Select Your Language

Notifications

webdunia
webdunia
webdunia
webdunia

ಸ್ವಾದಿಷ್ಠ ಮಟರ್ ದಾಲ್ ಕಚೋರಿ ಸವಿಯಿರಿ

ಸ್ವಾದಿಷ್ಠ ಮಟರ್ ದಾಲ್ ಕಚೋರಿ ಸವಿಯಿರಿ
ಚೆನ್ನೈ , ಗುರುವಾರ, 14 ಆಗಸ್ಟ್ 2014 (19:09 IST)
ಹಬ್ಬಗಳ ಈ ಸಾಲಿನಲ್ಲಿ ಮಸಾಲೆ ಒಂದೇ ಆದರೂ ಕೂಡ , ವಿವಿಧ ಸ್ವಾದಗಳ ತಿಂಡಿ ತಿನಿಸುಗಳನ್ನು ನಾವು ಮಾಡುತ್ತೇವೆ. ಅವರೆ ಕಾಳು ಮತ್ತು ಬೇಳೆಯ ಕಚೋರಿ ಹೇಗೆ ಸಿದ್ದಪಡಿಸುವುದು ತಿಳಿಯಲು ಈ ಕೆಳಗಡೆ ಓದಿ. 
 
ಸಾಮಗ್ರಿ- 
 
100 ಗ್ರಾಂ ಅವರೆಕಾಳುಗಳು
50 ಗ್ರಾಂ ಉದ್ದಿನ ಬೇಳೆ
20 ಗ್ರಾಂ ಗೋಡಂಬಿ
150 ಗ್ರಾಂ ಮೈದಾ ಹಿಟ್ಟು 
1 ಸಣ್ಣ ಚಮಚ ಕೆಂಪು ಮೆಣಸಿನಕಾಯಿ ಪುಡಿ 
ರುಚಿಗೆ ತಕ್ಕಂತೆ ಉಪ್ಪು  
1 ಚಮಚ ಧನಿಯಾ ಪುಡಿ 
2 ಸಣ್ಣ ಚಮಚ ಜೀರಿಗೆ ಪುಡಿ 
1 ಸಣ್ಣ ಚಮಚ ಗರಮ್ ಮಸಾಲಾ 
1 ಸಣ್ಣ ಚಮಚ ಇಂಗಿನ ನಿರು 
ಹುರಿಯಲು ತುಪ್ಪ 
 
ಸಿದ್ದಪಡಿಸುವ ವಿಧಾನ: ಅವರೇ ಕಾಳು ಮತ್ತು ಬೇಳೆಯನ್ನು ಬೇರೆ ಬೇರೆ ಪಾತ್ರೆಗಳಲ್ಲಿ ಉಪ್ಪು ನೀರಿನಲ್ಲಿ ನಿಧಾನವಾಗಿ ಬೇಯಿಸಿ. ಅವುಗಳು ಚೆನ್ನಾಗಿ ಬೆಂದ ಮೇಲೆ ಅವುಗಳನ್ನು ನೀರಿನಿಂದ ಹೊರತೆಗೆದು ಪಾತ್ರಯ ಮೇಲೆ ಹಾಕಿ ಮತ್ತು ಅವರೆಕಾಯಿ ಆರಲು ಬಿಡಿ. ಅಲ್ಲಿಯವರೆಗೆ ಕಡಾಯಿಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. 
 
ಈಗ ಬಿಸಿ ಎಣ್ಣೆಯಲ್ಲಿ ಅವರೆಕಾಯಿ ಮತ್ತು ಬೇಳೆ ಹಾಕಿ ಹುರಿಯಿರಿ ಮತ್ತು ಅವರೆಕಾಳು ಮತ್ತು ಬೇಳೆಯೊಳಗಿನ ನೀರು ಹೋದ ನಂತರ ಅದರಲ್ಲಿ ಇಂಗು ಮತ್ತು ಎಲ್ಲಾ ಮಸಾಲೆ ಜೊತೆಗೆ ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ.ಮತ್ತೊಂದು ಪಾತ್ರೆಯಲ್ಲಿ ಮೈದಾ ಹಿಟ್ಟಿನಲ್ಲಿ ನೀರು ಹಾಕಿ ಚೆನ್ನಾಗಿ ನಾದಿ. 
 
ಸಿದ್ದವಾದ ಹಿಟ್ಟಿನ್ನು ಸಣ್ಣ ಸಣ್ಣವಾಗಿ ಗೋಲಾಕಾರವಾಗಿ ಮಾಡಿ, ಇವುಗಳನ್ನು ಚೆನ್ನಾಗಿ ತೇದಿ.  ಈಗಾಗಲೆ ಸಿದ್ದಮಾಡಿಟ್ಟುಕೊಂಡ ಅವರೆಕಾಳಿನ ಮಸಾಲೆ ಹಾಕಿ ಲಟ್ಟಣಿಗೆಯಿಂದ ಲಟ್ಟಿಸಿ ಕಚೋರಿಯ ಆಕಾರ ಮಾಡಿ. ಒಂದು ದೊಡ್ಡ ಕಡಾಯಿಯಲ್ಲಿ ಎಣ್ಣೆಹಾಕಿ ಅವುಗಳನ್ನು ಕರಿಯಿರಿ. ನಂತರ ಚೆಟ್ನಿ ಅಥವಾ ಪಲ್ಯದೊಂದಿಗೆ ಈ ಕಚೋರಿಗಳನ್ನು ತಿಂದು ಇದರ ಸ್ವಾದವನ್ನು ಅನುಭವಿಸಿ.
 

Share this Story:

Follow Webdunia kannada