Webdunia - Bharat's app for daily news and videos

Install App

ಪುರಾತನ ಕರ್ಣೆಶ್ವರ್ ಮಂದಿರ

Webdunia
ಅನಿರುದ್ಧ್ ಜೋಷಿ

ಮಾಳ್ವಾ ಪ್ರದೇಶದಲ್ಲಿ ಕೌರವರು ಅನೇಕ ದೇವಾಲಯಗಳನ್ನು ನಿರ್ಮಿಸಿದ್ದು, ನಮ್ಮ ಈ ಬಾರಿಯ ಧಾರ್ಮಿಕ ಯಾತ್ರೆಯ ಸರಣಿಯಲ್ಲಿ ನಿಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇವೆ. ಅದರಲ್ಲಿ ಸೆಂಥಲ್ ನದಿ ದಂಡೆಯ ಮೇಲೆ ನಿರ್ಮಿಸಿದ ಪ್ರಾಚೀನ ಕರ್ಣೆಶ್ವರ್ ಮಂದಿರವು ಕೂಡಾ ಒಂದು. ಕರ್ಣಾವತ್ ಪಟ್ಟಣದ ರಾಜಾ ಕರ್ಣ, ಪಟ್ಟಣವನ್ನು ಬಡವರಿಗೆ, ಅವಶ್ಯಕತೆಯಿರುವವರಿಗೆ ಆರ್ಥಿಕ ಸೇರಿದಂತೆ ಹಲವಾರು ದಾನಗಳನ್ನು ನೀಡುತ್ತಿದ್ದ ಕಾರಣದಿಂದಾಗಿ ಈ ಮಂದಿರಕ್ಕೆ ಕರ್ಣೆಶ್ವರ ಮಂದಿರ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.

ಕರ್ಣ ಕರ್ಣಾವತ್ ಪಟ್ಟಣದ ರಾಜನಾಗಿದ್ದು, ದೊಡ್ಡ ದೈವ ಭಕ್ತನಾಗಿದ್ದನು. ಇಷ್ಟ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ತನ್ನ ಜೀವನವನ್ನು ತ್ಯಾಗ ಮಾಡಿದನು. ಆದರೆ ದೇವರು ಭಕ್ತ ಕರ್ಣನ ದೈವಿಭಕ್ತಿಗೆ ಮೆಚ್ಚಿ ಆತನ ಮೃತದೇಹದ ಮೇಲೆ ಕೆಲ ಜೇನುತುಪ್ಪದ ಹನಿಗಳನ್ನು ಸಿಂಪಡಿಸಿದಾಗ ಮತ್ತೆ ಜೀವ ಮರಳಿ ಬಂದಿತು. ಜೀವದಾನ ಮಾಡಿದ್ದಲ್ಲದೇ ದೇವರು ಭಕ್ತ ಕರ್ಣನಿಗೆ 50ಕೆ.ಜಿ ಬಂಗಾರವನ್ನು ನೀಡಿದ್ದ. ಕರ್ಣನು ದೇವರು ನೀಡಿದ ಬಂಗಾರವನ್ನು ಸಾಮೂಹಿಕವಾಗಿ ಸಾರ್ವಜನಿಕರಿಗೆ ದಾನವಾಗಿ ಹಂಚಿದ್ದ.
WD
ಮಧ್ಯಪ್ರದೇಶದ ನಿಮಾದ್ ಮತ್ತು ಮಾಳ್ವಾ ಪ್ರದೇಶಗಳಲ್ಲಿ ಕೌರವರು ಅನೇಕ ದೇವಾಲಯಗಳನ್ನು ಕಟ್ಟಿಸಿದ್ದರು. ಅದರಲ್ಲಿ ಮಾಮಲೇಶ್ವರದ ಓಂಕಾರೇಶ್ವರ ದೇವಾಲಯ, ಉಜ್ಜಯನಿಯ ಮಹಾಕಾಲೇಶ್ವರ ದೇವಾಲಯ, ನೆಮಾವರ್‌ನ ಸಿದ್ದೇಶ್ವರ, ಬಿಜಾವರ್‌ನ ಬೀಜೇಶ್ವರ ಮತ್ತು ಕರ್ಣಾವತ್‌ನ ಕರ್ಣೆಶ್ವರ ದೇವಾಲಯಗಳು ಮಾತ್ರ ಪ್ರಖ್ಯಾತವಾದವು.

ಮಂದಿರದ ಅರ್ಚಕ ಹೇಮಂತ್ ದುಬೆ ಅವರ ಪ್ರಕಾರ, ಪಾಂಡವರ ಮಾತೆ ಕುಂತಿ, ಮರಳಿನಿಂದ ಮಾಡಿದ ಶಿವಲಿಂಗಕ್ಕೆ ಪೂಜಿಸುತ್ತಿದ್ದಳು. ಇದನ್ನು ನೋಡಿದ ಪಾಂಡವ ಸಹೋದರರು ಮರಳಿನ ಶಿವಲಿಂಗಕ್ಕೆ ಪೂಜೆ ಮಾಡುವ ಕುರಿತಂತೆ ಕಾರಣ ಕೇಳಿದರು. ಆಗ ಕುಂತಿ ಮಾತೆ, ಎಲ್ಲ ದೇವಾಲಯಗಳು ಕೌರವರಿಂದ ನಿರ್ಮಿತವಾಗಿದ್ದರಿಂದ ಅಲ್ಲಿ ಪ್ರಾರ್ಥನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದ್ದಳು. ಇದನ್ನು ಕೇಳಿ ಪಾಂಡವ ಸಹೋದರರು ಕೋಪೋದ್ರಿಕ್ತರಾದರು. ಒಂದೇ ರಾತ್ರಿಯಲ್ಲಿ ಮಾಮಲೇಶ್ವರದ ಓಂಕಾರೇಶ್ವರ ದೇವಾಲಯ, ಉಜ್ಜಯನಿಯ ಮಹಾಕಾಲೇಶ್ವರ ದೇವಾಲಯ, ನೆಮಾವರ್‌ನ ಸಿದ್ದೇಶ್ವರ, ಬಿಜಾವರ್‌ನ ಬೀಜೇಶ್ವರ ಮತ್ತು ಕರ್ಣಾವತ್‌ನ ಕರುಣೇಶ್ವರ ದೇವಾಲಯಗಳ ದಿಕ್ಕನ್ನು ಬದಲಿಸಿದರು ಎಂದು ಪ್ರತೀತಿಯಿದೆ ಎಂದು ಅರ್ಚಕರು ತಿಳಿಸಿದರು.
WD
ಕರ್ಣೆಶ್ವರ ಮಂದಿರದ ನೆಲಮಾಳಿಗೆಯಲ್ಲಿ ಕೆಲ ಸುರಂಗ ಮಾರ್ಗಗಳಿದ್ದು, ಉಜ್ಜೈನಿಯ ಮಹಾಕಾಲೇಶ್ವರ ಮಂದಿರ ಹಾಗೂ ಪವಿತ್ರವಾದ ಸ್ಥಳಗಳಿಗೆ ತೆರಳಬಹುದಾಗಿದೆ. ಆದರೆ ಗ್ರಾಮಸ್ಥರು ಸುರಕ್ಷತೆಗಾಗಿ ಸುರಂಗ ಮಾರ್ಗಗಳನ್ನು ಬಂದ್ ಮಾಡಿದ್ದಾರೆ ಎಂದು ತಿಳಿಸಿದರು.

ಶ್ರಾವಣ ಮಾಸದಲ್ಲಿ ಪೂಜಾ ಕಾರ್ಯಕ್ರಮಗಳು ಮತ್ತು ಕರುಣೇಶ್ವರ ದೇವರ ವಿಗ್ರಹವನ್ನು ಹೊತ್ತು ನಗರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲಾಗುತ್ತದೆ.

ತಲುಪುವುದು ಹೇಗೆ:
WD
ವಿಮಾನದ ಮೂಲಕ: ಕರ್ಣಾವತ್‌ಗೆ ಹತ್ತಿರದ ವಿಮಾನ ನಿಲ್ದಾಣ ಇಂದೋರ್.

ರೈಲು ಮೂಲಕ: ಇಂದೋರ್‌ನಿಂದ 30 ಕಿ.ಮಿ.ದೂರದಲ್ಲಿರುವ ದೇವಾಸ್ ಪಟ್ಟಣಕ್ಕೆ ರೈಲು ಸಂಪರ್ಕವಿದ್ದು,ಅಲ್ಲಿಂದ ಕರ್ನಾವತ್‌ಗೆ ಬಸ್ ಹಾಗೂ ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತೆರಳಬಹುದು.

ರಸ್ತೆಯ ಮೂಲಕ: ದೇವಾಸ್‌ನಿಂದ ಚಾಪ್ರಾಗೆ ತೆರಳಲು ಬಸ್ ಮತ್ತು ಟ್ಯಾಕ್ಸಿಯ ಸೌಲಭ್ಯವಿದೆ. ಕರ್ಣಾವತ್ ಗ್ರಾಮ ಅಲ್ಲಿಂದ ಹತ್ತಿರವಾಗುತ್ತದೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

Show comments