Select Your Language

Notifications

webdunia
webdunia
webdunia
webdunia

ಹೆಸರುಕಾಳಿನ ಬರ್ಫಿ

ಹೆಸರುಕಾಳಿನ ಬರ್ಫಿ
ಚೆನ್ನೈ , ಶನಿವಾರ, 15 ನವೆಂಬರ್ 2014 (17:00 IST)
ಬೇಕಾಗುವ ಸಾಮಾಗ್ರಿ- ಒಂದು ಕಪ್  ಮೊಳಕೆ ಒಡೆದ ಹೆಸರು ಕಾಳು, ಒಂದು ಕಪ್ ಸಕ್ಕರೆ, ಅರ್ ಕಪ್ ಖೋವಾ, ಸ್ವಲ್ಪ ಏಲಕ್ಕಿ ಪುಡಿ, ಸ್ವಲ್ಪ ಗೋಡಂಬಿ, ಬಾದಾಮಿ.
 
ಮಾಡುವ ವಿಧಾನ- ಹೆಸರು ಕಾಳನ್ನು ಹಬೆ ಬರುವಂತೆ ಬೇಯಿಸಿ. ಆರಿದ ನಂತರ ಅದನ್ನು ತರಿತರಿಯಾಗಿ ರುಬ್ಬಬೇಕು. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ರುಬ್ಬಿದ ಹೆಸರು ಕಾಳು ಸೇರಿಸಿ. ನಂತರ ಇದಕ್ಕೆ ಹಾಲು, ಸಕ್ಕರೆ ಮತ್ತು ಖೋವಾವನ್ನು ಸೇರಿಸಿ. ಏಲಕ್ಕಿ ಪುಡಿ ಸೇರಿಸಿ ಮಗುಚಿ. ನಡು ನಡುವೆ ತುಪ್ಪ ಸೇರಿಸಬೇಕು. ತಳ ಬಿಡುವವೆರೆಗೆ ಮಗುಚುತ್ತಾ ನಂತರ ತಟ್ಟೆಯಲ್ಲಿ ತುಪ್ಪ ಸವರಿ ಈ ಬಾಣಲೆಯಲ್ಲಿದ್ದುದ್ನನು ತಟ್ಟೆಗೆ ಸುರುವಬೇಕು. ಬೇಕಾದ ಆಕಾರಕ್ಕೆ ಕತ್ತರಿಸಬೇಕು. ಅದರ ಮೇಲೆ ಗೋಡಂಬಿ, ಬಾದಾಮಿಯಿಂದ ಅಲಂಕರಿಸಬೇಕು.

Share this Story:

Follow Webdunia kannada