Select Your Language

Notifications

webdunia
webdunia
webdunia
webdunia

ಮಾವಿನ ಹಣ್ಣಿನ ಜ್ಯಾಂ

ಮಾವಿನ ಹಣ್ಣಿನ ಜ್ಯಾಂ
ಚೆನ್ನೈ , ಸೋಮವಾರ, 17 ನವೆಂಬರ್ 2014 (11:14 IST)
ಬೇಕಾಗುವ ಸಾಮಾಗ್ರಿ: ಆರು ಮಾವಿನಹಣ್ಣುಗಳು, 800 ಗ್ರಾಂ ಸಕ್ಕರೆ, ಎರಡು ನಿಂಬೆಹಣ್ಣು.
ಮಾಡುವ ವಿಧಾನ: ಮಾವಿನ ಹಣ್ಣಿನ ಸಿಪ್ಪೆ ಸುಲಿದು ಹಣ್ಣನ್ನು ಚೆನ್ನಾಗಿ ಕತ್ತರಿಸಿ. ಅದಕ್ಕೆ ಸಕ್ಕರೆ ಸೇರಿಸಿ ಆಳವಾದ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಒಲೆಯಲ್ಲಿಡಿ. ಅದನ್ನು ಹಾಗೆಯೇ ಸೌಟಿನಿಂದ ಮಗುಚುತ್ತಲೇ ಇರಿ. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತಾ ಬಂದಂತೆ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪಹೊತ್ತು ಹಾಗೆಯೇ ಮಾಡುತ್ತಾ ಇರಿ. ಅದನ್ನು ತಣ್ಣಗಾಗಿಸಿ ಡಬ್ಬಗಳಲ್ಲಿ ಗಾಳಿಯಾಡದಂತೆ ಭದ್ರವಾಗಿ ಮುಚ್ಚಿಡಿ. 

Share this Story:

Follow Webdunia kannada