Webdunia - Bharat's app for daily news and videos

Install App

ಭೋಪಾವರದ ಶಾಂತಿನಾಥ ಮಂದಿರ

Webdunia
ಗಾಯತ್ರಿ ಶರ್ಮ ಾ

ಪ್ರಸಿದ್ಧ ಜೈನ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಭೋಪಾವರದ ಶ್ರೀ ಶಾಂತಿನಾಥಜಿ ಮಂದಿರವು ಇಂದೋರ್-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಜಗಢದಿಂದ 12 ಕಿ.ಮೀ. ದೂರದಲ್ಲಿದೆ. 16ನೇ ಜೈನ ತೀರ್ಥಂಕರರಾದ ಶಾಂತಿನಾಥಜಿ ಅವರ 12 ಅಡಿ ಎತ್ತರದ ವಿಗ್ರಹವು 87 ಸಾವಿರ ವರ್ಷಗಳಷ್ಟು ಪುರಾತನವಾದುದು ಎನ್ನಲಾಗುತ್ತಿದೆ.

ಈ ಮಂದಿರದ ಇತಿಹಾಸ ಮತ್ತು ನಿಗೂಢತೆಗಳ ಕುರಿತಾಗಿ ಸಾಕಷ್ಟು ದಂತಕಥೆಗಳಿವೆ. ಶ್ರೀಕೃಷ್ಣನ ಪತ್ನಿ ರುಕ್ಮಿಣಿಯ ಸಹೋದರ ರುಕ್ಮ ಕುಮಾರನು ಭೋಪಾವರ ಪಟ್ಟಣವನ್ನು ಕಟ್ಟಿಸಿದ ಎಂದು ಹೇಳಲಾಗುತ್ತಿದೆ. ಅಂದು ರುಕ್ಮನ ತಂದೆ ಭೀಷ್ಮಕನು ಇಲ್ಲಿಗೆ 17 ಕಿ.ಮೀ. ದೂರದಲ್ಲಿರುವ ಅಮಿಜರ ಪಟ್ಟಣವನ್ನು ಆಳುತ್ತಿದ್ದ ಎಂಬ ಪ್ರತೀತಿ ಇದೆ.

WD
ರುಕ್ಮನು ತನ್ನ ತಂಗಿಯನ್ನು ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಿಸಬೇಕೆಂಬ ಆಕಾಂಕ್ಷೆ ಹೊಂದಿದ್ದ. ಆದರೆ, ರುಕ್ಮಿಣಿಯು ಶ್ರೀಕೃಷ್ಣನಲ್ಲಿ ಅನುರಕ್ತಳಾಗಿದ್ದಳು. ರುಕ್ಮಿಣಿಯ ಸಂದೇಶದಿಂದಾಗಿ ಶ್ರೀಕೃಷ್ಣನು ತನ್ನ ರಥದಲ್ಲಿ ಆಗಮಿಸಿ ರುಕ್ಮಿಣಿಯನ್ನು ಅಪಹರಿಸಿ ಒಯ್ದನು. ಆದರೆ ರುಕ್ಮ ಪ್ರತಿರೋಧ ತೋರಿದನು. ಯುದ್ಧ ಸಂಭವಿಸಿತು. ರುಕ್ಮ ಸೋತು ಓಡಿದನು. ಅವಮಾನಗೊಂಡ ರುಕ್ಮ ತನ್ನ ರಾಜ್ಯ ತೊರೆದು ಭೋಪಾವರ ಎಂಬ ಪಟ್ಟಣವನ್ನು ನಿರ್ಮಿಸಿ, ಅಲ್ಲೇ ನೆಲಸಿದನು. ಭೋಪಾವರದಲ್ಲಿ ಶಾಂತಿನಾಥ ತೀರ್ಥಕರರ ವಿಗ್ರಹ ಸಂಸ್ಥಾಪಿಸಿದ್ದು ರುಕ್ಮ ಎಂಬ ನಂಬಿಕೆಯೂ ಇದೆ.

ಭೋಪಾವರದ ಐತಿಹಾಸಿಕ ವಿಶೇ ಷ

ಶ್ರೀಕೃಷ್ಣನ ತಾಯ್ನಾಡು ಮಥುರಾದಲ್ಲಿರುವ ಜೈನ ಸ್ತೂಪಗಳಲ್ಲಿರುವ ಶಿಲಾಶಾಸನಗಳಲ್ಲಿ, ಶ್ರೀಕೃಷ್ಣನ ಯುಗದಲ್ಲಿ ಕೆತ್ತಿಸಲಾದ ವಿಗ್ರಹಗಳ ವಿವರಣೆಗಳಿವೆ. ಅದರಲ್ಲಿ ಭೋಪಾವರದ ಶಾಂತಿನಾಥ ತೀರ್ಥಂಕರ ವಿಗ್ರಹದ ಹೆಸರನ್ನೂ ಉಲ್ಲೇಖಿಸಲಾಗಿದೆ.

ಪವಾಡಮಯ ವಿಗ್ರ ಹ

WD
ಈ ವಿಗ್ರಹದ ಪವಾಡಮಯ ಶಕ್ತಿಯ ಬಗ್ಗೆ ಸಾಕಷ್ಟು ಕಥೆಗಳಿವೆ. ಇವೆಲ್ಲ ಕಥೆಗಳು ಶಾಂತಿನಾಥನ ಮೇಲೆ ಭಕ್ತರ ನಂಬಿಕೆ ಬಲಗೊಳ್ಳಲು ಕಾರಣವಾಗಿವೆ. ಭಕ್ತರು ಹೇಳುವಂತೆ, ವಿಗ್ರಹದ ತಲೆಯಿಂದ ಜೇನು ಹರಿದುಬರುತ್ತಿರುವುದನ್ನು ಅವರು ಕಣ್ಣಾರೆ ಕಂಡಿದ್ದಾರಂತೆ. ಈ ಪರಿಸರದಲ್ಲಿ ಹಲವು ಬಾರಿ ಶ್ವೇತ ವರ್ಣದ ನಾಗನನ್ನು ಅವರು ಕಂಡಿದ್ದಾರಂತೆ. ಕೆಲವೊಮ್ಮೆ, ಗರ್ಭ ಗುಡಿಯು ಹಾಲಿನಿಂದ ತುಂಬಿ ಹೋಗಿರುತ್ತದೆ ಎಂದೂ ಹೇಳುವವರಿದ್ದಾರೆ.

ಪ್ರತಿವರ್ಷ ಕನಿಷ್ಠ ಒಂದು ನಾಗರ ಹಾವು ತನ್ನ ಚರ್ಮವನ್ನು ಇಲ್ಲಿ ತೊರೆಯುತ್ತದೆ. ಈ ಹಾವಿನ ಒಣಗಿದ ಚರ್ಮಗಳನ್ನು ಮಂದಿರದಲ್ಲಿ ಕಾಯ್ದಿಡಲಾಗಿದೆ.

ಹೋಗುವುದು ಹೇಗೆ?

ರಸ್ತೆ ಮಾರ್ಗ: ಭೋಪಾವರವು ಮಧ್ಯಪ್ರದೇಶದ ಇಂದೋರ್‌ನಿಂದ 107 ಕಿ.ಮೀ. ದೂರದಲ್ಲಿದೆ. ಬಸ್ಸು ಮತ್ತು ಖಾಸಗಿ ವಾಹನ ಸೌಲಭ್ಯ ಸಾಕಷ್ಟಿದೆ.

ರೈಲು ಮಾರ್ಗ: ಸಮೀಪದ ರೈಲು ನಿಲ್ದಾಣವೆಂದರೆ 77 ಕಿ.ಮೀ. ದೂರದಲ್ಲಿರುವ ಮೇಘನಗರ.

ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣ, ಇಂದೋರಿನ ದೇವಿ ಅಹಿಲ್ಯಾ ವಿಮಾನ ನಿಲ್ದಾಣ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

Vaikunta Ekadashi: ವೈಕುಂಠ ಏಕಾದಶಿ ಮುಹೂರ್ತ, ಪೂಜಾ ಸಮಯ ವಿವರ ಇಲ್ಲಿದೆ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

Show comments