Webdunia - Bharat's app for daily news and videos

Install App

ಮಗುವಿನ ಚಿಕಿತ್ಸೆಗಾಗಿ 51,05,911 ಹಣ ನೀಡಿದ ರೊನೆಲ್ಡೋ...

Webdunia
ಶನಿವಾರ, 15 ಮಾರ್ಚ್ 2014 (17:39 IST)
PTI
ಪ್ರಖ್ಯಾತ ಪುಟ್ ಬಾಲ್ ಆಟಗಾರ ಪೋರ್ಚುಗಾಲ್ ನ ಕ್ರಿಸ್ಟಿಯಾನೋ ರೊನೆಲ್ಡೋ 10 ತಿಂಗಳ ಮಗುವಿನ ಚಿಕಿತ್ಸೆಗಾಗಿ 51,05,911(83 ಸಾವಿರ ಡಾಲರ್) ಹಣವನ್ನು ನೀಡಿದ್ದಾರೆ.

ಸ್ಪ್ಯಾನಿಶ್ ಪತ್ರಿಕೆ ಪ್ರಕಾರ, ವಿಶ್ವದ ಅತ್ಯುತ್ತಮ ಕಾಲ್ಚೆಂಡು ಆಟಗಾರರಾಗಿರುವ ರೊನಾಲ್ಡೊ ಕಾರ್ಟಿಕಲ್ ಡಿಸ್ಪ್ಲಾಸಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಎರಿಕ್ ಓರ್ಟಿಜ್ ಕ್ರೂಸ್ ಎಂಬ ಮಗುವಿನ ಚಿಕಿತ್ಸೆಗಾಗಿ ಈ ಭಾರಿ ಮೊತ್ತದ ಧನ ಸಹಾಯ ಮಾಡಿದ್ದಾರೆ. ಕಾರ್ಟಿಕಲ್ ಡಿಸ್ಪ್ಲಾಸಿಯಾ ಒಂದು ಗಂಭೀರ ಮಾನಸಿಕ ಕಾಯಿಲೆಯಾಗಿದೆ.

ಎರಿಕ್ ಓರ್ಟಿಜ್ ಕ್ರೂಸ್ ನ ಚಿಕಿತ್ಸೆಗಾಗಿ ರೊನಾಲ್ಡೊರವರಲ್ಲಿ ಬುಟ್ಸ ಮತ್ತು ಜರ್ಸಿಯನ್ನು ಕೇಳಲಾಗಿತ್ತು. ಅದನ್ನು ಮಾರಿ ಆಪರೇಶನ್ ಗೆ ಅವಶ್ಯವಿದ್ದ 60,000 ಯುರೋವನ್ನು ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಈ ಮೊತ್ತ ರೊಲಾಲ್ಡೋ ರವರ ವಾರದ ದುಡಿಮೆಯ ಪ್ರತಿಶತ 20 ಕ್ಕೆ ಸಮವಾಗಿತ್ತು. ಆದರೆ ಅವರು ಮಗುವಿನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು.

ಇಂತಹ ಪರೋಪಕಾರಿ ಕೆಲಸಕ್ಕೆ ಹೆಸರಾಗಿರುವ ರೊನೆಲ್ಡೋ 2012 ರಲ್ಲಿ ಕಾನ್ಸರ್ ರೋಗಿಯೊಬ್ಬರ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಭರಿಸಿದ್ದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments