Webdunia - Bharat's app for daily news and videos

Install App

ಗುಜರಾತಿನ ಅಂಬಾಭವಾನಿ ಮಂದಿರ

ಅಕ್ಷೇಶ್ ಎಸ್.
WD
ಯಾ ದೇವಿ ಸರ್ವ ಭೂತೇಷು ಶಕ್ತಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

ಗುಜರಾತಿನಲ್ಲಿ ಇರುವ ಅಂಬಾಜಿ ದೇವಸ್ಥಾನ ಇಂದಿಗೂ ಬಹುದೊಡ್ಡ ಯಾತ್ರಾಸ್ಥಳ. ಇಲ್ಲಿನ ದೇವತೆಯನ್ನು ಅಂಬಾ ಭವಾನಿ ಎಂದು ಕರೆಯುತ್ತಾರೆ. ಇಲ್ಲಿನ ದೇವಸ್ಥಾನ ಪುರಾತನವಾದುದು ಎಂಬ ನಂಬಿಕೆ ಇದೆ. ಇಲ್ಲಿನ ಗರ್ಭಗೃಹದಲ್ಲಿ ದೇವತೆಯ ಮೂರ್ತಿ ಇಲ್ಲ. ಆದರೆ ದೇವತೆಯ ಸಿಂಹಾಸನ ಉಂಟು ಇದೇ ಸಿಂಹಾಸನಕ್ಕೆ ಆಭರಣಗಳಿಂದ ಅಲಂಕೃತ ಮಾಡಿ ಪೂರ್ಣ ದರ್ಶನವನ್ನು ಭಕ್ತರಿಗೆ ನೀಡಲಾಗುತ್ತದೆ.

ಪೌರಾಣಿಕ ಹಿನ್ನಲೆಯಲ್ಲಿ ಅಂಬೆಯು ಕೃಷ್ಣನನ್ನು ತನ್ನ ಪತಿಯಾಗಿ ಪಡೆದುಕೊಳ್ಳಲು ರುಕ್ಮಿಣಿಗೆ ಸಹಾಯ ಮಾಡಿದಳು ಎಂಬ ನಂಬಿಕೆ ಇದೆ. ಅಲ್ಲದೇ ಕೃಷ್ಣ ಪರಮಾತ್ಮನ ಪ್ರಥಮ ಕೇಶ ಮುಂಡನ ಇಲ್ಲಿ ನಡೆಯಿತು ಎಂದು ನಂಬಿಕೆ ಇದೆ.

WD
ಪ್ರತಿ ಹುಣ್ಣಿಮೆಯ ದಿನದಂದು ಇಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿದ್ದು, ಖ್ಯಾತ ಸಂತರು, ಸಂಗೀತಕಾರರು ಅಂಬಾ ಮಾತೆಯ ಗುಣಗಾನವನ್ನು ಮಾಡಿದ್ದಾರೆ. ಇಲ್ಲಿನ ಶಾಕ್ತ ಮತ್ತು ಭಕ್ತ ಪಂಥಗಳ ಅನುಯಾಯಿಗಳು ಅಂಬಾ ಮಾತೆಯ ಪೂಜೆ ಮಾಡುತ್ತಾರೆ.

WD
ಭಾರತದಲ್ಲಿ ಇರುವ 51 ಶಕ್ತಿ ಪೀಠಗಳಲ್ಲಿ ಅಂಬಾಜಿಯೂ ಕೂಡ ಒಂದು ಎಂದು ಪ್ರಖ್ಯಾತಿ ಪಡೆದಿದೆ. ಶಕ್ತಿ ಪೀಠಗಳಲ್ಲಿ 12 ಪೀಠಗಳು ಪ್ರಮುಖ ಶಕ್ತಿ ಪೀಠಗಳು ಎಂದು ಹೆಸರು ಪಡೆದಿದ್ದು. ಉಜ್ಜೈನಿಯ ಭಗವತಿ ಮಹಾಕಾಳಿ, ಮಹಾಶಕ್ತಿ. ಕಂಚಿಯ ಕಾಮಾಕ್ಷಿ, ಮಲಯಗಿರಿಯ ಭ್ರಮರಾಂಭ, ಕನ್ಯಾಕುಮಾರಿಯ ಕುಮಾರಿಕಾ, ಮತ್ತು ಅನಾರ್ಟ್‌ನ ಅಂಬಾಜಿ.

ಕೊಲ್ಹಾಪುರದ ಮಹಾಲಕ್ಷ್ಮೀ, ವಾರಣಾಸಿಯ ವಿಶಾಲಾಕ್ಷಿ, ಗಯಾದ ಮಂಗಳಾವತಿ, ಬಂಗಾಲದಲ್ಲಿರುವ ಸುಂದರಿ ಭವಾನಿ ಮತ್ತು ನೇಪಾಳದಲ್ಲಿ ಇರುವ ಗುಹ್ಯಕೇಶ್ವರಿ ಪ್ರಮುಖವಾಗಿವೆ.

WD
ಕೊಲ್ಹಾಪುರದ ಮಹಾಲಕ್ಷ್ಮೀ, ವಾರಣಾಸಿಯ ವಿಶಾಲಾಕ್ಷಿ, ಗಯಾದ ಮಂಗಳಾವತಿ, ಬಂಗಾಲದಲ್ಲಿರುವ ಸುಂದರಿ ಭವಾನಿ ಮತ್ತು ನೇಪಾಳದಲ್ಲಿ ಇರುವ ಗುಹ್ಯಕೇಶ್ವರಿ ಪ್ರಮುಖವಾಗಿವೆ.

ಮೌಂಟ್ ಅಬುವಿನ ಹತ್ತಿರ ಅಂಬಾ ಭವಾನಿ ಮಂದಿರವಿದ್ದು, ಪಾಲನಪುರ್‍‌ದಿಂದ 65 ಕಿಮಿ ದೂರದಲ್ಲಿದೆ. ಅಂಬಾ ಭವಾನಿಯ ಮೂಲಸ್ಥಳ ಬೇಟ್ಟದ ಮೇಲಿದ್ದು ಇದು ಪಟ್ಟಣದಿಂದ ಮೂರು ಕಿಮಿ ದೂರದಲ್ಲಿದೆ.

ಪೂರ್ವ ಆರ್ಯರ ಕಾಲದಲ್ಲಿ ಅಂಬಾ ಭವಾನಿ ಪೂಜಿಸಲ್ಪಡುತ್ತಿದ್ದಳು ಎಂಬ ನಂಬಿಕೆ ಇದ್ದು, ಆರ್ಯರ ಆಗಮನದ ನಂತರ ಅವರ ಸಂಸ್ಕೃತಿಯಲ್ಲಿ ಕೂಡ ಅಂಬಾ ಭವಾನಿಗೆ ಸ್ಥಾನ ಸಿಕ್ಕಿತು ಎಂದು ವಾದಿಸುವವರು ಇದ್ದಾರೆ.

WD
ಪಕ್ಕದ ಅರಾವಳಿ ಪರ್ವತ ಶ್ರೇಣಿಯ ಪಾದದಡಿಯಲ್ಲಿ ಒಂದು ಅರಸೂರ ಎಂಬ ಗ್ರಾಮವಿದ್ದು ಅಲ್ಲಿ ಶ್ರೀಕೃಷ್ಣನ ಕೇಶ ಮುಂಡನವನ್ನು ಮಾಡಲಾಯಿತು. ಅಲ್ಲಿನ ದೇವಸ್ಥಾನದಲ್ಲಿ ಕೂಡ ಯಾವುದೇ ದೇವತೆಯ ಮೂರ್ತಿ ಇಲ್ಲ.ಅಲ್ಲಿನ ದೇವಸ್ಥಾನದಲ್ಲಿ 51 ಶ್ಲೋಕಗಳ ಪಟ್ಟಿ ಇದೆ.

ಇಲ್ಲಿನ ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿ ನವರಾತ್ರಿ ಹಬ್ಬಕ್ಕೆ ಲಕ್ಷದ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ತಲುಪುವುದು ಹೇಗೆ:
ಅಹ್ಮದಾಬಾದ್‌ನಿಂದ 180 ಕಿಮಿ
ಅಬು ರೋಡ್ ಸ್ಟೆಷನ್‌ನಿಂದ 180 ಕಿಮಿ
ಮೌಂಟ್ ಅಬುನಿಂದ 45 ಕಿಮಿ
ದೆಹಲಿಯಿಂದ 700 ಕಿಮಿ
ಸಮೀಪದ ರೈಲ್ವೆ ನಿಲ್ದಾಣ ಅಬು ರೋಡ್
ಸಮೀಪದ ವಿಮಾನ ನಿಲ್ದಾಣ ಅಹ್ಮದಾಬಾದ್

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

Show comments