಿನಗಳಲ್ಲಾಗಿ ಮಾರುಕಟ್ಟೆಯು 287 ಪಾಯಿಂಟುಗಳ ಏರುಗತಿಯನ್ನು ಕಂಡಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕ ನೀತಿ ಘೋಷಿಸಲಿರುವ ಹಿನ್ನಲೆಯಲ್ಲಿ ಹೂಡಿಕೆದಾರರು ಲಾಂಭಾಂಶ ಕಾಯ್ದಿರಿಸುವಿಕೆ ತಂತ್ರಕ್ಕೆ ಮುಂದಾಗಿರುವುದೇ ಮಾರುಕಟ್ಟೆ ಹಿನ್ನಡೆಗೆ ಕಾರಣವಾಗಿದೆ.

ಮತ್ತೊಂದೆಡೆ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ ಶೇಕಡಾ 0.53 ಅಥವಾ 27.25 ಪಾಯಿಂಟ್ ಕುಸಿತ ಕಂಡು 5,021.35 ಅಂಶಗಳಿಗೆ ತಲುಪಿದೆ.

ದಿನದ ಆರಂಭಿಕ ವಹಿವಾಟಿನಲ್ಲಿ ಇತರ ಏಷ್ಯಾ ಮಾರುಕಟ್ಟೆಗಳಾದ ಜಪಾನ್‌ನ ನಿಕ್ಕಿ ಸೂಚ್ಯಂಕವು ಸಹ ಶೇಕಡಾ 0.14ರಷ್ಟು ಕುಸಿತವನ್ನು ಕಂಡಿದೆ.

Share this Story:

Follow Webdunia kannada