Webdunia - Bharat's app for daily news and videos

Install App

ಬೀಜಿಂಗ್: ತಿಯಾನಾಮನ್ ಸ್ಕ್ವಾರ್‌‌ನಲ್ಲಿ ಬಿಗಿ ಬಂದೋಬಸ್ತ್

Webdunia
ಬುಧವಾರ, 30 ಜುಲೈ 2008 (15:52 IST)
ಒಲಿಂಪಿಕ್ ಮಹಾನ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಆ ನಿಟ್ಟಿನಲ್ಲಿ ಚೀನಾ ಅತೀ ಸೂಕ್ಷ್ಮ ಪ್ರದೇಶವಾದ ತಿಯಾನಾಮನ್ ಸ್ಕ್ವಾರ್ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್‌‌ಗೆ ಏರ್ಪಡಿಸಿರುವುದಾಗಿ ರಾಜ್ಯದ ಮಾಧ್ಯಮ ವರದಿ ಬುಧವಾರ ತಿಳಿಸಿದೆ.

ತಿಯಾನಾಮನ್ ಸ್ಕ್ವಾರ್ ಅನ್ನು ಒಳ ಪ್ರವೇಶಿಸುವ ಮುನ್ನ ಎಲ್ಲಾ ಪ್ರವಾಸಿಗರನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸ್ಕ್ವಾರ್ ಮ್ಯಾನೇಜ್‌‌ಮೆಂಟ್ ಸಮಿತಿಯ ಜಿಯಾ ಯಿಂಗ್ಟಿಂಗ್ ಅವರು ಹೇಳಿರುವುದಾಗಿ ಸ್ಥಳೀಯ ಸುದ್ದಿಸಂಸ್ಥೆಯ ವರದಿ ವಿವರಿಸಿದೆ.

ತಿಯಾನಾಮನ್ ಸ್ಕ್ವಾರ್‌‌ನ ನೆಲಮಹಡಿಯಿಂದ ಪ್ರವೇಶ ದ್ವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಯಾ ತಿಳಿಸಿದ್ದಾರೆ.

ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ನಾವು ತಪಾಸಣಾ ಕಾರ್ಯವನ್ನು ಮತ್ತಷ್ಟು ಬಲಗೊಳಿಸುವುದಾಗಿ ಹೇಳಿದರು.

1989 ರಲ್ಲಿ ತಿಯಾನಾಮನ್ ಸ್ಕ್ವಾರ್‌‌ನಲ್ಲಿ ವಾರಗಳ ಕಾಲ ಪ್ರಜಾಪ್ರಭುತ್ವ ಪರ ಹೋರಾಟ ನಡೆದಿತ್ತು, ಆ ಸಂದರ್ಭದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಕಮ್ಯೂನಿಷ್ಟ್ ಆಡಳಿತದ ಚೀನಾದಲ್ಲಿ ತಿಯಾನಾಮನ್ ಸ್ಕ್ವಾರ್‌ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments