ಹಲವು ಬಾರಿ ಏರಿಳಿತವನ್ನು ಕಂಡ ದಿನದ ವಹಿವಾಟಿನಲ್ಲಿ ಮುಂಬೈನ ಬಿಎಸ್ಇ ಸೂಚ್ಯಂಕವು ಶೇಕಡಾ 0.12ರಷ್ಟು ಕುಸಿತವನ್ನು ಕಂಡಿವೆ.
ಬುಧವಾರದ ಆರಂಭಿಕ ವಹಿವಾಟಿನಲ್ಲಿ 200ರಷ್ಟು ಅಂಶ ಏರಿಕೆ ಕಂಡಿದ್ದ ಸಂವೇದಿ ಸೂಚ್ಯಂಕವು 18 ಸಾವಿರ ಅಂಶಗಳನ್ನು ಮರಳಿ ಪಡೆದಿತ್ತು. ಆದರೆ ಮುಂದಿನ ಅವಧಿಯಲ್ಲಿ ಇಳಿಕೆ ಕಾಣುವ ಮೂಲಕ ದಿನದಂತ್ಯಕ್ಕೆ 21.5 ಪಾಯಿಂಟ್ ಕುಸಿದು 17752.7 ಅಂಶಕ್ಕೆ ವಹಿವಾಟನ್ನು ಕೊನೆಗೊಳಿಸಿದೆ.
ಆದರೆ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಅಲ್ಪ ಚೇತರಿಕೆ ಕಾಣುವಲ್ಲಿ ಯಶಸ್ವಿಯಾಗಿದೆ. ನಿಫ್ಟಿ ಸೂಚ್ಯಂಕವು 9.70 ಪಾಯಿಂಟ್ ಏರಿಕೆ ಕಂಡು 5385 ಅಂಶಗಳಿಗೆ ತಲುಪಿತ್ತು.