Webdunia - Bharat's app for daily news and videos

Install App

ಕೃಷ್ಣ ಭಕ್ತಿಯ ತಾಣ - ಇಸ್ಕಾನ್ ಮಂದಿರ

Webdunia
WD
ಹರೇ ರಾಮ ಹರೇ ಕೃಷ್ಣ, ರಾಮ ರಾಮ ಹರೇ ಹರೇ
ಹರೇ ರಾಮ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ
ಎಂಬ ನಾಮೋಚ್ಚಾರದೊಂದಿಗೆ ಭಕ್ತಾದಿಗಳು ತಮ್ಮ ಭಕ್ತಿ ಪರವಶತೆಯ ಉತ್ತುಂಗದಲ್ಲಿರುತ್ತಾರೆ. ತುಳಸಿ ಮಾಲೆ ಧರಿಸಿದ ಭಕ್ತರು, ಭಕ್ತಿಯ ಆವೇಶದಲ್ಲಿ ಹಾಡುತ್ತಾ, ನರ್ತಿಸುತ್ತಾ ಭಜಿಸುತ್ತಾರೆ... ಇದು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಮಹಾ ಸಂಸ್ಥೆ (ಇಸ್ಕಾನ್) ದೇವಾಲಯದಲ್ಲಿ ಕಂಡುಬರುವ ದೃಶ್ಯ.

ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಮಹಾಸಂಸ್ಥೆಯನ್ನು ಸ್ಥಾಪಿಸಿದ ಅಭಯಚರಣಾರವಿಂದ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹುಟ್ಟಿದ್ದು ಕೋಲ್ಕತಾದಲ್ಲಿ. 1896ರಲ್ಲಿ ವೈಷ್ಣವ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಗುರು ಶ್ರೀ ಭಕ್ತಿಸಿದ್ಧಾಂತ ಸರಸ್ವತಿ ಗೋಸ್ವಾಮಿ ಅವರನ್ನು ಮೊದಲ ಬಾರಿ ಕೋಲ್ಕತಾದಲ್ಲಿ ಭೇಟಿಯಾಗಿದ್ದು 1922ರಲ್ಲಿ. ಭಕ್ತಿ ಸಿದ್ದಾಂಧತ ಸರಸ್ವತಿಯವರು ಅಭಯರನ್ನು ಬಹುವಾಗಿ ನೆಚ್ಚಿಕೊಂಡರು ಮತ್ತು ವೈದಿಕ ಜ್ಞಾನವನ್ನು ಬೋಧಿಸುವುದಕ್ಕೆ ಜೀವನವನ್ನು ಮುಡಿಪಾಗಿಡುವಂತೆ, ವಿಶೇಷತಃ ಶ್ರೀಕೃಷ್ಣನ ಸಂದೇಶವನ್ನು ಇಂಗ್ಲಿಷ್ ಭಾಷಾ ಲೋಕಕ್ಕೆ ಬೋಧಿಸುವಂತೆ ಸೂಚಿಸಿದರು.

ತಮ್ಮ ಉದ್ದೇಶವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಜಯ ಅವರು 1959ರಲ್ಲಿ ಸನ್ಯಾಸದೀಕ್ಷೆ ಸ್ವೀಕರಿಸಿದರು. 1966ರಲ್ಲಿ ಅವರು ಇಸ್ಕಾನ್ ಸಂಘಟನೆಯನ್ನು ಕಟ್ಟಿದರು. ಅಂದಿನಿಂದ ಇದುವರೆಗೆ ಇಸ್ಕಾನ್ ಭರ್ಜರಿಯಾಗಿ ಬೆಳೆದು ನಿಂತಿದ್ದು, 10,000 ಮಂದಿ ದೇವಳದ ಭಕ್ತರು ಹಾಗೂ 2.5 ಲಕ್ಷಕ್ಕೂ ಹೆಚ್ಚು ಮಂದಿ ಅನುಯಾಯಿಗಳನ್ನು ಹೊಂದಿದೆ.

ಸಮಾಜದ ಉನ್ನತಿಗಾಗಿ ಭಗವದ್ಗೀತೆ ಮತ್ತು ಇತರ ಪೌರಾಣಿಕ ಗ್ರಂಥಗಳ ಮೂಲಕವಾಗಿ ಕೃಷ್ಣ ಪ್ರಜ್ಞೆಯನ್ನು ಜಾಗೃತಿಗೊಳಿಸುವುದು ಈ ಪಂಥರಹಿತ, ಏಕದೇವತಾ ವಾದ ಆಂದೋಲನದ ಉದ್ದೇಶ.

WD
ಭಕ್ತಿಯ ಅಲೆಗಳು ನ್ಯೂಯಾರ್ಕ್‌ನಿಂದ ಆರಂಭವಾಗಿ ವಿಶ್ವದ ಮೂಲೆ ಮೂಲೆಗೂ ಹರಡಿತು. ಅದೆಷ್ಟೋ ದೇಶಗಳು ಹರೇ ರಾಮ ಹರೇ ಕೃಷ್ಣ ಎಂಬ ನಾಮೋಚ್ಚಾರದ ಧ್ವನಿಯಿಂದ ಆವೃತವಾದವು. ಇಸ್ಕಾನ್ ಮಂದಿರಗಳಲ್ಲಿ ಬಹು ಸಂಖ್ಯೆಯಲ್ಲಿ ಭಕ್ತಾದಿಗಳು ಭಕ್ತಿಯ ಉತ್ತುಂಗಕ್ಕೇರುತ್ತಾರೆ ಮತ್ತು ಶಾಂತಿಯನ್ನು ಪಡೆಯುತ್ತಾರೆ. ಪವಿತ್ರ ಗ್ರಂಥ ಭಗವದ್ಗೀತೆಯಲ್ಲಿರುವಂತೆ ಈ ಭಕ್ತರು ನಾಲ್ಕು ಪ್ರಧಾನ ನಿಯಮಗಳನ್ನು ಅನುಸರಿಸುತ್ತಾರೆ.

ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

WD
ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ, ಮೀನು, ಮೊಟ್ಟೆ ಸೇವನೆ ವರ್ಜಿಸುವುದು.
ಮದ್ಯ, ಜೂಜು ಮತ್ತು ಅಕ್ರಮ ಲೈಂಗಿಕ ಸಂಪರ್ಕಗಳಿಂದ ದೂರವಿರುವುದು.
ಭಗವದ್ಗೀತೆ ಮತ್ತು ಇತರ ಪುರಾಣ ಗ್ರಂಥಗಳನ್ನು ಪ್ರತಿದಿನ ಒಂದು ಗಂಟೆ ಅಭ್ಯಸಿಸುವುದು.
ಪ್ರತಿದಿನ ನಿಯಮಿತ ಸಂಖ್ಯೆಯಲ್ಲಿ ಮಂತ್ರೋಚ್ಚಾರಣೆ (ಹರೇ ರಾಮ ಹರೇ ಕೃಷ್ಣ) ಮಾಡುವುದು.

' ಧಾರ್ಮಿಕ ಯಾತ್ರೆ'ಯ ಈ ವಾರದ ಸರಣಿಯಲ್ಲಿ, ನಾವು ಉಜ್ಜಯಿನಿಯಲ್ಲಿರುವ ಇಸ್ಕಾನ್ ಮಂದಿರವನ್ನು ಪರಿಚಯಿಸುತ್ತಿದ್ದೇವೆ. ಇಲ್ಲಿನ ಇಸ್ಕಾನ್ ಮಂದಿರಕ್ಕೆ ವಿಶೇಷ ಮಹತ್ವವಿದೆ, ಏಕೆಂದರೆ ಶ್ರೀ ಕೃಷ್ಣ ತನ್ನ ಓದು ಪೂರೈಸಿದ್ದು ಇಲ್ಲಿನ ಸಾಂದೀಪನಿ ಮಹರ್ಷಿ ಆಶ್ರಮದಲ್ಲಿ. ಇಸ್ಕಾನ್ ಮಂದಿರ ಸ್ಥಾಪನೆಯಾದದ್ದು 2006ರಲ್ಲಿ. ರಾಧಾ-ಕೃಷ್ಣರ ಮೂರ್ತಿಯು ಅತ್ಯಂತ ಸುಂದರ ಮತ್ತು ಆಕರ್ಷಕವಾಗಿದೆ. ಅಲ್ಲದೆ ಇಸ್ಕಾನ್ ಸಂಸ್ಥಾಪಕ ಸ್ವಾಮಿ ಪ್ರಭುಪಾದರ ಆಕರ್ಷಕ ಮೂರ್ತಿಯೂ ಇಲ್ಲಿದೆ. ಪ್ರತಿಯೊಂದು ಇಸ್ಕಾನ್ ದೇವಳದಲ್ಲಿರುವಂತೆ ಇಲ್ಲಿಯೂ ಒಂದು ತುಳಸಿ ವನವಿದೆ. ಇಲ್ಲಿಂದಲೇ ಭಗವಾನ್ ಶ್ರೀಕೃಷ್ಣನಿಗೆ ತುಳಸಿ ಮಾಲೆಯನ್ನು ಅರ್ಪಿಸಲಾಗುತ್ತದೆ.

ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮಂದಿರಕ್ಕೆ ತನ್ನದೇ ಆದ ಧರ್ಮ ಶಾಲೆ (ಅತಿಥಿ ಗೃಹ) ಇದೆ. ವಿಶ್ವಾದ್ಯಂತ ಇರುವ ತನ್ನ ಮಂದಿರಗಳ ಆವರಣದಲ್ಲಿ ಭಕ್ತಾದಿಗಳಿಗೆ ಎರಡು ಅಥವಾ ಮೂರು ದಿನ ಉಳಿದುಕೊಳ್ಳಲು ಇಸ್ಕಾನ್ ಸಮಾಜವು ಅವಕಾಶ ಮಾಡಿಕೊಡುತ್ತದೆ. ಈ ಅವಧಿಯಲ್ಲಿ ಭಕ್ತರಿಗೆ ಸಸ್ಯಾಹಾರಿ ವ್ಯಂಜನಗಳನ್ನು ಮಾತ್ರವೇ ಪೂರೈಸಲಾಗುತ್ತದೆ.

WD
ಇಸ್ಕಾನ್ ಮಂದಿರಗಳ ವಿಶೇಷತೆಗಳಲ್ಲಿ ಒಂದು ಎಂದರೆ ಶಿಲ್ಪಕಲೆ ಮತ್ತು ಒಳಾಂಗಣದಲ್ಲಿನ ಸಾಮ್ಯತೆ. ವಿಶ್ವಾದ್ಯಂತ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತಿರುವ ಇಸ್ಕಾನ್ ಮಂದಿರಗಳಲ್ಲಿ ಅಲೌಕಿಕ ಆನಂದವನ್ನು, ಆತ್ಮೀಕ ಶಾಂತಿಯನ್ನು ಪಡೆಯಬಹುದಾಗಿದೆ. ಕೃಷ್ಣ ಭಕ್ತಿಯ ಮೂಲಕ ಆತ್ಮಾನಂದ ಪಡೆಯುವ ತಾಣವಾಗಿ ಇಸ್ಕಾನ್ ದೇಗುಲಗಳು ಪ್ರಸಿದ್ಧಿ ಪಡೆಯುತ್ತಿವೆ.

ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು