Webdunia - Bharat's app for daily news and videos

Install App

ಅತೃಪ್ತಿಯ ಬೇಗುದಿಯಲ್ಲಿ ಕರ್ವಾಲೋ

ನಾಗೇಂದ್ರ ತ್ರಾಸಿ
ಏಷಿಯಾ ಕಪ್ ಚಾಂಪಿಯನ್ ಆಗಿರುವುದು ಬೀಜಿಂಗ್ ಓಲಿಂಪಿಕ್ ಕ್ರೀಡಾಕೂಟದ ತಯಾರಿ ಮಾತ್ರ. ಹುಡುಗರು ಉತ್ತಮ ಆಟ ಆಡಿದ್ದಾರೆ ಬಿಜಿಂಗ್ ತಲುಪುವ ತನಕ ವಿಶ್ರಾಂತಿ ಇಲ್ಲ "
- ಜಾಕ್ವಿಮ್ ಕರ್ವಾಲೋ
( ರಾಷ್ಟ್ರೀಯ ಹಾಕಿ ತಂಡದ ಕೋಚ್)
ರವಿವಾರ ಸರಿಯಾಗಿ ಇಳಿ ಸಂಜೆ ಹೊತ್ತು ಬಂಗಾಳ ಉಪ ಸಾಗರದಲ್ಲಿ ಸೂರ್ಯದೇವ ತನ್ನ ನಿತ್ಯ ಕಾಯಕ ಮುಗಿಸಿ ವಿಶ್ರಾಂತಿಗೆ ತೆರಳಿ ಆಗಷ್ಟೆ ಎರಡು ಗಂಟೆಯಾಗಿರಬೇಕು ಅಷ್ಟೇ..
ಇಲ್ಲಿ ಮೆಯರ್ ರಾಧಾಕೃಷ್ಣನ್ ಹಾಕಿ ಸ್ಟೆಡಿಯಂನಲ್ಲಿ ಭಾರತೀಯ ಹಾಕಿ ಮತ್ತೆ ಜೀವ ಪಡೆಯುತ್ತದೊ ಸಾಯುತ್ತದೊ ಎನ್ನುವ ಆತಂಕ ಹಾಕಿ ಅಭಿಮಾನಿಗಳಲ್ಲಿ ತುಂಬಿತುಳುಕುತ್ತಿದೆ.

ದೂರ್ವಾಸ ಮುನಿ ಕೋಚ್ ಜಾಕ್ವಿಮ್ ಕರ್ವಾಲೋ ಅಸಹನೆಯಿಂದ ಒದ್ದಾಡುತ್ತಿದ್ದಾನೆ. ಈ ಮನುಷ್ಯ ಇಂಥಾ ವ್ಯಕ್ತಿ ಇವನೊಂದಿಗೆ ಹೇಗೆ ಮಾತನಾಡುವುದು ಗೋತ್ತಿಲ್ಲ. ಹೆಚ್ಚು ಕಡಿಮೆ ನಾಲ್ಕೈದು ಪಂದ್ಯಗಳನ್ನು ಇಲ್ಲಿ ಅಂದರೆ 7 ನೇ ಏಷಿಯಾ ಕಪ್‌ನಲ್ಲಿ ಭಾರತ ಆಡುವುದನ್ನು ನೋಡಿದ್ದೆನೆ. ಅಪ್ಪಿತಪ್ಪಿ ಒಂದು ಸೋಲು ಕೂಡ ಭಾರತೀಯರ ಬಳಿ ಸುಳಿಯಲಿಲ್ಲ. ಆದರೂ ಅತೃಪ್ತಿ ಸಿಟ್ಟು. ಜಾಕ್ವಿಮ್ ಕರ್ವಾಲೋ ಅವರಲ್ಲಿ ಇದೆ ಯಾಕೇ ?

ಮೈದಾನದ ಹೊರಗೆ ನಿಂತಿರುತ್ತಿದ್ದ ಜಾಕ್ವಿಮ್ ಗೋಲ್ ಮಿಸ್ ಆದರೆ ಸಿಡಿಮಿಡಿಗೊಳ್ಳುತ್ತಿದ್ದನ್ನು ಕಣ್ಣಾರೆ ಕಂಡಿದ್ದೆನೆ.

70 ರ ದಶಕದ ಮೊದಲು ವಿಶ್ವಕಪ್ ಚಾಂಪಿಯನ್ ತಂಡದಲ್ಲಿದ್ದ ಮಾಜಿ ಓಲಿಂಪಿಯನ್ ಪಠಿಸುತ್ತಿದ್ದುದು ಒಂದೇ ಮಂತ್ರ " who won’t compromise on anything less than the best " ಈ ಗಟ್ಟಿತನ ಕೊನೆಗೂ ಫಲ ನೀಡಲಾರಂಬಿಸಿದ್ದು ಈಗಲ್ಲ ಅಂದರೆ ಏಷಿಯಾ ಕಪ್ ಚಾಂಪಿಯನ್ ಪಟ್ಟ ಮಾತ್ರ ಅಲ್ಲ. ಜೊಕ್ವಿಮ್ ಕೋಚ್ ಆಗಿ ಬಂದಾಗಿನಿಂದ ತಂಡದಲ್ಲಿ ಸುಧಾರಣೆಯಾಗಿದೆ. ನಿಸ್ಸಂಶಯವಾಗಿ.

ಇಪೊದಲ್ಲಿ ನಡೆದ ಅಜ್ಲಾನ್ ಷಾ ಹಾಕಿ ಟೂರ್ನಿಯಿಂದ ಭಾರತದ ಹಾಕಿ ಮೆಲ್ಲಗೆ ಮುಲುಗಲು ಪ್ರಾರಂಭಿಸಿತು ಅಜ್ಲಾನ್ ಷಾದಲ್ಲಿ ಮೂರನೆ ಸ್ಥಾನ ಪಡೆದ ನಮ್ಮವರು ರವಿವಾರ ಅದು ಪ್ರಬಲ ದಕ್ಷಿಣ ಕೋರಿಯಾದವರನ್ನು 7-2 ಗೋಲುಗಳಿಂದ ಅಂತರದಿಂದ ಸೋಲಿಸಿದ್ದು ಇನ್ನು ಇತಿಹಾಸದ ಪುಟಗಳಲ್ಲಿ ಸೇರಿಲ್ಲ.

ಮೆಕಿಂಗ್ ಆಫ್ ಚಕ್ ದೇ ಇಂಡಿಯಾ: ಕರ್ವಾಲೋ ಎರಡು ಚಿಲ್ಲರೆ ವರ್ಷಗಳ ಅವಧಿಯಲ್ಲಿ ತಂಡ ಕಟ್ಟುವುದಕ್ಕೆ ತೆಗೆದುಕೊಂಡಿದ್ದು ಕೇವಲ ಎಳಸುಗಳನ್ನು ಮಾತ್ರ. ಹಿನಾಯ ಸ್ಥಿತಿ ತಲುಪಿದ್ದ ಭಾರತದ ಹಾಕಿಗೂ ಇಂದಿನ ಅಜಗಂಜಾಂತರ ವ್ಯತ್ಯಾಸ ಬಂದಿದೆ. ದೊಡ್ಡ ದೊಡ್ಡ ವಿಚಾರಗಳಿಗೆ ಕೈಹಾಕದ ಕರ್ವಾಲೋ ಉಪಯೋಸಿದ್ದು ಸಣ್ಣ ತಂತ್ರಗಳನ್ನು. ಚುರುಕಿನ ಪಾಸ್‌ಕ್ಕಿಂತ ಚುರುಕಿನ ವೇಗ, ಫಾರ್ವರ್ಡ್‌ಗಳಲ್ಲಿ ಕಂಡಿರದಂತಹ ಸಂಯೋಜನೆ.

ಕೊರಿಯಾ ವಿರುದ್ಧ ನಡೆದ ಫೈನಲ್‌ನಲ್ಲಿ ಎದುರಾಳಿ ಗೋಲಿಯ ದಿಕ್ಕು ತಪ್ಪಿಸಲು ಎಂತೆಂತಹಾ ತಂತ್ರಗಳನ್ನು ಬಳಸಿದ್ದಾರೆ ಎಂದರೆ ಇದು ಭಾರತೀಯ ಹಾಕಿ ತಂಡವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕಾಗುತ್ತದೆ. ಪಾಸ್ ನೀಡುವುದಕ್ಕೆ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಲ್ಲಿ ಪಾಸ್‌ಗಳು ಗೋಲಾಗಿ ಬಿಟ್ಟವು.

ಕರ್ವಾಲೋ ಹುಡುಗರ ು:
ಕಾಲುಗಳಲ್ಲಿ ತಾಖತ್ ಇರುವವರು ಫಾರ್ವರ್ಡ್‌ನಲ್ಲಿ ಇದ್ದರೆ ಉತ್ತಮ. ಸರ್ದಾರ್ ಸಿಂಗ್‌ ಹಾಕಿ ಜಗತ್ತಿನ ಅತ್ಯುತ್ತಮ ಮಿಡ್ ಫೀಲ್ಡರ್, ಅವನ ಕಾಲುಗಳಲ್ಲಿನ ಶಕ್ತಿಗೆ ಕೊರಿಯಾದವರೇ ಕಕ್ಕಾಬಿಕ್ಕಿಯಾದರು. ರೋಷನ್ ಮಿಂಜ್ ಇನ್ನೊಂದು ಎಳಸು ಪ್ರತಿಭೆ. ಪಾರ್ವರ್ಡ್‌ ಹಾಕಿ ಪಟು. ಕರ್ವಾಲೋ ಶೋಧಿಸಿದ ಹುಡುಗರಲ್ಲಿ ಅತ್ಯುತ್ತಮ ಹುಡುಗ ಎಂದರೆ ವಕ್ಕಲಿಗ ರಘುನಾಥ್
ಡ್ರ್ಯಾಗ್ ಫ್ಲಿಕ್ ಮಾಡುವ ರಘುನಾಥ್ ಜಗತ್ತಿನ ಯಾವುದೇ ಹಾಕಿ ಪಟುವಿಗೆ ಡ್ರ್ಯಾಗ್ ಫ್ಲಿಕ್‌ನಲ್ಲಿ ಸಮನಾಗಿ ನಿಲ್ಲಬಲ್ಲ. ಎದುರಾಳಿ ಹಾಕಿಪಟುವನ್ನು ಸುತ್ತುವರಿಯುವಲ್ಲಿ ವಿಫಲವಾಗುವ ರಘುನಾಥ್ ಭವಿಷ್ಯತ್ತಿನ ದಿನಗಳಲ್ಲಿ ಆ ಕೊರತೆಯಿಂದ ಹೊರಬರಬಹುದು.

ಪೆನಾಲ್ಟಿ ಕಾರ್ನರ್ ಸಮಸ್ಯೆ ಇನ್ನೂ ಭಾರತವನ್ನು ಕಾಡುತ್ತಿದೆ. ಆದರೆ ಎದುರಾಳಿಗಳಿಗೆ ಸಿಗುವ ಪೆನಾಲ್ಟಿಗಳನ್ನು ಸುಲಭವಾಗಿ ಬಲ್ಜೀತ್ ಸಿಂಗ್ ಹಾಳುಗೆಡುವಬಲ್ಲರು. ಈ ಪರಿಪೂರ್ಣತೆಗೆ ಒಂದು ರೀತಿಯಲ್ಲಿ ಬ್ಯಾಡ್ಮಿಂಟನ್ ಕೋಚ್ ಪ್ರಸಾದ್ ಗಂಗೂಲಿ ಕಾರಣ ಎಂದು ಹೇಳಬಹುದು. ತೀಕ್ಷ್ಣ ಪ್ರತಿಕ್ರಿಯೆ ಕಾರಣ ಪೆನಾಲ್ಟಿಗಳನ್ನು ಹಾಳುಗೆಡವಬಹುದು.

ಫೈನಲ್ ಪಂದ್ಯದಲ್ಲಿ ಬಲ್ಜೀತ್, ಕೋರಿಯಾ ತಂಡದ ಸತತ ಮೂರು ಪೆನಾಲ್ಟಿ ಅವಕಾಶಗಳನ್ನು ಹಾಳು ಮಾಡುವುದಕ್ಕೆ ಗಂಗೂಲಿಯ ವರಪ್ರಸಾದ ಕಾರಣ ಎನ್ನಬಹುದು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments