Select Your Language

Notifications

webdunia
webdunia
webdunia
webdunia

ಬೀಜಿಂಗ್: ಪದಕ ಪಟ್ಟಿಯಲ್ಲಿ 83ದೇಶಗಳ ದಾಖಲೆ

ಬೀಜಿಂಗ್: ಪದಕ ಪಟ್ಟಿಯಲ್ಲಿ 83ದೇಶಗಳ ದಾಖಲೆ
ಬೀಜಿಂಗ್ , ಶನಿವಾರ, 23 ಆಗಸ್ಟ್ 2008 (16:06 IST)
ಪ್ರಸಕ್ತ ಸಾಲಿನಲ್ಲಿ ನಡೆದ 29ನೇ ಒಲಿಂಪಿಕ್ ಕ್ರೀಡಾಕೂಟ ಭಾರತದ ಪಾಲಿಗಂತೂ ಐತಿಹಾಸಿಕವಾದರೆ, ಉಳಿದಂತೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಒಟ್ಟು 83ದೇಶಗಳು ಪದಕವನ್ನು ಗಳಿಸಿರುವುದಾಗಿ ಒಲಿಂಪಿಕ್ ಕ್ರೀಡಾಸಮಿತಿ ತಿಳಿಸಿದೆ.

ಇದರಲ್ಲಿ ಐಯರ್ಲ್ಯಾಂಡ್,ಮೊಲ್ಡೋವಾ,ದ್ವೀಪ ರಾಷ್ಟ್ರವಾದ ಮೌರಿಷಸ್ ನಾಲ್ಕು ಕಂಚಿನ ಪದಕಗಳನ್ನು ತಮ್ಮ ಬಗಲಿಗೇರಿಸಿಕೊಂಡಿವೆ.ಆದರೂ ಈ ಬಾರಿ 83ದೇಶಗಳು ಪದಕ ಪಡೆಯುವ ಮೂಲಕ ದಾಖಲೆ ನಿರ್ಮಿಸಿವೆ.

ಭಾನುವಾರ ಸಂಜೆ ಮುಕ್ತಾಯಗೊಳ್ಳಲಿರುವ ಬೀಜಿಂಗ್ ಮಹಾನ್ ಕ್ರೀಡಾಕೂಟದಲ್ಲಿ 302ಇವೆಂಟ್‌ಗಳಲ್ಲಿ 54 ಬಾಕಿ ಉಳಿದಿದ್ದು,ಭಾನುವಾರ ಬೆಳಿಗ್ಗೆ ಕ್ರೀಡಾ ಸ್ಪರ್ಧೆಗಳೆಲ್ಲ ಅಂತ್ಯಗೊಳ್ಳಲಿದೆ. ಅಥೆನ್ಸ್‌ನಲ್ಲಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಒಟ್ಟು 74ದೇಶಗಳು ಪದಕಗಳನ್ನು ಜಯಿಸಿದ್ದವು.

ಅಲ್ಲದೇ 2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ 80ದೇಶಗಳು ಪದಕಗಳನ್ನು ಪಡೆದಿದ್ದವು. ಆ ನಿಟ್ಟಿನಲ್ಲಿ ಬೀಜಿಂಗ್‌ನಲ್ಲಿ 83ದೇಶಗಳು ಪದಕ ಗಳಿಸಿ ದಾಖಲೆ ನಿರ್ಮಿಸಿದಂತಾಗಿದೆ.

Share this Story:

Follow Webdunia kannada