Webdunia - Bharat's app for daily news and videos

Install App

ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಸಾತ್ವಿಕ್‌- ಚಿರಾಗ್‌ ಜೋಡಿ: ಭಾರತದ ಪರ ಹೊಸ ದಾಖಲೆ

Sampriya
ಶುಕ್ರವಾರ, 5 ಏಪ್ರಿಲ್ 2024 (15:29 IST)
Photo Courtesy X
ಹೈದರಾಬಾದ್​: ಭಾರತದ ಬ್ಯಾಡ್ಮಿಂಟನ್‌ ಸ್ಟಾರ್‌ಗಳಾದ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ರಣಕಿರೆಡ್ಡಿ ಜೋಡಿಯು ವಿಶ್ವ ಬ್ಯಾಡ್ಮಿಂಟನ್​ ಪುರುಷರ ಡಬಲ್ಸ್‌ ರ‍್ಯಾಂಕಿಂಗ್‌​ನಲ್ಲಿ 10 ವಾರಗಳ ಕಾಲ ಅಗ್ರಸ್ಥಾನದಲ್ಲಿ ನೆಲೆಸಿದ್ದಾರೆ.

ಈ ಮೂಲಕ ವಿಶ್ವ ಬ್ಯಾಡ್ಮಿಂಟನ್​ ರ‍್ಯಾಂಕಿಂಗ್​ನಲ್ಲಿ ಗರಿಷ್ಠ ವಾರಗಳ ಕಾಲ ಅಗ್ರಸ್ಥಾನ ಅಲಂಕರಿಸಿದ ಭಾರತೀಯ ಆಟಗಾರರೆನಿಸಿದ್ದಾರೆ. ಮಹಿಳಾ ಸಿಂಗಲ್ಸ್​ ರ‍್ಯಾಂಕಿಂಗ್​ನಲ್ಲಿ ಸೈನಾ ನೆಹ್ವಾಲ್​ 9 ವಾರಗಳ ಕಾಲ ನಂ. 1 ಪಟ್ಟ ಅಲಂಕರಿಸಿದ್ದು, ಈ ಹಿಂದಿನ ದಾಖಲೆಯಾಗಿದೆ.

ಸೈನಾ ನೆಹ್ವಾಲ್​ 2015ರ ಆಗಸ್ಟ್​ 18ರಿಂದ ಅಕ್ಟೋಬರ್​ 21ರವರೆಗೆ ವಿಶ್ವ ನಂ. 1 ಪಟ್ಟದಲ್ಲಿದ್ದರು. ನಂತರದಲ್ಲಿ ಪುರುಷರ ಸಿಂಗಲ್ಸ್​ ರ‍್ಯಾಂಕಿಂಗ್​ನಲ್ಲಿ ಕಿದಣಬಿ ಶ್ರೀಕಾಂತ್​ 2018ರಲ್ಲಿ ಕೇವಲ ಒಂದು ವಾರ ಕಾಲ ನಂ. 1 ಪಟ್ಟದಲ್ಲಿ ನೆಲೆಸಿದ್ದರು. ಅದಕ್ಕೆ ಮುನ್ನ 1980ರಲ್ಲಿ ಕನ್ನಡಿಗ ಪ್ರಕಾಶ್​ ಪಡುಕೋಣೆ ಕೂಡ ಕೆಲ ಕಾಲ ನಂ. 1 ಪಟ್ಟ ಅಲಂಕರಿಸಿದ್ದರು.

ಚಿರಾಗ್ ಮತ್ತು ಸಾತ್ವಿಕ್​ ಜೋಡಿ ವಿಶ್ವ ನಂ. 1 ಪಟ್ಟದಲ್ಲಿ ಸದ್ಯಕ್ಕೆ 10 ವಾರಗಳನ್ನು ಪೂರೈಸಿದ್ದು, ಇನ್ನೂ ಕೆಲ ವಾರಗಳ ಕಾಲ ಇದನ್ನು ಕಾಯ್ದುಕೊಳ್ಳುವ ನಿರೀಕ್ಷೆ ಇದೆ. ಹಾಲಿ ವರ್ಷದ ಮೊದಲ 3 ಪ್ರಮುಖ ಟೂರ್ನಿಗಳಲ್ಲಿ ಅವರಿಬ್ಬರು ಫೈನಲ್​ಗೇರಿದ್ದು, ಈ ಪೈಕಿ ಫ್ರೆಂಚ್​ ಓಪನ್​ ಸೂಪರ್​-750 ಟೂರ್ನಿಯಲ್ಲಿ ಪ್ರಶಸ್ತಿ ಒಲಿಸಿಕೊಂಡಿದ್ದರು.

 
 <>

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments