Webdunia - Bharat's app for daily news and videos

Install App

ಒಲಿಂಪಿಕ್ಸ್ ಚಿನ್ನದ ಹುಡುಗ ಈ 'ಅಭಿನವ' ಅರ್ಜುನ!

Webdunia
ಎಂಬಿಎ ಪದವೀಧರ, ಉದ್ಯಮಿ, ಅರ್ಜುನ ಪ್ರಶಸ್ತಿ ವಿಜೇತ, ರಾಜೀವ್ ಗಾಂಧಿ ಖೇಲ್ ರತ್ನ, ವಿಶ್ವಚಾಂಪಿಯನ್, ಈಗ ಒಲಿಂಪಿಕ್ಸ್ ಚಾಂಪಿಯನ್, 28 ವರ್ಷಗಳ ಚಿನ್ನದ ಬರ ನೀಗಿದ ಈ ಚಂಡೀಗಢದ ಹುಡುಗ!

ND
ಆಗಸ್ಟ್ 11, 2008 ಸೋಮವಾರ ಭಾರತಕ್ಕೆ ಸುವರ್ಣ ಕ್ಷಣಗಳನ್ನು ತಂದಿತ್ತ ದಿನ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತವು ಮೊದಲ ಬಾರಿಗೆ ಹಾಕಿಯ ಹೊರತಾದ ಚಿನ್ನ ಪಡೆದುಕೊಂಡಿದೆ. ಮಾತ್ರವಲ್ಲ ಇದು ಭಾರತೀಯನೊಬ್ಬನ ಪ್ರಪ್ರಥಮ ವೈಯಕ್ತಿಕ ಚಿನ್ನದ ಸಾಧನೆಯೂ ಹೌದು. ಅಭಿನವ ಬಿಂದ್ರಾ ಎಂಬ ಈ ಪಂಜಾಬ್ ಹುಡುಗ, ಭಾರತದ ಕೀರ್ತಿ ಪತಾಕೆಯನ್ನು ಎತ್ತರೆತ್ತರಕ್ಕೆ ಹಾರಿಸಿದ್ದಾರೆ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಎದೆತಟ್ಟಿಕೊಳ್ಳುವಂತೆ ಮಾಡಿದ್ದಾರೆ. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ರಾಜ್ಯವರ್ಧನ ಸಿಂಗ್ ರಾಥೋರ್ ಅವರು ಡಬಲ್ ಟ್ರ್ಯಾಪ್ ವಿಭಾಗದಲ್ಲಿ ರಜತ ಪದಕ ತಂದುಕೊಟ್ಟಿದ್ದು ಭಾರತದ ಕ್ರೀಡಾಲೋಕದಲ್ಲಿ ಸಂಚಲನ ಮೂಡಿಸಿದ್ದರೆ, ಬಿಂದ್ರಾ ಸಾಧನೆಯಿಂದ ಭಾರತಕ್ಕೆ ಮತ್ತಷ್ಟು ಪುಳಕ.

ಮುಂದಿನ ತಿಂಗಳು ತಮ್ಮ 26ನೇ ಜನ್ಮದಿನವನ್ನು ಆಚರಿಸಲಿರುವ (ಜನ್ಮದಿನ ಸೆಪ್ಟೆಂಬರ್ 28, 1982) ಚಂಡೀಗಢದ ಈ ಹುಡುಗ ಪುರುಷರ 10ಮೀ. ಏರ್ ರೈಫಲ್ ವಿಭಾಗದಲ್ಲಿ 700.5 ಸ್ಕೋರುಗಳೊಂದಿಗೆ ಚಿನ್ನವನ್ನೇ ಶೂಟ್ ಮಾಡಿ, ಕಳೆದ ಬಾರಿಯ ಅಂದರೆ ಅಥೆನ್ಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಚೀನಾದ ಝು ಕ್ವಿನಾನ್ (699.7) ಅವರನ್ನು ಹಿಂದಿಕ್ಕಿ, ಭಾರತೀಯರ ಚಿನ್ನದ ಪದಕದ ಬರ ನೀಗಿಸಿದ್ದಾರೆ. ಈ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದವರು ಫಿನ್ಲೆಂಡ್‌ನ ಹೆನ್ರಿ ಹಕ್ಕೀನೆನ್ (699.4).

ಫೈನಲ್‌ನಲ್ಲಿ ಬಿಂದ್ರಾ ಅವರ ಯಾವುದೇ ಶಾಟ್ ಕೂಡ 10.0 ಅಂಕಕ್ಕಿಂತ ಕಡಿಮೆ ಇಳಿಯದಿರುವುದು ಅವರ ಚಿನ್ನ ಗೆಲ್ಲುವ ಛಲಕ್ಕೆ ಸಾಕ್ಷಿಯಾಗಿತ್ತು. ಅವರ ಮೊದಲ ಶಾಟ್ ತಂದಿತ್ತ ಅಂಕ 10.7. ಅದಾಗಲೇ ಅವರು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ಫೈನಲ್ ಪಂದ್ಯದ ಅತ್ಯುತ್ತಮ ಗುರಿ 10.8 ದಾಖಲಿಸುವ ಮೂಲಕ ಬಿಂದ್ರಾ ಅವರು ಶಾಟ್ ಒಂದಕ್ಕೆ 10.45 ಸರಾಸರಿ ಅಂಕಗಳೊಂದಿಗೆ ಚಿನ್ನದ ಕಿರೀಟ ಮುಡಿಗೇರಿಸಿಕೊಂಡರು.

ಶೂಟರ್ ಆಗಿ ಭಾರತೀಯ ಕ್ರೀಡಾಲೋಕದಲ್ಲಿ ಮಿಂಚುತ್ತಿರುವ ಅಭಿನವ್ ಬಿಂದ್ರಾ ಅವರು ಹುಟ್ಟಿದ್ದು ಡೆಹ್ರಾಡೂನ್‌ನಲ್ಲಿ, ಪ್ರಾವೀಣ್ಯ ಸಾಧಿಸಿರುವುದು ಏರ್ ರೈಫಲ್ ವಿಭಾಗದಲ್ಲಿ. ಗೇಮ್ಸ್, ಮೊಬೈಲ್ ಸೊಲ್ಯುಶನ್ಸ್ ಮುಂತಾದ ಸೇವೆ ನೀಡುತ್ತಿರುವ ಅಭಿನವ್ ಫ್ಯೂಚರಿಸ್ಟಿಕ್ಸ್ ಎಂಬ ಕಂಪನಿಯ ಸಿಇಒ ಆಗಿರುವ ಅವರು ಯಶಸ್ವಿ ಉದ್ಯಮಿಯೂ ಹೌದು.

2000 ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮೂಲಕ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2001ರಲ್ಲಿ ಹಲವಾರು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯ ಪ್ರಚುರಪಡಿಸಿದ ಅವರು ಆ ವರ್ಷ ಆರು ಚಿನ್ನದ ಪದಕಗಳನ್ನು ಗಿಟ್ಟಿಸಿಕೊಂಡವರು. ಮ್ಯಾಂಚೆಸ್ಟರ್‌ನಲ್ಲಿ ನಡೆದ 2002 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಜೋಡಿ ವಿಭಾಗದಲ್ಲಿ ಚಿನ್ನ ಮತ್ತು ವೈಯಕ್ತಿಕ ವಿಭಾಗದಲ್ಲಿ ರಜತ ಪದಕ ಗೆದ್ದುಕೊಂಡಿದ್ದರು.

ಅಥೆನ್ಸ್‌ನಲ್ಲಿ ನಡೆದ ಕಳೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೇ ಚಿನ್ನದ ಮೇಲೆ ಕಣ್ಣಿಟ್ಟಿದ್ದ ಅವರು ಒಲಿಂಪಿಕ್ ದಾಖಲೆಯನ್ನು ಮುರಿದರಾದರೂ, ಅಂದು ಅವರಿಗೆ ಪದಕ ಮರೀಚಿಕೆಯೇ ಆಗಿತ್ತು. ಇದೀಗ ತಮ್ಮ ಪದಕದ ತುಡಿತವನ್ನು ಚಿನ್ನಕ್ಕೇ ಗುರಿ ಇರಿಸುವ ಮೂಲಕ ತೀರಿಸಿಕೊಂಡಿದ್ದಾರೆ ಅಭಿನವ ಬಿಂದ್ರಾ.

2001 ರ ಅರ್ಜುನ ಪ್ರಶಸ್ತಿ, 2001-02 ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನೂ ತಮ್ಮ ಕೀರ್ತಿಯ ಕಿರೀಟಕ್ಕೆ ಸಿಕ್ಕಿಸಿಕೊಂಡಿರುವ ಬಿಂದ್ರಾ ಓದಿದ್ದು ಎಂಬಿಎ.

28 ವರ್ಷಗಳಿಂದ ಚಿನ್ನದ ಬರದಿಂದ ತತ್ತರಿಸುತ್ತಿದ್ದ ಭಾರತಕ್ಕೆ ಅಭಿನವ ಚಿನ್ನ ದೊರಕಿಸಿಕೊಟ್ಟಿರುವ ಬಿಂದ್ರಾ, ಕ್ರಿಕೆಟ್ ಪಾರಮ್ಯವಿರುವ ದೇಶದ ಕ್ರೀಡಾ ಲೋಕದಲ್ಲಿ ಸಂಚಲನ ಮೂಡಿಸಿ ಹೊಸದೊಂದು ಅಧ್ಯಾಯ ಬರೆದಿದ್ದಾರೆ.

ಭಾರತ ಇದುವರೆಗೆ ಒಲಿಂಪಿಕ್ಸ್ ಕೂಟದಲ್ಲಿ ದಕ್ಕಿಸಿಕೊಂಡ ಪದಕಗಳ ವಿವರ ಇಲ್ಲಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments