Webdunia - Bharat's app for daily news and videos

Install App

ಮೋಹಟೆಯ ಶ್ರೀ ಜಗದಾಂಬಾ ಮಾತೆ

Webdunia
ದೀಪಕ್ ಖಂಡಗ್ಲೆ
WD
ಇದು ಮಹಾರಾಷ್ಟ್ರದ ಮೋಹಟೆ ಎಂಬಲ್ಲಿರುವ ಶ್ರೀ ಜಗದಾಂಬಾ ಮಂದಿರ. ಅಹಮದ್‌ನಗರ ಜಿಲ್ಲೆಯಲ್ಲಿರುವ ಈ ಕ್ಷೇತ್ರವು ಮಹಾರಾಷ್ಟ್ರದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಭಕ್ತಿ ಮತ್ತು ನಂಬುಗೆಯ ಅಗರವಾಗಿರುವ ಈ ಕ್ಷೇತ್ರಕ್ಕೆ ಭೇಟಿನೀಡಿದ ಪ್ರತಿಯೊಬ್ಬರ ಇಚ್ಛೆಯನ್ನೂ ಮಾತೆ ಜಗದಂಬೆ ಈ ಈಡೇರಿಸುತ್ತಾಳೆ ಎಂಬುದು ಪ್ರತೀತಿ.

ಈ ಗ್ರಾಮದಲ್ಲಿ ಬನ್ಷಿ ದಹಿಫಲೆ ಎಂಬಾತ ಮಾಹುರ್ಗರ್ ರೇಣುಕಾ ಮಾತೆಯ(ಶಕ್ತಿ ಪೀಠಗಳಲ್ಲೊಂದು) ಅನುಯಾಯಿಯಾಗಿದ್ದರು. ತನ್ನ ಗ್ರಾಮದಲ್ಲಿ ನೆಲೆಸುವಂತೆ ಅವರು
WD
ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದ್ದರು. ತನ್ನ ಭಕ್ತನ ಪ್ರಾರ್ಥನೆಯಿಂದ ಸಂತುಷ್ಟಳಾದ ದೇವಿಯು ಬನ್ಷಿಯ ಕನಸಿನಲ್ಲಿ ಪ್ರತ್ಯಕ್ಷಳಾಗಿ ಬೆಟ್ಟದ ತುದಿಯಲ್ಲಿ ತನ್ನ ಬರುವಿಕೆಯ ಬಗ್ಗೆ ತಿಳಿಸಿದಳು.

ಅಂದಿನಿಂದ ಜನತೆಯು ತಾಯಿ ಜಗದಂಬೆಯು ಮಹೂರ್ಗರ್ ರೇಣುಕಾ ಮಾತೆಯ ಅವತಾರ ಎಂದು ತಿಳಿದಿದ್ದಾರೆ. ಈ ದಿವ್ಯಸನ್ನಿಧಿಗೆ ಗುರು ವೃದೇಶ್ವರ, ಗುರು ಮಚ್ಚೇಂದ್ರ ನಾಥ, ಗುರು ಕನ್ನಿಫನಾಥ್, ಗುರು ಗಹಿನಾಥ್, ಗುರು ಜಾಲಿಂದರ್ ನಾಥ್ ಮತ್ತು ಗುರು ನಾಗ್‌ನಾಥ್ ಮುಂತಾದ ಸಂತರು ಭೇಟಿ ನೀಡಿದ್ದಾರೆ.

WD
ಇಲ್ಲಿ ದೇವಿಯು ಅಶ್ವಿಜ ಶುದ್ಧ ಏಕಾದಶಿ(ಹಿಂದೂ ಕ್ಯಾಲೆಂಡರಿನ 11ನೆ ದಿನ) ಯಂದು ಅವತರಿಸಿರುವ ಕಾರಣ ಆ ದಿನದಂದು ಇಲ್ಲಿ ಉತ್ಸವ ನಡೆಯುತ್ತದೆ. ಮಂದಿರದಲ್ಲಿ ದೇವಿಯ ಮುಖವು ಮಹೂರ್ಗರ್ ನತ್ತ ತಿರುಗಿದೆ. ಈ ದೇವಾಲಯದ ಬಳಿ ಶಿವದೇವಾಲಯ ಮತ್ತು ಒಂದು ಪ್ರಾಚೀನ ಕೊಳವಿದೆ. ತಮ್ಮೆಲ್ಲ ವ್ಯಾಧಿಗಳ ಪರಿಹಾರಕ್ಕಾಗಿ ಭಕ್ತರು ಈ ಕೊಳದಲ್ಲಿ ಮೀಯುತ್ತಾರೆ. ಈ ಮಂದಿರಕ್ಕೆ ಭೇಟಿ ನೀಡಿದ ಪ್ರತಿ ಭಕ್ತರೂ, ಮಾತಾ ಜಗದಂಬೆಯ ಪವಾಡಗಳನ್ನು ಕೊಂಡಾಡುತ್ತಾರೆ.

ಈ ಮಂದಿರದ ಕುರಿತು ಒಂದು ಪ್ರಸಿದ್ಧ ಘಟನೆ ಜನಜನಿತವಾಗಿದೆ. ಒಮ್ಮೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಈ ಹಳ್ಳಿಯಲ್ಲಿ ಅಣೆಕಟ್ಟೊಂದರ ಉದ್ಘಾಟನೆಗಾಗಿಗಿ ಬಂದಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕನಸಿನಲ್ಲಿ ದೇವತೆ ಕಾಣಿಸಿಕೊಂಡಿದ್ದಳಂತೆ. ಇದರ ಮರುದಿನ ಮುಂಜಾನೆ ಅವರು ಮಂದಿರಕ್ಕೆ ಭೇಟಿ ನೀಡಿದ್ದು, ದೇವಾಲಯಕ್ಕೆ ಭಕ್ತರು ಸುಲಭವಾಗಿ ತೆರಳಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ನಿರ್ಮಿಸಲು ಸ್ಥಳಿಯಾಡಳಿತಕ್ಕೆ ತಿಳಿಸಿದರು.
WD


ದೇವಾಲಯದ ಜೀರ್ಣೋದ್ಧಾರಕ್ಕಾಗಿ, ಹೊಸ ಯೋಜನೆಯನ್ನು ವಿನ್ಯಾಸಗೊಳಿಸಿರುವುದಾಗಿ ದೇವಾಲಯದ ಟ್ರಸ್ಟಿಗಳಲ್ಲೊಬ್ಬರಾದ ಸುರೇಶ್ ಬಾಲಚಂದ್ರ ಅವರು ನಮ್ಮ ತಂಡಕ್ಕೆ ತಿಳಿಸಿದರು. ಜೀರ್ಣೋದ್ಧಾರದ ವೆಚ್ಚ ಸುಮಾರು 15 ಕೋಟಿ ಎಂಬುದಾಗಿ ಅಂದಾಜಿಸಲಾಗಿದೆ. ದೇವಾಲಯದ ಸುತ್ತಮುತ್ತ ಸುಮಾರು 20 ಸಾವಿರ ಔಷಧೀಯ ಗಿಡಮೂಲಿಕೆಗಳು ಮತ್ತು ಇತರ ಸಸಿಗಳನ್ನು ಬೆಳೆಸಲಾಗಿದೆ.

ಈ ಕಾರಣಿಕ ದೇವಾಲಯಕ್ಕೆ ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಿ ಮಾತೆ ಜಗದಾಂಬೆಯ ದರ್ಶನದಿಂದ ಪಾವನರಾಗುತ್ತಾರೆ.

ಇಲ್ಲಿಗೆ ತಲುಪಲು:
ರಸ್ತೆಯ ಮೂಲಕ: ಮೋಹಟೆಯ ಅಹ್ಮದ್ ನಗರದಿಂದ ಪಟಾರ್ಡಿ ಮೂಲಕವಾಗಿ 70 ಕಿಲೋ ಮೀಟರ್ ದೂರವಿದೆ.

ರೈಲು ಮುಖಾಂತರ: ರಾಷ್ಟ್ರದ ಎಲ್ಲಾ ಭಾಗಗಳಿಂದಲೂ ಅಹ್ಮದ್ ನಗರಕ್ಕೆ ರೈಲು ಸಂಪರ್ಕವಿದೆ.

ವಾಯುಯಾನ: ಪೂನಾ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ. ಪೂನಾವು ಅಹ್ಮದ್ ನಗರದಿಂದ 180 ಕಿಮೀ ದೂರದಲ್ಲಿದೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

Show comments