Webdunia - Bharat's app for daily news and videos

Install App

ಮಾಂತ್ರಿಕ ಶಕ್ತಿಯ ಉಲ್ಟಾಹನುಮಾನ್‌

Webdunia
WD
ಈ ಬಾರಿ ಧಾರ್ಮಿಕ ಯಾತ್ರೆಯಲ್ಲಿ ನಾವು ನಿಮ್ಮನ್ನು ಕರೆದೊಯ್ಯುತ್ತಿರುವುದು ಐತಿಹಾಸಿಕ ನಗರ ಉಜ್ಜಯಿನಿಯಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಸಾನ್ವೀರ್‌ನಲ್ಲಿ ನೆಲೆಸಿರುವ ಉಲ್ಟಾ ಹನುಮಾನ್ ಮಂದಿರಕ್ಕೆ. ಇಲ್ಲಿನ ವಿಶೇಷ ಆಕರ್ಷಣೆ ತಲೆಕೆಳಗಾಗಿರುವ ಹನುಮಂತ ದೇವರ ವಿಗ್ರಹ. ಆದ್ದರಿಂದಲೇ ಇದು ಉಲ್ಟಾ ಹನುಮಾನ್ ಮಂದಿರವೆಂದು ಖ್ಯಾತ. ಈ ವಿಗ್ರಹ ಹನುಮಂತನ ಮುಖವನ್ನು ಮಾತ್ರ ಹೊಂದಿದೆ.
WD


ಈ ದೇವಾಲಯವು ಬಹಳ ಪ್ರಾಚೀನವಾದುದು ಎನ್ನುವ ಗ್ರಾಮದ ನಿವಾಸಿಗಳು ಹಿನ್ನೆಲೆಯಾಗಿ ರಾಮಾಯಣದ ಕಾಲದ ಕಥೆಯೊಂದನ್ನು ಬಿಚ್ಚಿಡುತ್ತಾರೆ, ಅಹಿರಾವಣನು ರಾಮ, ಲಕ್ಷ್ಮಣರನ್ನು ಅಪಹರಿಸಿ ಪಾತಾಳಲೋಕಕ್ಕೆ ಕೊಂಡೊಯ್ದಾಗ ಹನುಮಂತ ದೇವರು ಪಾತಾಳಕ್ಕೆ ಹೋಗಿ ಅವರ ಪ್ರಾಣ ರಕ್ಷಿಸಿದ್ದು, ಜನರ ನಂಬಿಕೆಯಂತೆ ಈ ಪ್ರದೇಶದಿಂದಲೇ ಹನುಮಂತ ದೇವರು ಪಾತಾಳಕ್ಕೆ ಇಳಿದಿದ್ದರು.

ಹನುಮಂತ ದೇವರ ವಿಗ್ರಹವು ಬಹು ಶಕ್ತಿಶಾಲಿ ಎಂಬುದು ಪ್ರತೀತಿ. ಈ ದೇವಾಲಯದ ಬಳಿ ಹಲವಾರು ಸಂತರ ಮಂದಿರಗಳು ಅಸ್ತಿತ್ವದಲ್ಲಿವೆ. ಈ ಮಂದಿರಗಳು 1200 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿವೆ ಎಂದು ತಿಳಿದು ಬಂದಿದೆ.

WD
ಹನುಮಾನ್ ದೇವಾಲಯದ ಆವರಣದಲ್ಲಿ ಅಶ್ವತ್ಥ, ಆಲ, ಬೇವು, ಪಾರಿಜಾತ ಮತ್ತು ತುಳಸಿಯ ಮರಗಳು ಇವೆ. ಪ್ರಾಚೀನ ಕಥೆಗಳ ಪ್ರಕಾರ ಹನುಮಂತ ದೇವರು ಈ ಮರಗಳಲ್ಲಿ ವಾಸವಾಗಿದ್ದಾರೆ. ಪಾರಿಜಾತ ಮರದಲ್ಲಿ ಬಹಳಷ್ಟು ಗಿಳಿಗಳು ವಾಸವಾಗಿವೆ. ದಂತಕಥೆಗಳ ಪ್ರಕಾರ ಗಿಳಿಯು ಬ್ರಾಹ್ಮಣನ ಅವತಾರ ತಾಳುತ್ತದೆ. ಹನುಮ ದೇವರು ಕೂಡ ಗಿಳಿ ರೂಪ ತಾಳಿದ್ದು ಈ ಮೂಲಕವಾಗಿ ತುಳಸಿದಾಸರಿಗೆ ಶ್ರೀರಾಮನ ದರ್ಶನ ಸಾಧ್ಯವಾಯಿತು ಎನ್ನಲಾಗುತ್ತಿದೆ.

ದೇವಾಲಯದ ಪ್ರಾಕಾರದಲ್ಲಿ ರಾಮ, ಸೀತಾ, ಲಕ್ಷ್ಮಣ ಶಿವ ಪಾರ್ವತಿಯರ ಮೂರ್ತಿಗಳಿವೆ. ಹನುಮಾನ್ ವಿಗ್ರಹದ ಮೇಲೆ ಪ್ರತಿ ಮಂಗಳವಾರ ಕೇಸರಿ ಕುಂಕುಮ ಲೇಪಿಸಲಾಗುತ್ತದೆ. ಮೂರರಿಂದ ನಾಲ್ಕು ವಾರಗಳವರೆಗೆ ದೇವಾಲಯಕ್ಕೆ ನಿರಂತರ ಭೇಟಿ ನೀಡಿದರೆ ತಮ್ಮ ಅಪೇಕ್ಷೆಗಳು ಈಡೇರುತ್ತವೆ ಎಂಬುದು ಜನರ ನಂಬಿಕೆ.
WD


ಹನುಮಂತ ದೇವರ ಮೇಲಿರುವ ಅಚಲ ನಂಬಿಕೆಯು ಭಕ್ತಾದಿಗಳನ್ನು ಉಲ್ಟಾ ಮಂದಿರದೆಡೆಗೆ ಸೆಳೆಯುತ್ತಿದೆ.

ಹೋಗುವುದು ಹೇಗೆ:
ರಸ್ತೆ ಮಾರ್ಗ: ಉಜ್ಜಯಿನಿ(15ಕಿ.ಮೀ.) ,ಇಂದೋರ್(30ಕಿ.ಮೀ.)ಗಳಿಂದ ಬಸ್ ಅಥವಾ ಟಾಕ್ಸಿ ಮೂಲಕ ತಲುಪಬಹುದು.
ವಾಯು ಮಾರ್ಗ: ಹತ್ತಿರದ ವಿಮಾನ ನಿಲ್ದಾಣ ಇಂದೋರ್‌.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ನಟ ದರ್ಶನ್ ಭೇಟಿ ಕೊಟ್ಟಿರುವ ಕೊಟ್ಟಿಯೂರು ಶಿವ ದೇವಾಲಯ ಎಲ್ಲಿದೆ, ವಿಶೇಷತೆ ಏನು ಗೊತ್ತಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Show comments