Select Your Language

Notifications

webdunia
webdunia
webdunia
webdunia

ಭಾರತದ 'ಸ್ಲಮ್..'ನಿಂದ ಆಂಗ್ಲರ ಕಿಸೆ ಉಬ್ಬುತ್ತಿದೆ..!

ಭಾರತದ 'ಸ್ಲಮ್..'ನಿಂದ ಆಂಗ್ಲರ ಕಿಸೆ ಉಬ್ಬುತ್ತಿದೆ..!
, ಸೋಮವಾರ, 23 ಫೆಬ್ರವರಿ 2009 (12:42 IST)
IFM
ಎಲ್ಲೆಡೆ ಬಿಡುಗಡೆಗೊಂಡು ಭಾರತದ ವಿಶ್ವರೂಪವನ್ನು ತೋರಿಸುತ್ತಿರುವ ಹೆಮ್ಮೆಯ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್' ಅಮೆರಿಕಾದಲ್ಲಿ 67 ಕೋಟಿ ಅಮೆರಿಕನ್ ಡಾಲರ್ ಸಂಪಾದಿಸಿದೆಯಂತೆ !

ಭಾರತದಲ್ಲಿನ ಬಡತನವನ್ನು ವಿದೇಶದಲ್ಲಿ ಹೇಳಿ ಹಣ ಸಂಗ್ರಹಿಸಲಾಗುತ್ತದೆ ಎಂದು ಈ ಹಿಂದೆ ಕೆಲವು ಸಂಘಟನೆಗಳ ಮೇಲೆ ಬಂದಿದ್ದ ಆರೋಪಗಳನ್ನು ಎಲ್ಲರೂ ಕೇಳಿರುತ್ತಾರೆ. ಅದೇ ರೀತಿ ಇಲ್ಲಿ ಅಧಿಕೃತವಾಗಿ ಭಾರತದ ಬಡತನವನ್ನು ತೋರಿಸಲಾಗುತ್ತದೆ. ಇಲ್ಲಿನ ಪೊಲೀಸರ ಹಿಂಸೆ, ಕಿತ್ತು ತಿನ್ನುವ ಬಡತನ- ದೌರ್ಜನ್ಯಗಳನ್ನು ಹಸಿ-ಬಿಸಿಯಾಗಿ ಬಿಂಬಿಸಿ ವಿದೇಶಿಗರ ಕಿಸೆಯನ್ನು ಬೋಳಿಸಲಾಗುತ್ತಿದೆ. ಇಲ್ಲಿ ಹರುಕು ಬಟ್ಟೆ ಧರಿಸಿ ಕೆಸರಿನಲ್ಲಿ ಆಟವಾಡುವ ಮಕ್ಕಳನ್ನು ತೋರಿಸಿ 'ವೆರಿ ಬ್ಯಾಡ್' ಅಂತ ಉದ್ಘರಿಸುತ್ತಾ ವಿದೇಶಿಗರು ಚಿತ್ರ ನೋಡಲು ಮುಗಿ ಬೀಳುತ್ತಿದ್ದಾರಂತೆ. ಇಂತಹ ಭಾರತದಲ್ಲಿ ರೂಪಾಯಿಗೆ ಕಷ್ಟ ಪಡುತ್ತಿರುವ ಚಿತ್ರಣವಿರುವ ಸಿನಿಮಾ ಅಮೆರಿಕಾದಲ್ಲಿ ಕೇವಲ 12 ವಾರಗಳಲ್ಲಿ ಸಂಪಾದಿಸಿದ ಹಣ ಕೇವಲ 3350 ಕೋಟಿ ರೂಪಾಯಿ ! ನೆನಪಿರಲಿ, ಇದು ಕೇವಲ ಅಮೆರಿಕಾದಲ್ಲಿ ಮಾತ್ರ.

ಇಂತಹ ಕಿತ್ತು ತಿನ್ನುವ ಬಡತನದಿಂದ ಬೇಯುತ್ತಿರುವ ದೇಶ ಭಾರತ. ಅಲ್ಲಿ ದೌರ್ಜನ್ಯವೇ ಜೀವನ. ಪ್ರತಿಭಾವಂತರನ್ನು ಸಂಶಯಿಸಲಾಗುತ್ತಿದೆ. ಇರುವುದೆಲ್ಲಾ ಕೊಳೆಗೇರಿಗಳು ಮತ್ತು ಕಳೆಗೆಟ್ಟ ಗುಡಿಸಲುಗಳು. ಇಲ್ಲಿ ಚೂರಿ, ಫಿಸ್ತೂಲುಗಳನ್ನು ಬೀದಿ ಹುಡುಗರೂ ಬಳಸುತ್ತಾರೆ ಎಂದೆಲ್ಲಾ ಜಗತ್ತಿನಲ್ಲೆಲ್ಲೂ ಕಾಣದ ಸತ್ಯಗಳನ್ನೆಲ್ಲಾ ಆಂಗ್ಲ ನಿರ್ದೇಶಕರು ಸಂಶೋಧನೆ ಮಾಡಿ ಚಿತ್ರದಲ್ಲಿ ತುರುಕಿದ್ದಾರೆ. ಸುಂದರ ಭವ್ಯ ತಾಜ್‌ಮಹಲನ್ನು ಈ ಸಿನಿಮಾದಲ್ಲಿ ತೋರಿಸಲಾಗಿದ್ದರೂ ಅದ್ಯಾವುದೋ ಕೋನದಲ್ಲಿ ಕೆಟ್ಟದಾಗಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ನಟಿಸಿದವರು ಭಾರತದ ನಟ ಭಯಂಕರರು. ಸಂಗೀತ ಮತ್ತು ಮ‌ೂಲ ಕಥೆ ಭಾರತದ್ದು. ಅದನ್ನು ತಿರುಚಿದ್ದು ಇಂಗ್ಲೆಂಡಿನವರು. ನಿರ್ದೇಶಿಸಿದ್ದು ಇಂಗ್ಲೆಂಡಿನವರು. ನಿರ್ಮಿಸಿದ್ದು ಕೂಡ ಇಂಗ್ಲೀಷರೇ. ಕಣ್ ಬಿಟ್ಟು ನೋಡುವುದು ಮಾತ್ರ ಇಡೀ ಜಗತ್ತು !

ಅಮೆರಿಕಾದ ನಿರ್ದೇಶಕರ ಗಿಲ್ಡ್, ಗಿಲ್ಡ್ ಸ್ಕ್ರೀನ್ ಅವಾರ್ಡ್ಸ್, ನಿರ್ಮಾಪಕರ ಗಿಲ್ಡ್, ಗೋಲ್ಡನ್ ಗ್ಲೋಬ್ಸ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಮುಂತಾದ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಲ್ಲದೆ ಆಸ್ಕರ್‌ನತ್ತ ಹೆಜ್ಜೆ ಹಾಕುತ್ತಿದೆ.

ಅಮೆರಿಕಾದ 1633 ಥಿಯೇಟರುಗಳಲ್ಲಿ ಪ್ರದರ್ಶನವಾಗುತ್ತಿರುವ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ಇದುವರೆಗೆ 67,244,000 ಅಮೆರಿಕನ್ ಡಾಲರ್ ಸಂಪಾದನೆ ಮಾಡಿದೆಯಂತೆ. ಅಂದರೆ ಪ್ರತಿ ಥಿಯೇಟರ್ ಸಂಪಾದಿಸಿದ ಹಣ ಸುಮಾರು ಎರಡೂವರೆ ಲಕ್ಷ ರೂಪಾಯಿ.

Share this Story:

Follow Webdunia kannada