Webdunia - Bharat's app for daily news and videos

Install App

ನಾಂದೇಡ್‌ನ ಅಬಚಲ್‌ನಗರ್ ಸಾಹೀಬ

Webdunia
ಹರದೀಪ್ ಕೌರ್
ಇದು ಸಿಖ್ಖರ ಪರಮ ಪವಿತ್ರ ಐದು ಪೀಠ (ತಖ್ತ್)ಗಳಲ್ಲಿ ಒಂದಾಗಿರುವ ನಾಂದೇಡ್‌ನ ತಖ್ತ್ ಸಚ್‌ಖಂಡ್ ಶ್ರೀ ಹಜೂರ್ ಅಬಚಲ್‌ನಗರ್ ಸಾಹೀಬ. ಇದು ಸಿಖ್ಖರ ಜಗದ್ವಿಖ್ಯಾತ ಪುಣ್ಯ ಕ್ಷೇತ್ರಗಳಲ್ಲೊಂದು. ಸಿಖ್ಖರ ಹತ್ತನೇ ಮತ್ತು ಕೊನೆಯ ಧರ್ಮ ಗುರು, ಗುರು ಗೋವಿಂದ ಸಿಂಗ್ ಅವರು ಈ ಸ್ಥಳದಲ್ಲಿ ದರ್ಬಾರು ನಡೆಸಿ, ಸಭೆ ಏರ್ಪಡಿಸುತ್ತಿದ್ದರು. ತಮ್ಮ ಕುದುರೆ ದಿಲ್‌ಬಾಗ್ ಜೊತೆಗೆ ಗುರು ಗೋವಿಂದ ಸಿಂಗ್ ಅವರು ನಾಂದೇಡ್‌ನಿಂದಲೇ ಸ್ವರ್ಗಾರೋಹಿಯಾದರು ಎಂಬ ಪ್ರತೀತಿ ಇದೆ.

ಗುರುದ್ವಾರವು ಅತ್ಯಂತ ಆಕರ್ಷಕವಾಗಿದೆ ಮತ್ತು ಶಿಲೆ ಹಾಗೂ ಚಿನ್ನದ ಪ್ಲೇಟಿಂಗ್ ಒಡಗೂಡಿದ ಶೈಲಿ ಕೂಡ ಸುಂದರವಾಗಿದೆ. ಗುರು ಗೋವಿಂದ ಸಿಂಗ್‌ಜೀ ಅವರು ಕೊನೆಯುಸಿರೆಳೆದ ಸ್ಥಳದಲ್ಲಿ ಈ ಮಂದಿರವನ್ನು ನಿರ್ಮಿಸಿದ್ದು ಮಹಾರಾಜ ರಣಜಿತ್ ಸಿಂಗ್. ಇದನ್ನು “ಸಚ್‌ಖಂಡ್ ಶ್ರೀ ಹಜೂರ್ ಅಬ್‌ಚಲ್ ನಗರ ಸಾಹೀಬ” ಎಂದು
WD
ಕರೆಯಲಾಗುತ್ತದೆ. ವರ್ಷಪೂರ್ತಿ ಲಕ್ಷಾಂತರ ಭಕ್ತರು ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಇದು ಎರಡು ಮಹಡಿಯ ಕಟ್ಟಡವಾಗಿದ್ದು, ಒಳಭಾಗವು ಅಮೃತಸರದ ವಿಶ್ವವಿಖ್ಯಾತ ಹರಮಂದಿರ ಸಾಹೇಬದಂತೆಯೇ ಕಲಾತ್ಮಕ ಅಲಂಕಾರವನ್ನು ಹೊಂದಿದೆ. ಅಂಗಿತಾ ಸಾಹೀಬ ಎಂದು ಕರೆಯಲಾಗುವ ಒಳಾಂಗಣದ ಗೋಡೆಗಳನ್ನು ಸ್ವರ್ಣಲೇಪನದಿಂದ ಅಲಂಕರಿಸಲಾಗಿದೆ.

WD
ಸಿಖ್ಖರ ಪವಿತ್ರ ಗ್ರಂಥ “ಗುರು ಗ್ರಂಥ ಸಾಹೀಬ”ವನ್ನು ಹಗಲು ಹೊತ್ತಿನಲ್ಲಿ ಮಾತ್ರವೇ ಗರ್ಭಗುಡಿಯ ಮುಂದೆ ಇರಿಸಲಾಗುತ್ತದೆ. ರಾತ್ರಿ ವೇಳೆಯಲ್ಲಿ ಅದನ್ನು ಒಳಗೆ ತಂದು ಶಿಲಾಮಯ ಮಂಟಪದಲ್ಲಿ ಇರಿಸಲಾಗುತ್ತದೆ. ಹಗಲು ಹೊತ್ತಿನಲ್ಲಿ ಅದರೊಂದಿಗೆ ಹಲವಾರು ಪ್ರಾಚೀನ ಆಯುಧಗಳನ್ನು ಇರಿಸಲಾಗುತ್ತದೆ. ಅವುಗಳಲ್ಲಿ ಚಿನ್ನದ ಚಾಕು, ಗನ್, 35 ಬಾಣಗಳುಳ್ಳ ಬತ್ತಳಿಕೆ, ಎರಡು ಬಿಲ್ಲುಗಳು, ಅಮೂಲ್ಯ ಹರಳುಗಳಿಂದ ಕೂಡಿದ ಒಂದು ಉಕ್ಕಿನ ಕವಚ ಮತ್ತು ಐದು ಚಿನ್ನದ ಖಡ್ಗಗಳು ಸೇರಿವೆ. ಇವೆಲ್ಲವನ್ನೂ ಚಿನ್ನದ ಮಂಟಪದಲ್ಲಿ ಇರಿಸಲಾಗುತ್ತದೆ.

ಗುರು ಗೋವಿಂದ ಸಿಂಗ್‌ಜಿ ಅವರು ಇಲ್ಲಿರುವಾಗ ನಾಂದೇಡ್‌ಗೆ ಅಬಚಲ್ (ಅಚಲವಾದ) ನಗರ ಎಂದು ಹೆಸರಿರಿಸಿದ್ದರು. ದೇವರ ಸ್ಥಳದ ಪ್ರತೀಕವಾಗಿ ಸಚ್‌ಖಂಡ್ (ಸತ್ಯದ ಪ್ರದೇಶ) ಎಂಬ ಪದ ಪ್ರಯೋಗಿಸಲಾಯಿತು.

ಗುರುದ್ವಾರ ಸಚ್‌ಖಂಡ್ ಸಾಹೀಬವಲ್ಲದೆ, ನಾಂದೇಡ್ ಪ್ರದೇಶದಲ್ಲಿ ನಗೀನಾ ಘಾಟ್, ಬಂಡಾ ಘಾಟ್, ಸಂಗತ್ ಸಾಹೀಬ, ಬಾವೊಲಿ ಸಾಹೀಬಾ, ಮಾಲ್ ಟೇಕ್ಡಿ, ಶಿಕಾರ್ ಘಾಟ್, ಹೀರಾ ಘಾಟ್ ಮತ್ತು ಮಾತಾ ಸಾಹೀಬ ಕೌರ್ ಇತ್ಯಾದಿ ಗುರುದ್ವಾರಗಳು ಕೂಡ ಇವೆ.

ಇಲ್ಲಿಗೆ ಹೋಗುವುದು ಹೇಗೆ?

ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ನಾಂದೇಡ್, ಅದು ಸಚ್‌ಖಂಡ್‌ನಿಂದ 5 ಕಿ.ಮೀ. ದೂರದಲ್ಲಿದೆ.

ರಸ್ತೆ ಮಾರ್ಗ: ನಾಂದೇಡ್ ಎಲ್ಲ ಪ್ರಮುಖ ಪಟ್ಟಣಗಳಿಂದ ಸಂಪರ್ಕಿತವಾಗಿದೆ. ಔರಂಗಾಬಾದಿನಿಂದ 300 ಕಿ.ಮೀ. ದೂರದಲ್ಲಿದೆ.

ರೈಲು ಮಾರ್ಗ: ಪ್ರಮುಖ ರೈಲು ನಿಲ್ದಾಣಗಳಿಂದ ನಾಂದೇಡ್‌ಗೆ ಸಂಪರ್ಕವಿದೆ. ಅಮೃತಸರದಿಂದ ವಿಶೇಷ ರೈಲಿನ ವ್ಯವಸ್ಥೆಯೂ ಇದೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

Vaikunta Ekadashi: ವೈಕುಂಠ ಏಕಾದಶಿ ಮುಹೂರ್ತ, ಪೂಜಾ ಸಮಯ ವಿವರ ಇಲ್ಲಿದೆ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

Show comments