Webdunia - Bharat's app for daily news and videos

Install App

ಶಿರ್ಡಿ ಸಾಯಿಬಾಬಾ ಮಂದಿರ

Webdunia
WD
ಶ್ರೀ ಸಾಯಿಬಾಬಾ ಭಾರತದಲ್ಲೇ ಎಂದೂ ಕಂಡಿರದ ಮಹಾನ್ ಸಂತರಲ್ಲಿ ಒಬ್ಬರೆಂದು ಹೆಸರುಗಳಿಸಿದ್ದು, ಅತ್ಯದ್ಭುತ ಶಕ್ತಿಗಳಿಂದ ಕೂಡಿ ದೇವರ ಅವತಾರ ಎಂದು ಪೂಜಿಸಲ್ಪಡುತ್ತಾರೆ.(ಸಾಯಿ ಎಂದರೆ ಸಾಕ್ಷಾತ್ ಈಶ್ವರ ಎಂದೇ ಅರ್ಥ). ಈ ನಿಗೂಢ ಫಕೀರ ಶಿರ್ದಿಯಲ್ಲಿ ಯುವಕನಾಗಿ ಪ್ರತ್ಯಕ್ಷನಾಗಿ ಜೀವಮಾನವಿಡೀ ಅಲ್ಲೆ ನೆಲೆಸಿದರು.

ಅವರನ್ನು ಭೇಟಿ ಮಾಡಿದ ಭಕ್ತಾದಿಗಳ ಜೀವನವನ್ನೇ ಪರಿವರ್ತಿಸಿದರು. 1918ರಲ್ಲಿ ಅವರು ಸಮಾಧಿಯಾದ ನಂತರವೂ ಅವರ ಪ್ರೀತಿಯಿಂದ ಪುಳಕಿತರಾದ, ಸಂಕಷ್ಟದ ಸಂದರ್ಭದಲ್ಲಿ ಅವರನ್ನು ಪ್ರಾರ್ಥಿಸಿ ಅವರ ಆಶೀರ್ವಾದಕ್ಕಾಗಿ ಹಂಬಲಿಸುವ ಜನರ ಜೀವನಕ್ಕೆ ಬೆಳಕು ನೀಡುವ ಕ್ರಿಯೆ ಮುಂದುವರಿಸಿದರು.

WD
ತಮ್ಮ ಉದ್ದೇಶ ಯಾವುದೇ ಭೇದಭಾವವಿಲ್ಲದೇ ಆಶೀರ್ವಾದ ನೀಡುವುದಾಗಿದೆ ಎಂದು ಬಾಬಾ ಹೇಳಿದ್ದರು. ರೋಗಿಗಳನ್ನು ಗುಣಪಡಿಸುವ, ಜೀವವುಳಿಸುವ, ನಿರ್ಗತಿಕರನ್ನು ರಕ್ಷಿಸುವ, ಅವಘಡಗಳನ್ನು ನಿವಾರಿಸುವ, ಮಕ್ಕಳನ್ನು ಕರುಣಿಸುವ, ಆರ್ಥಿಕ ಲಾಭ ನೀಡುವ, ಜನರಲ್ಲಿ ಪರಸ್ಪರ ಸಾಮರಸ್ಯ ಕಲ್ಪಿಸುವ, ಅಂತಿಮೋಪಾಯವಾಗಿ ತಮಗೆ ಮೊರೆಹೋದವರಿಗೆ ಧಾರ್ಮಿಕ ವಿಕಾಸ ಮತ್ತು ಪರಿವರ್ತನೆ ಉಂಟುಮಾಡುವ ಅನೇಕ ವಿಧಾನಗಳ ಮೂಲಕ ಅವನ್ನು ಬಾಬಾ ರುಜುವಾತು ಮಾಡಿದ್ದರು.

ಬಾಬಾ ಅವರ ಸಮಕಾಲೀನ ಭಕ್ತರೊಬ್ಬರು “ತಮ್ಮ ಪ್ರತಿಯೊಂದು ನುಡಿ ಮತ್ತು ನಡೆಯಿಂದ ಸಾಧಕರ ಮಾರ್ಗಕ್ಕೆ ಬೆಳಕು ತೋರುವ ಮಹಾನ್ ಸಾಕಾರಮೂರ್ತಿ” ಎಂದು ಬಾಬಾರನ್ನು ಬಣ್ಣಿಸಿದ್ದರು. ಅವರ ಭಕ್ತರಿಗೆ ಬಾಬಾ ದೇವರ ಅಪರಾವತಾರ. ಅದೊಂದು ಕಾಲ್ಪನಿಕವಲ್ಲದ ಅನುಭವದ ವಿಷಯ.

WD
ಶಿರ್ಡಿ ಗ್ರಾಮದ ಹೃದಯಭಾಗದಲ್ಲಿ 200 ಚದರ ಮೀ. ವಿಸ್ತೀರ್ಣದಲ್ಲಿರುವ ಶ್ರೀಸಾಯಿಬಾಬಾ ದೇವಸ್ಥಾನ ವಿಶ್ವಾದ್ಯಂತ ಆಗಮಿಸುವ ಭಕ್ತಾದಿಗಳಿಂದ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಸರಾಸರಿ ದಿನನಿತ್ಯ ಶಿರ್ಡಿ ಗ್ರಾಮಕ್ಕೆ 20,000 ಭಕ್ತರು ಶ್ರೀ ಸಾಯಿಬಾಬಾನ ದರ್ಶನಕ್ಕೆ ಭೇಟಿ ನೀಡುತ್ತಾರೆ. ಹಬ್ಬದ ಋತುವಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತಾದಿಗಳು ಮಂದಿರಕ್ಕೆ ಭೇಟಿ ನೀಡುತ್ತಾರೆ. 1998-99ರಲ್ಲಿ ದೇವಸ್ಥಾನ ಆವರಣವನ್ನು ನವೀಕರಣಗೊಳಿಸಲಾಯಿತು. ಈಗ ದರ್ಶನ ಮಾರ್ಗ, ಪ್ರಸಾದ(ಬೋಜನ, ರಾತ್ರಿಯೂಟ), ದಾನದ ಕೌಂಟರ್, ಪ್ರಸಾದದ ಕೌಂಟರ್, ಕ್ಯಾಂಟೀನ್, ರೈಲ್ವೆ ಮೀಸಲು ಕೌಂಟರ್, ಪುಸ್ತಕದ ಮಳಿಗೆ ಮುಂತಾದ ಸೌಲಭ್ಯಗಳಿಂದ ಸಜ್ಜುಗೊಂಡಿದೆ. ಯಾತ್ರಿಕರಿಗೆ ಸಾಯಿಬಾಬ ಸಂಸ್ಥಾನವು ವಸತಿ ಸೌಲಭ್ಯಗಳನ್ನು ಕೂಡ ಒದಗಿಸುತ್ತದೆ.


ತಲುಪುವುದು ಹೇಗೆ:

ಬಸ್ ಸೌಕರ್ಯ

ಮುಂಬೈನಿಂದ 161 ಕಿಮೀ, ಪುಣೆಯಿಂದ 100 ಕಿಮೀ, ಹೈದರಾಬಾದ್ 360 ಕಿಮೀ, ಮನ್ಮಾಡ್ 29 ಕಿಮೀ, ಔರಂಗಾಬಾದ್ 66, ಭೋಪಾಲ್ 277 ಕಿಮೀ ಮತ್ತು ಬರೋಡದಿಂದ 202 ಕಿಮೀ ದೂರವಿರುವ ಶಿರ್ಡಿಗೆ ನೇರಬಸ್ ಸೌಕರ್ಯವಿದೆ.

ರೈಲಿನ ಮೂಲಕ:
ಹತ್ತಿರದ ರೈಲ್ವೆ ನಿಲ್ದಾಣವು ಮನ್ಮಾಡ್ ಆಗಿದ್ದು, ಕೇಂದ್ರ ರೈಲ್ವೆಯ ಮನ್ಮಾಡ್-ದಾಂಡ್ ವಿಭಾಗದಲ್ಲಿದೆ. ಮುಂಬೈ, ಪುಣೆ, ದೆಹಲಿ, ವಾಸ್ಕೊನಿಂದ ಮನ್ಮಾಡ್ ರೈಲು ಸೌಲಭ್ಯವಿದೆ.

ವಿಮಾನದ ಮೂಲಕ:

ಮುಂಬೈ ಮತ್ತು ಪುಣೆ ಹತ್ತಿರದ ವಿಮಾನ ನಿಲ್ದಾಣಗಳು.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

Show comments