Select Your Language

Notifications

webdunia
webdunia
webdunia
webdunia

ರವೆ ವಡೆ

ರವೆ ವಡೆ
ಚೆನ್ನೈ , ಶನಿವಾರ, 15 ನವೆಂಬರ್ 2014 (17:40 IST)
ಬೇಕಾಗುವ ಸಾಮಾಗ್ರಿಗಳು:
ರವೆ-ಅರ್ಧ ಕೆಜಿ
ಹಸಿಮೆಣಸಿನಕಾಯಿ - 8
ಈರುಳ್ಳಿ - 4
ತೆಂಗಿನಕಾಯಿ ತುರಿ - ಅರ್ಧ ಕಪ್
ಅಡಿಗೆ ಸೋಡಾ - 1 ಚಮಚ
ಮೊಸರು - ಕಾಲು ಲೀಟರ್
ಕೊತ್ತಂಬರಿ ಸೊಪ್ಪು - 1 ಕಂತೆ
ಉಪ್ಪು - ರುಚಿಗೆ ತಕ್ಕಷ್ಟು
ತುಪ್ಪ - ಕಾಲು ಕೆಜಿ
 
ಪಾಕ ವಿಧಾನ:
 
ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಸ್ವಲ್ಪ ಹುರಿದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಯನ್ನು  ಸಣ್ಣಗೆ ಹೆಚ್ಚಿ ಹಾಕಿ ಮಿಶ್ರ ಮಾಡಿ.
 
ನಂತರ ಈ ಮಿಶ್ರಣಕ್ಕೆ ಅಡಿಗೆ ಸೋಡಾ, ಉಪ್ಪು, ತೆಂಗಿನತುರಿ, ಮೊಸರು ಹಾಕಿ ಗಟ್ಟಿಯಾಗಿ ಕಲಸಿಕೊಂಡು ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.
 
ಒಲೆಯಲ್ಲಿ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ . ತುಪ್ಪ ಕಾದ ನಂತರ ಮಾಡಿಟ್ಟುಕೊಂಡ ಉಂಡೆಗಳನ್ನು ತಟ್ಟಿ ಹಾಕಿರಿ. ಅದು ಚೆನ್ನಾಗಿ ಕಾದ ನಂತರ ಬಾಣಲೆಯಿಂದ ತೆಗೆಯಿರಿ.
 

Share this Story:

Follow Webdunia kannada