Select Your Language

Notifications

webdunia
webdunia
webdunia
webdunia

ಭಾರತದ ಕೆಟ್ಟಮುಖ ತೋರಿಸೋ ಸ್ಲಮ್‌ಡಾಗ್...

ಮಂಗ್ಳೂರು ಹುಡುಗಿ ನಾಯಕಿ, ರಹಮಾನ್ ಸಂಗೀತ ನಿರ್ದೇಶನ

ಭಾರತದ ಕೆಟ್ಟಮುಖ ತೋರಿಸೋ ಸ್ಲಮ್‌ಡಾಗ್...
, ಸೋಮವಾರ, 23 ಫೆಬ್ರವರಿ 2009 (12:39 IST)
IFM
ಮುಂಬೈಯ ಕೊಳಚೆ ಪ್ರದೇಶದ ಹುಡುಗನೊಬ್ಬನ ಕಥೆ ಹೊಂದಿರುವ 'ಸ್ಲಮ್ ಡಾಗ್ ಮಿಲಿಯನೇರ್' ಕಳೆದೊಂದು ವರ್ಷದಿಂದ ಬಾಚಿಕೊಂಡ ಪ್ರಶಸ್ತಿಗಳು ನೂರಾರು. ಅದೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಅಂತಹಾ ವಿಶೇಷ ಈ ಚಿತ್ರದಲ್ಲೇನಿದೆ ಎನ್ನುವವರಿಗೆ ಸಿಂಪಲ್ಲಾಗಿ ಹೇಳಬಹುದೇನೆಂದರೆ, ಭಾರತದಲ್ಲಿನ ಬಡತನದ ವಿಶ್ವರೂಪ ದರ್ಶನ ಮಾಡಿಸಲಾಗಿದೆ !

ಭಾರತದ ಯಾವುದೇ ಚಿತ್ರ ಪಡೆಯದ ಖ್ಯಾತಿಯನ್ನು (ಈ ಚಿತ್ರ ಭಾರತದ್ದಲ್ಲ, ಭಾರತದ ಕಥೆ ಮತ್ತು ನಟರಿದ್ದಾರೆ, ಅಷ್ಟೇ) ಈ ಚಿತ್ರ ಪಡೆಯುತ್ತಿದೆ. ಇದರ ನಿರ್ದೇಶಕರು ಇಂಗ್ಲೆಂಡಿನವರು, ನಿರ್ಮಾಪಕರು ಭಾರತದವರಲ್ಲ. ಆಸ್ಕರ್ ಪ್ರಶಸ್ತಿ ಬಂದರೆ ಅದು ಭಾರತಕ್ಕೆ ಸಂದ ಗೌರವ ಎನಿಸುವುದಿಲ್ಲ. ಭಾರತದ ಬಡತನವನ್ನು, ಕೊಳಚೆ ಪ್ರದೇಶಗಳನ್ನು ಜಗತ್ತಿಗೆ ಸಾರಿದಂತಾಗಬಹುದು. ನಮ್ಮಲ್ಲಿನ ಹುಳುಕುಗಳನ್ನು, ಭ್ರಷ್ಟಾಚಾರವನ್ನು ಬಿಳಿ ತೊಗಲಿನ ಮಂದಿ ನೋಡಿ ಗೇಲಿ ಮಾಡಬಹುದು ಅಷ್ಟೇ.. ಭಾರತದಲ್ಲಿ ಹೀಗೂ ಇದೆಯೇ ಎಂದು ಹೊರ ಜಗತ್ತು ಮ‌ೂಗಿನ ಮೇಲೆ ಬೆರಳಿಡಬಹುದು. ಅದಕ್ಕಿಂತ ಹೆಚ್ಚು ಏನೂ ಸಾಧಿಸಲಾಗದು. ಹೆಚ್ಚೆಂದರೆ ಇದರಲ್ಲಿ ನಟಿಸಿದವರಿಗೆ ಇನ್ನಷ್ಟು ಪ್ರಶಸ್ತಿಗಳು, ಸಂಗೀತ ನೀಡಿದ ಎ.ಆರ್. ರೆಹಮಾನ್‌ ಕೊರಳಿಗೆ ಚಿನ್ನದ ಪದಕಗಳು ಬಿಟ್ಟರೆ ಭಾರತಕ್ಕೆ ಖ್ಯಾತಿ ತರುವ ಯಾವ ಅಂಶಗಳನ್ನೂ ಈ ಚಿತ್ರ ಹೊಂದಿಲ್ಲ.

ನೀವು ಟೈಟಾನಿಕ್, ಟರ್ಮಿನೇಟರ್, ಬ್ಯಾಟ್ಸ್, ದಿ ಮಮ್ಮೀ, ಪೈರೇಟ್ಸ್ ಆಫ್ ದಿ ಕೆರೆಬಿಯನ್, ದಿ ಟಾಂಬ್ ರೈಡರ್, ಲಾರ್ಡ್ ಆಫ್ ರಿಂಗ್ಸ್, ಅನಕೊಂಡಾ, ಗಾಢ್ಜಿಲಾ, ಜುರಾಸಿಕ್ ಪಾರ್ಕ್, ಬಾಂಡ್ ಚಿತ್ರಗಳು, ಸ್ಟಾರ್‌ವಾರ್ಸ್ ಚಿತ್ರಗಳಲ್ಲಿ ಇಂತಹ ಯಾವುದೇ ದೃಶ್ಯಗಳನ್ನು ನೋಡಲು ಸಾಧ್ಯವಿಲ್ಲ. ಅಲ್ಲಿ ಅವರ ಸಾಧನೆಗಳಿಗಾಗಿ ಅಥವಾ ಚಿತ್ರದಲ್ಲಿನ ತಾಂತ್ರಿಕತೆ, ನಿರ್ದೇಶನ, ಕಥೆಗಳಿಗಾಗಿ ಪ್ರಶಸ್ತಿಗಳು ಬಂದಿರುತ್ತವೆ. 'ಸ್ಲಮ್‌ಡಾಗ್...'ನಲ್ಲಿ ಏನಿದೆ ಎಂದು ಹುಡುಕ ಹೋದರೆ ಅಲ್ಲೊಂದು ಚಿಕ್ಕ ಲವ್ ಸ್ಟೋರಿ, ಅದಕ್ಕಿಂತಲೂ ಹೆಚ್ಚನ ಬಡತನ, ಮುಂಬೈಯಲ್ಲಿನ ಕೊಳಗೇರಿಗಳು, ಕೊಳಚೆ ಪ್ರದೇಶಗಳು, ಅಂಡರ್‌ವರ್ಲ್ಡ್ ಎಂಟ್ರಿ, ದುಷ್ಟ ಪೊಲೀಸರು ಮತ್ತು ಹಣ ಮಾಡುವ ವಿಧಾನ ಇಷ್ಟೇ... ಕೊನೆಗೊಂದು ಕಿಸ್ ಅಲ್ಲಿಗೆ ಚಿತ್ರ ಮುಗಿದಿರುತ್ತದೆ.

webdunia
IFM
ಇಂತಹ ಚಿತ್ರಕ್ಕೆ ನಿಜಕ್ಕೂ ಆಸ್ಕರ್ ಸಿಗಲೇ ಬೇಕಾ? ಅಥವಾ ಸಿಗುವ ಸಾಧ್ಯತೆಗಳಿವೆಯೇ? ಇತ್ತೀಚಿನ ದಿನಗಳಲ್ಲಿ ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅದರ ಇತ್ತೀಚಿನ ಸುದ್ದಿಯೇ ಗುರುವಾರ ಲಾಸ್ ಎಂಜಲೀಸ್‌ನಲ್ಲಿ 5 ಪ್ರಶಸ್ತಿಗಳನ್ನು 'ಸ್ಲಮ್‌ಡಾಗ್ ಮಿಲಿಯನೇರ್' ಬಾಚಿಕೊಂಡದ್ದು.

ಬ್ರಾಡ್‌ಕಾಸ್ಟ್ ಫಿಲ್ಸ್ ಕ್ರಿಟಿಕ್ಸ್ ಅಸೋಸಿಯೇಷನ್‌ನ 14ನೇ ವಾರ್ಷಿಕ ಪ್ರಶಸ್ತಿಗಳಲ್ಲಿ 5 ಪ್ರಮುಖ ಪ್ರಶಸ್ತಿಗಳನ್ನು ಈ 'ಸ್ಲಮ್ ಡಾಗ್ ಮಿಲಿಯನೇರ್' ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ (ನಿರ್ಮಾಪಕ- ಕ್ರಿಶ್ಚಿಯನ್ ಕಾಲ್ಸನ್), ಅತ್ಯುತ್ತಮ ನಿರ್ದೇಶನ (ಡ್ಯಾನಿ ಬಾಯ್ಲ್), ಅತ್ಯುತ್ತಮ ಚಿತ್ರಕತೆ (ಸಿಮೋನ್ ಬ್ಯೂಪೋಯ್), ಅತ್ಯುತ್ತಮ ಯುವ ನಟ (ದೇವ್ ಪಟೇಲ್), ಅತ್ಯುತ್ತಮ ಸಂಗೀತ (ಎ.ಆರ್. ರೆಹಮಾನ್) ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

ಭಾರತೀಯ ವಿಕಾಸ್ ಸ್ವರೂಪ್ ಎಂಬವರು ಬರೆದ 'ಕ್ಯೂ ಆಂಡ್ ಎ' ಕಾದಂಬರಿಯನ್ನು ಆಧರಿಸಿ 'ಸ್ಲಮ್ ಡಾಗ್ ಮಿಲಿಯನೇರ್' ಸಿನಿಮಾವನ್ನು ತಯಾರಿಸಲಾಗಿತ್ತು. ಮುಂಬೈಯ ಕೊಳಚೆ ಪ್ರದೇಶದ ಬಾಲಕನನ್ನು ಕೇಂದ್ರೀಕರಿಸಿ ಈ ಚಿತ್ರ ಸಿದ್ಧವಾಗಿತ್ತು. ಗಲ್ಲಿ ಹುಡುಗ ಜಮಾಲ್ ಮಲಿಕ್ ಟೀವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ 2 ಕೋಟಿ ರೂಪಾಯಿ ಭರ್ಜರಿ ಬಹುಮಾನ ಗೆಲ್ಲುವುದು ಮತ್ತು ಆತನ ಬದುಕು ಬದಲಾಗುವ ರೀತಿಯೇ ಚಿತ್ರದ ಕಥೆ.

ಮುಂಬೈಯಲ್ಲೇ ಚಿತ್ರೀಕರಿಸಲಾಗಿರುವ ಈ ಚಿತ್ರದಲ್ಲಿ ಅನಿಲ್ ಕಪೂರ್, ಇರ್ಫಾನ್ ಖಾನ್ ಮುಂತಾದವರು ನಟಿಸಿದ್ದಾರೆ. ಚಿತ್ರದ ನಾಯಕ ಜಮಾಲ್ ಮಲಿಕ್ ಪಾತ್ರದಲ್ಲಿ ದೇವ್ ಪಟೇಲ್, ಜಮಾಲ್ ಸಹೋದರ ಸಲೀಮ್ ಪಾತ್ರದಲ್ಲಿ ಮಧುರ್ ಮಿತ್ತಲ್, ಜಮಾಲ್ ಮಲಿಕ್‌ನ ಪ್ರೇಯಸಿ ಲತಿಕಾ ಪಾತ್ರದಲ್ಲಿ ಫ್ರೀದಾ ಪಿಂಟೋ (ಈಕೆ ಮಂಗಳೂರು ಮ‌ೂಲದ ಕ್ಯಾಥೋಲಿಕ್), ಕರೋಡ್‌ಪತಿ ಮಾದರಿಯ ಗೇಮ್ ನಡೆಸುವ ಪ್ರೇಮ್ ಕುಮಾರ್ ಪಾತ್ರದಲ್ಲಿ ಅನಿಲ್ ಕುಮಾರ್, ಕ್ರೂರಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಇರ್ಫಾನ್ ಖಾನ್, ಕಾನ್ಸ್‌ಟೇಬಲ್ ಶ್ರೀನಿವಾಸ್ ಪಾತ್ರದಲ್ಲಿ ಸೌರಭ್ ಶುಕ್ಲಾ, ಜಾವೇದ್ ಮತ್ತು ರಾಜಾ ಪಾತ್ರದಲ್ಲಿ ಮಹೇಶ್ ಮಾಂಜ್ರೇಕರ್, ಮಾಮನ್ ಪಾತ್ರದಲ್ಲಿ ಅಂಕುರ್ ವಿಕಲ್ ನಟಿಸಿದ್ದಾರೆ.

ಪ್ರಶಸ್ತಿಗಳನ್ನು ಲಾಸ್‌ಎಂಜಲೀಸ್‌ನಲ್ಲಿ ಗುರುವಾರ ಪ್ರದಾನ ಮಾಡಲಾಯಿತು. ಉಳಿದಂತೆ 'ಮಿಲ್ಕ್' ಚಿತ್ರಕ್ಕಾಗಿ ಸೀನ್ ಪೆನ್ ಉತ್ತಮ ನಟ ಪ್ರಶಸ್ತಿ ಪಡೆದರು. ಉತ್ತಮ ನಟಿ ಪ್ರಶಸ್ತಿಯನ್ನು ಜಂಟಿಯಾಗಿ 'ರಚೆಲ್ ಗೆಟ್ಟಿಂಗ್ ಮ್ಯಾರೀಡ್' ಚಿತ್ರಕ್ಕಾಗಿ ಅನ್ನೆ ಹಾತ್ವೇ ಮತ್ತು 'ಡೌಟ್' ಚಿತ್ರಕ್ಕಾಗಿ ಮೆರಿಲ್ ಸ್ಟ್ರೀಪ್ ಪಡೆದಿದ್ದಾರೆ. ಅತ್ತುತ್ತಮ ಹಾಸ್ಯ ನಟ ಪ್ರಶಸ್ತಿಯನ್ನು ಹೀತ್ ಲೆಡ್ಜರ್‌ರವರು 'ದಿ ಡಾರ್ಕ್ ನೈಟ್' ಚಿತ್ರಕ್ಕಾಗಿ, ಪೋಷಕ ನಟಿ ಪ್ರಶಸ್ತಿಯನ್ನು 'ದಿ ರೀಡರ್' ಚಿತ್ರಕ್ಕಾಗಿ ಕೇಟ್ ವಿನ್ಸ್‌ಲೆಟ್ ತಮ್ಮದಾಗಿಸಿಕೊಂಡಿದ್ದಾರೆ. ಅತ್ಯುತ್ತಮ ಹಾಡು ಪ್ರಶಸ್ತಿ 'ದಿ ರೆಸ್ಲರ್' ಚಿತ್ರಕ್ಕಾಗಿ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಪಡೆದಿದ್ದಾರೆ.

Share this Story:

Follow Webdunia kannada