Select Your Language

Notifications

webdunia
webdunia
webdunia
webdunia

2011ರಲ್ಲಿ ಯುಪಿಎಗೆ ಸಿಂಹ ಸ್ವಪ್ನವಾದ ಅಣ್ಣಾ ಹಜಾರೆ

2011ರಲ್ಲಿ ಯುಪಿಎಗೆ ಸಿಂಹ ಸ್ವಪ್ನವಾದ ಅಣ್ಣಾ ಹಜಾರೆ
, ಮಂಗಳವಾರ, 27 ಡಿಸೆಂಬರ್ 2011 (12:29 IST)
PTI
ಡಾ. ಕಿಷನ್ ಬಾಬುರಾವ್ ಹಜಾರೆ, ಆದರೆ ಜನತೆ ಪ್ರಿತಿಯಿಂದ ಕರೆಯುವ ಹೆಸರು ಅಣ್ಣಾ ಹಜಾರೆ (ಜನನ: ಜೂನ್ 15, 1938), ಭಾರತದ ಮಹಾರಾಷ್ಟ್ರ ರಾಜ್ಯದ ಅಹ್ಮದ್‌ನಗರ ಜಿಲ್ಲೆಯ ರಾಲೇಗಣ್ ಸಿದ್ಧಿ ಎಂಬ ಹಳ್ಳಿಯ ಅಭಿವೃದ್ಧಿಗಾಗಿ ನೀಡಿರುವ ಕಾಣಿಕೆಗಳಿಗಾಗಿ ಮತ್ತು ಅದನ್ನು ಒಂದು ಮಾದರಿ ಹಳ್ಳಿಯಾಗಿ ಗುರುತಿಸಲು ಮಾಡಿರುವ ಪ್ರಯತ್ನಕ್ಕಾಗಿ ೧೯೯೨ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಗಳಿಸಿರುವ ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತ.

ಸಾರ್ವಜನಿಕ ಕಛೇರಿಗಳಲ್ಲಿನ ಭ್ರಷ್ಟಾಚಾರ ತಡೆಗಾಗಿ ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು 2011ರ ಎಪ್ರಿಲ್ 5ರಿಂದ ಅವರು ಆಮರಣಾಂತ ಉಪವಾಸ ಕೈಗೊಂಡಿದ್ದರು. ಅಭಿವೃದ್ಧಿಯು ಭ್ರಷ್ಟಾಚಾರದಿಂದಾಗಿ ಕುಂಠಿತಗೊಂಡಿದೆ ಎಂದು ಮನಗಂಡು ಅಣ್ಣಾ ಅವರು 1991ರಲ್ಲಿ ಭ್ರಷ್ಟಾಚಾರ ವಿರೋಧಿ ಜನ ಆಂದೋಲನ ಎಂಬ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕ ಚಳವಳಿ ಆರಂಭಿಸಿದ್ದರು.

42 ಅರಣ್ಯಾಧಿಕಾರಿಗಳು ಸರ್ಕಾರಿ ಸಂಸ್ಥೆಯಲ್ಲಿನ ಭ್ರಷ್ಟಾಚಾರದಿಂದಾಗಿ ರಾಜ್ಯ ಸರ್ಕಾರಗಳಿಗೆ ಸಲ್ಲಬೇಕಾದ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದರು ಎಂಬುದು ತಿಳಿದುಬಂದಿತು. ಹಜಾರೆ ಅವರು ಸರ್ಕಾರಕ್ಕೆ ಪುರಾವೆಗಳನ್ನು ಒದಗಿಸಿದರೂ ಆಳುವ ಪಕ್ಷದ ಒಬ್ಬ ಮಂತ್ರಿಯು ಹಗರಣದಲ್ಲಿ ಭಾಗಿಯಾಗಿದ್ದ ಕಾರಣ ಸರ್ಕಾರವು ಆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ನಿರಾಕರಿಸಿತು. ಇದರಿಂದ ಮನನೊಂದ ಹಜಾರೆ ಅವರು ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಗೆ ಹಿಂದಿರುಗಿಸಿದರು. ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ನೀಡಿದ್ದ ವೃಕ್ಷ ಮಿತ್ರ ಪ್ರಶಸ್ತಿಯನ್ನೂ ಕೂಡ ಹಿಂದಿರುಗಿಸಿದ್ದರು.

ಇದೇ ವಿಷಯದ ಸಲುವಾಗಿ ಅವರು ಆಮರಣಾಂತ ಉಪವಾಸ ಕೈಗೊಂಡರು. ಕೊನೆಗೂ ನಿದ್ದೆಯಿಂದ ಎಚ್ಚೆತ್ತ ಸರ್ಕಾರ ಅಪರಾಧಿಗಳ ವಿರುದ್ಧ ಕ್ರಮ ಕೈಗೊಂಡಿತು. ಛಲ ಬಿಡದ ಹಜಾರೆಯವರ ಈ ಕಾರ್ಯವು ಮಹತ್ತರ ಪರಿಣಾಮ ಬೀರಿತು - ಆರು ಮಂತ್ರಿಗಳು ರಾಜೀನಾಮೆ ಕೊಟ್ಟರು ಮತ್ತು ವಿವಿಧ ಕಛೇರಿಗಳ ನಾನೂರಕ್ಕೂ ಹೆಚ್ಚು ಅಧಿಕಾರಿಗಳು ಮನೆಗೆ ಕಳುಹಿಸಲ್ಪಟ್ಟರು.

ಮಾಹಿತಿ ಹಕ್ಕು ಕಾಯ್ದೆ - 2005 ಕಾರ್ಯಗತವಾದ ಮೇಲೆ ಕಾಯ್ದೆಯ ಬಗ್ಗೆ ಅರಿವು ಮೂಡಿಸುತ್ತಾ ಹಜಾರೆಯವರು ರಾಜ್ಯದಲ್ಲಿ 12,೦೦೦ ಕಿ.ಮೀಗೂ ಹೆಚ್ಚು ದೂರ ಸಂಚರಿಸಿದ್ದಾರೆ. ಎರಡನೇ ಹಂತದಲ್ಲಿ ಇವರು ಒಂದು ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳೊಂದಿಗೆ ಸಂವಹನ ನೆಡೆಸಿದ್ದಾರೆ ಮತ್ತು ರಾಜ್ಯದ 24 ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನೂ ಆಯೋಜಿಸಿದ್ದಾರೆ. ಮೂರನೇ ಹಂತವು ಪ್ರತಿದಿನ 2-3 ಸಾರ್ವಜನಿಕ ಸಭೆಗಳನ್ನು ಒಳಗೊಂಡಿತ್ತು. ಈ ಮಹಾಚಳವಳಿಯಲ್ಲಿ ಭಿತ್ತಿಪತ್ರಗಳು ಪ್ರದರ್ಶನಗೊಂಡವು ಮತ್ತು ಕಾಯ್ದೆಯ ನಿಬಂಧನೆಗಳ ಪುಸ್ತಕಗಳು ಸಾಮಾನ್ಯ ದರದಲ್ಲಿ ವಿತರಿಸಲಾಯಿತು. ಇದು ಸಾಕಷ್ಟು ಜಾಗೃತಿಯನ್ನುಂಟುಮಾಡಿತು ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಜನರು ತಿಳಿದುಕೊಂಡರು.

webdunia
PTI
ಲೋಕಪಾಲ ಮಸೂದೆ ಆಂದೋಲನ 2010ರಲ್ಲಿ ಅಣ್ಣಾ ಹಜಾರೆಯವರು ಭಾರತದ ಸಂಸತ್ತಿನಲ್ಲಿ ಪ್ರಬಲವಾದ ಭ್ರಷ್ಟಾಚಾರ-ವಿರೋಧಿ ಲೋಕಪಾಲ (ಲೋಕಾಯುಕ್ತ) ಮಸೂದೆ ಮಂಡನೆಗೆ ಆಂದೋಲನದ ನಾಯಕತ್ವ ವಹಿಸಿದರು. ಈ ಆಂದೋಲನದ ಭಾಗವಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳು ಮತ್ತು ಕರ್ನಾಟಕದ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾಧಿಗಳಾದ ಪ್ರಶಾಂತ್ ಭೂಷಣ್, ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದ ಸದಸ್ಯರೊಂದಿಗೆ ಹೆಚ್ಚು ಕಟ್ಟುನಿಟ್ಟಾದ ನಿಬಂಧನೆಗಳು ಮತ್ತು ಲೋಕಪಾಲರಿಗೆ ಹೆಚ್ಚಿನ ಅಧಿಕಾರ ನೀಡುವ ಜನ ಲೋಕಪಾಲ ಮಸೂದೆ (ಜನರ ಲೋಕಪಾಲ ಮಸೂದೆ) ಎಂಬ ಪರ್ಯಾಯ ಮಸೂದೆಯ ಕರಡನ್ನು ಸಿದ್ದಪಡಿಸಿದರು. ಸರ್ಕಾರ ಮತ್ತು ಸಾರ್ವಜನಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿಯನ್ನು ರಚಿಸುವ ಬೇಡಿಕೆಯನ್ನು ಭಾರತದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್‌ರವರು ತಿರಸ್ಕರಿಸಿದ ನಂತರ 5 ಏಪ್ರಿಲ್ 2010 ರಿಂದ ಬೇಡಿಕೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಕೈಗೊಂಡಿದ್ದರು.

ಮಾಧ್ಯಮಗಳ ಮೂಲಕ ಆಂದೋಲನವು ಬಹುಬೇಗ ಗಮನ ಸೆಳೆಯಿತು. ಸಾವಿರಾರು ಜನರು ಹಜಾರೆಯವರ ಕಾರ್ಯಕ್ಕೆ ಬೆಂಬಲ ನೀಡಲು ಕೈಜೋಡಿಸಿದ್ದರು.

ನಾಗರಿಕ ಸಮಾಜದ ಹೆಸರಿನಲ್ಲಿ ಇನ್ನು ಮುಂದೆ ಇನ್ನು ಯಾರೋ ಜನಸಂಘಟನೆ ಮಾಡಿ ತಮ್ಮ ಕಾರ್ಯಕ್ರಮವನ್ನು ಒಪ್ಪಿಕೊಳ್ಳಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದರೆ ಏನು ಮಾಡುವುದು? ಹಾಗಾಗಿ ಅಣ್ಣಾ ಆಂದೋಲ ಕೆಟ್ಟ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದಂತಾಗುತ್ತದಲ್ಲವೇ? ಎಂಬುದು ಅಣ್ಣ್ಣಾ ಆಂದೋಲನದ ಬಗೆಗೆ ಎತ್ತಲಾಗುತ್ತಿರುವ ಇನ್ನೊಂದು ತಕರಾರು.

ಪ್ರಜಾಪ್ರಭುತ್ವದಲ್ಲಿ ಯಾರೇ ಆಗಲೀ, ಯಾವುದೇ ಹೆಸರಿನಲ್ಲಿ ಜನಸಂಘಟನೆ ಮಾಡಿ ಕಾರ್ಯಕ್ರಮವೊಂದನ್ನು ಮುಂದಿಡುವುದು ಪ್ರಜಾಪ್ರಭುತ್ವದ ಜೀವಂತಿಕೆಯ ಲಕ್ಷಣ. ಅದನ್ನು ಕೆಟ್ಟ ಸಂಪ್ರದಾಯ ಎಂದು ಪರಿಗಣಿಸುವುದು ಸರ್ವಾಧಿಕಾರಿ ಪ್ರವೃತ್ತಿಯ ಲಕ್ಷಣ. ಯಾರೂ ಸುಮ್ಮ ಸುಮ್ಮನೆ, ಪ್ರಾಮಾಣಿಕ ಸಾಮಾಜಿಕ ಬದ್ಧತೆಯಿಲ್ಲದೆ ಕಾರ್ಯಕ್ರಮ ರೂಪಿಸಿ, ಜನಸಂಘಟನೆ ಮಾಡುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕೋ ಬೇಡವೋ ಎಂಬುದನ್ನು ಸರ್ಕಾರ ಆ ಸಂಘಟನೆಯ ಹಿಂದಿನ ಜನತಾ ಶಕ್ತಿಯ ಸ್ವರೂಪ, ಗಾತ್ರ ಮತ್ತು ಗುಣಾತ್ಮಕತೆಯ ಆಧಾರದ ಮೇಲೆ ನಿರ್ಧರಿಸುವ ವಿವೇಚನೆ ತೋರಬೇಕು. ಇಲ್ಲವಾದರೆ ಮುಂದಿನ ರಾಜಕೀಯ ಪರಿಣಾಮಗಳನ್ನು ಎದುರಿಸಲು ತಯಾರಿರಬೇಕು, ಈಗ ಅಣ್ಣಾ ಆಂದೋಲನದ ವಿಷಯದಲ್ಲಿ ಎದುರಿಸುತ್ತಿರುವಂತೆ! ಇದನ್ನು ನೀವು ಯಾವ ಕಡೆ ಇರುವಿರೋ ಅದಕ್ಕೆ ತಕ್ಕಂತೆ, ಪ್ರಾತಿನಿಧಿಕ ಪ್ರಜಾಪ್ರಭುತ್ವದ ಶಕಿ ಅಥವಾ ದೌರ್ಬಲ್ಯ ಎಂದು ವ್ಯಾಖ್ಯಾನಿಸಬಹುದು!

ಇನ್ನು ಬ್ಲಾಕ್‌ಮೇಲ್ ಆರೋಪ. ಬ್ಲಾಕ್‌ಮೇಲ್ ಮಾಡಲು ಸಾಧ್ಯವಾಗುವುದು, ಅಸಹಾಯಕ ಮತ್ತು ದುರ್ಬಲರನ್ನು ಮಾತ್ರ. ಲಕ್ಷಾಂತರ ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಸದ್ಯದ ಕೇಂದ್ರ ಸರ್ಕಾರ, ಅಷ್ಟಲ್ಲದಿದ್ದರೂ ಸಾಕಷ್ಟು ಭ್ರಷ್ಟವಾಗಿರುವ ವಿರೋಧ ಪಕ್ಷಗಳ ಎದುರಿಗಲ್ಲದಿದ್ದರೂ, ಅಣ್ಣಾ ಆಂದೋಲನದ ಎದುರು ದುರ್ಬಲವಾಗಿದೆ, ಅಸಹಾಯಕವಾಗಿದೆ. ಹಾಗಾಗಿಯೇ ಅದು ಅಣ್ಣಾ ತಂಡವನ್ನು ಕಣ್ಣಲ್ಲಿ ಕಣ್ಣಿಟ್ಟು ಎದುರಿಸಲಾಗದೆ, ಅಡ್ಡದಾರಿ ಹಿಡಿದು ಅಧಿಕಾರ ದುರ್ಬಳಕೆಯ ಅಗ್ಗದ ಮಾರ್ಗಗಳ ಮತ್ತು ಮಾತುಗಳ ಮೂಲಕ ಅವರನ್ನು ಮಣಿಸಲು ಯತ್ನಿಸುತ್ತಿದೆ.

ಮೊದಲು ತಾನೇ ಗೌರವಾರ್ಹ ರೀತಿಯಲ್ಲಿ ಸಂಧಾನಕ್ಕೆ ಆಹ್ವಾನಿಸಿದ ಅಣ್ಣಾರನ್ನು ಸರ್ಕಾರ ಈಗ ತನ್ನ ಪಕ್ಷದ ಬಾಯಿಬಡುಕ ವಕ್ತಾರರ ಮೂಲಕ ವೈಯುಕ್ತಿಕ ನೆಲೆಯಲ್ಲಿ ವಾಚಾಮಗೋಚರವಾಗಿ ನಿಂದಿಸುತ್ತಿದೆ. ಅವರ ತಂಡದ ಸಂಪನ್ಮೂಲಗಳ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡತೊಡಗಿದೆ. ತನ್ನ ವಿರುದ್ಧ ಪ್ರತಿಭಟನೆ ಹೀಗೆ ಮಾತ್ರ ನಡೆಯಬೇಕೆಂದು ಪ್ರಜಾಪ್ರಭುತ್ವದ ಪಾಠಗಳನ್ನು ಹೇಳುತ್ತಿದೆ! ಸತ್ಯಾಗ್ರಹದ ಬಗ್ಗೆ ಅಲ್ಪ ತಿಳುವಳಿಕೆಯುಳ್ಳ ಮಕ್ಕಳ ಮುಂದೆಯೂ ನಗೆಪಾಟಿಲಿಗೆ ಕಾರಣವಾಗುವಂತಹ ಷರತ್ತುಗಳನ್ನು ಅವರ ಉಪವಾಸ ಸತ್ಯಾಗ್ರಹದ ರೀತಿ ನೀತಿಗಳ ಮೇಲೆ ಹಾಕಲು ಯತ್ನಿಸಿದೆ!

Share this Story:

Follow Webdunia kannada