ಧಾರ್ಮಿಕ ಯಾತ್ರೆ ಸರಣಿಯಲ್ಲಿ ನಾವು ನಿಮ್ಮನ್ನು ಗೋವಾದ ಪ್ರಸಿದ್ದ ಚರ್ಚ್‌ಗೆ ಕರೆದುಕೊಂಡು ಹೋಗುತ್ತಿದ್ದೇವೆ. ಗೋವಾ ರಾಜಧಾನಿ ಪಣಜಿಯಿಂದ 10 ಕಿ.ಮಿ. ದೂರದಲ್ಲಿರುವ ಹಳೆಯ ಗೋವಾದಲ್ಲಿ ಬೆಸಿಲಿಕಾ ಬೊಮ್ ಜೀಸಸ್ ಚರ್ಚ್ ಸ್ಥಾಪಿತವಾಗಿದೆ. ಬೊಮ್ ಜೀಸಸ್ ಚರ್ಚ್ ಪೂಜ್ಯ ಅವಶೇಷಗಳಿಂದ ಹಾಗೂ ಸೇಂಟ್ ಫ್ರಾನ್ಸಿಸ್ ಝೇವಿಯರ್ ಮೃತದೇಹದ ಪೆಟ್ಟಿಗೆಯಿಂದಾಗಿ ಪ್ರಸಿದ್ದಿಯನ್ನು ಪಡೆದಿದ್ದು, ವಿಶ್ವಪರಂಪರೆ ಸ್ಮಾರಕ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಗೊಂಡಿದೆ.
ಬೊಮ್ ಜೀಸಸ್ ಅಂದರೆ ಒಳ್ಳೆಯ ಅಥವಾ ಹಸುಳೆ ಜೀಸಸ್ ಎಂದರ್ಥ. ಬೆಸಿಲಿಕಾ ಬೊಮ್ ಜೀಸಸ್ ಚರ್ಚ್ 1594 ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ 1605ರಲ್ಲಿ ಮುಕ್ತಾಯಗೊಂಡಿತು. ಬೊಮ್ ಜೀಸಸ್ ಚರ್ಚ್ ಮೂರು ಅಂತಸ್ತಿನ ಕಟ್ಟಡವನ್ನು ಹೊಂದಿದ್ದು, ಮುಖ್ಯದ್ವಾರದ ಪಕ್ಕದಲ್ಲಿ ಎರಡು ಚಿಕ್ಕ ದ್ವಾರಗಳನ್ನು ನಿರ್ಮಿಸಲಾಗಿದೆ. ಗ್ರೀಕ್ ಭಾಷೆಯಲ್ಲಿ ಜೀಸಸ್ ಸಂಕೇತವನ್ನು ತೋರುವ 'ಐಎಚ್‌ಎಸ್ 'ನ್ನು ದ್ವಾರದ ಮೇಲ್ಬಾಗದಲ್ಲಿ ಬರೆಯಲಾಗಿದೆ.
WD
ಚರ್ಚ್‌ನ ಮಹಾದ್ವಾರವನ್ನು ಪ್ರವೇಸಿಸಿದ ಕೂಡಲೇ ಬಲಗಡೆ ಸೆಂಟ್ ಅಂಥೋನಿಯವರ ಪವಿತ್ರ ಪೀಠವಿದ್ದು,ಬಲಗಡೆ ಸೆಂಟ್ ಫ್ರಾನ್ಸಿಸ್ ಝೆವಿಯರ್ ಅವರ ಮರದ ಪ್ರತಿಮೆಯಿದೆ. ಲೇಡಿ ಆಫ್ ಹೋಪ್ ಮತ್ತು ಸೆಂಟ್ ಮೈಕಲ್ ಮುಖ್ಯವಾದ ಪವಿತ್ರ ಪೀಠ ನಿರ್ಮಿಸಲಾಗಿದೆ. ಇನ್‌ಫಾಂಟ್ ಜೀಸಸ್ ಮುಖ್ಯ ಪೀಠವನ್ನು ವೈಭವವಾಗಿ ಶ್ರೀಮಂತಿಕೆಯಿಂದ ಸಿಂಗರಿಸಲಾಗಿದೆ. ಮೇಲ್ಬಾಗದಲ್ಲಿ ಸೆಂಟ್ ಇಗ್ನಿಶಿಯಸ್ ಲೊಯೊಲಾ ಮತ್ತು ಐಎಚ್‌ಎಸ್ ಮೆಡಾಲ್ಲಿಯೊನ್ ಅವರ ಬೃಹತ್ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ.
WD
ಮೆಡಿಲ್ಲಿಯೊನ್ ಮೇಲ್ಬಾಗದಲ್ಲಿ ತ್ರಿಮೂರ್ತಿ ದೇವತೆಗಳಾದ ತಂದೆ , ಮಗ ಮತ್ತು ಅತಿಮಾನುಷ ಚೇತನದ ಮೂರ್ತಿಗಳನ್ನು ಚಿತ್ರಿಸಲಾಗಿದೆ. ಸೇವಾಕಾರ್ಯಗಳು ನಡೆಯುವ ಚರ್ಚಿನ ಎಡಭಾಗದಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲಾಗುತ್ತಿದ್ದು, ಬಲಭಾಗದಲ್ಲಿ ಪೂಜ್ಯ ಸೆಂಟ್ ಝೆವಿಯರ್ ಪೂಜ್ಯ ಅವಶೇಷಗಳನ್ನು ಬೆಳ್ಳಿಯ ಸಣ್ಣಪೆಟ್ಟಿಗೆಯಲ್ಲಿ ಇಡಲಾಗಿದೆ. ಚರ್ಚ್‌ನ ಒಳಭಾಗದಲ್ಲಿ ಸಂತರ ಜೀವನಚರಿತ್ರೆಯನ್ನು ಚಿತ್ರಗಳಲ್ಲಿ ಬರೆದು ಅಲಂಕರಿಸಲಾಗಿದೆ.
1552 ರಲ್ಲಿ ಚೀನಾಗೆ ಸಮುದ್ರಯಾನ ಕೈಗೊಂಡ ಸಂದರ್ಭದಲ್ಲಿ ಸೆಂಟ್ ಝೇವಿಯರ್ ಇಹಲೋಕ ತ್ಯಜಿಸಿದರು. ಝೇವಿಯರ್ ಆಶಯದಂತೆ ಅವರನ್ನು ಗೋವಾದಲ್ಲಿ ಸಮಾಧಿ ಮಾಡಲು ಹೊರಟಾಗ ಅವರ ಮೃತದೇಹವು ತಾಜಾತನದಲ್ಲಿದ್ದು ಬಳಿಕ ಅದನ್ನು ರಕ್ಷಿಸಿಡಲಾಯಿತು . ಅಂದಿನಿಂದ ಇಂದಿನವರೆಗೆ ಮೃತದೇಹ ತಾಜಾತನವನ್ನು ಹೊಂದಿದ್ದು ಅಲೌಕಿಕ ಪವಾಡ ಇಂದಿಗೂ ಮುಂದುವರಿದಿದ್ದು, ಪ್ರತಿ ಹತ್ತು ವರ್ಷಗಳಿಗೊಮ್ಮೆ ಸೆಂಟ್ ಝೇವಿಯರ್ ದೇಹ ಪ್ರದರ್ಶನಕ್ಕೆ ಇಡಲಾಗುತ್ತಿದ್ದು ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
WD
ಪ್ರತಿ ವರ್ಷ ಡಿಸೆಂಬರ್ 3 ರಂದು ಚರ್ಚ್‌ನಲ್ಲಿ ಸೆಂಟ್ ಝೇವಿಯರ್ ಧಾರ್ಮಿಕ ಆಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಕ್ರಿಶ್ಚಿಯನ್ನರ ಪ್ರಮುಖ ಹಬ್ಬವಾಗಿ ಪರಿಗಣಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ದರ್ಶನಕ್ಕಾಗಿ ಆಗಮಿಸುತ್ತಾರೆ
ತಲುಪುವುದು ಹೇಗೆ
ರಸ್ತೆಯ ಮೂಲಕ: ಗೋವಾದ ರಾಜಧಾನಿ ಪಣಜಿಯಿಂದ ಹಳೆಯ ಗೋವಾ 10 ಕಿ.ಮಿ. ದೂರವಿದ್ದು ಬಸ್, ಟ್ಯಾಕ್ಸಿ, ಮತ್ತು ಅಟೋರಿಕ್ಷಾಗಳು ಲಭ್ಯವಿವೆ.
ರೈಲು ಮೂಲಕ: ಕೊಂಕಣ ರೈಲ್ವೆ ಮೂಲಕ ದೇಶದ ಪ್ರಮುಖ ನಗರಗಳಿಗೆ ಗೋವಾ ಸಂಪರ್ಕವಿದೆ. ಮಾರ್ಗೊವಾ ಮತ್ತು ವಾಸ್ಕೊ ಡ ಗಾಮಾ ಗೋವಾದ ಪ್ರಮುಖ ನಿಲ್ದಾಣಗಳಾಗಿವೆ.
ವಿಮಾನದ ಮೂಲಕ: ದೇಶದ ಪ್ರಮುಖ ನಗರಗಳಿಂದ ಸಂಪರ್ಕವಿರುವ ವಾಸ್ಕೊ ಡ ಗಾಮಾದಲ್ಲಿರುವ ದಾಬೊಲಿಮ್ ವಿಮಾನ ನಿಲ್ದಾಣ ಏಕೈಕ ವಿಮಾನ ನಿಲ್ದಾಣವಾಗಿದೆ.