Select Your Language

Notifications

webdunia
webdunia
webdunia
webdunia

ಬೀಜಿಂಗ್: ಇಂದು ವಿಜೇಂದರ್‌‌ಗೆ ಗುಡ್ ಪ್ರೈಡೇ...

ಬೀಜಿಂಗ್: ಇಂದು ವಿಜೇಂದರ್‌‌ಗೆ ಗುಡ್ ಪ್ರೈಡೇ...
ಬೀಜಿಂಗ್ , ಶುಕ್ರವಾರ, 22 ಆಗಸ್ಟ್ 2008 (11:15 IST)
PTI
ಒಲಿಂಪಿಕ್ ಕ್ರೀಡಾಕೂಟದಲ್ಲಿ ಶುಕ್ರವಾರ ನಡೆಯಲಿರುವ ಬಾಕ್ಸಿಂಗ್ ಕದನ ಭಾರತದ ಪಾಲಿಗೆ ಗುಡ್ ಫ್ರೈಡೇಯಾಗಲಿದ್ದು,ಕೋಟ್ಯಂತರ ಕ್ರೀಡಾಭಿಮಾನಿಗಳು ಬಾಕ್ಸರ್ ವಿಜೇಂದರ್ ಗೆಲುವು ಸಾಧಿಸಿ,ಚಿನ್ನದ ಪದಕ ಪಡೆಯುವಂತಾಗಲಿ ಎಂಬ ನಿರೀಕ್ಷೆಯೊಂದಿಗೆ ಶುಭ ಹಾರೈಸುತ್ತಿದ್ದಾರೆ.

ವಿಜೇಂದರ್ ಕುಮಾರ್ ಅವರು ಆ.20 ರಂದು ನಡೆದ ಬಾಕ್ಸಿಂಗ್‌ನ 75ಕೆಜಿ ವಿಭಾಗದಲ್ಲಿ ಈಕ್ವೆಡಾರ್‌ನ ಕಾರ್ಲೋಸ್ ಗೊಂಗೊರಾ ವಿರುದ್ಧ ಗೆಲುವ ಸಾಧಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದರು.

ಶುಕ್ರವಾರ ನಡೆಯಲಿರುವ ಬಾಕ್ಸಿಂಗ್‌‌ನ ಸೆಮಿ ಫೈನಲ್ ಪಂದ್ಯದಲ್ಲಿ ವಿಜೇಂದರ್ ಅವರು ಎದುರಾಳಿ ಕ್ಯೂಬಾದ ಎಮಿಲಿಯೋ ಕೊರೈಯಾ ಪೇಯಾಕ್ಸ್ ಅವರನ್ನು ಎದುರಿಸಲಿದ್ದಾರೆ. ಸೆಮಿ ಫೈನಲ್‌ನಲ್ಲಿ ವಿಜೇಂದರ್ ಎಮಿಲಿಯೋ ವಿರುದ್ಧ ಸೋಲನ್ನನುಭವಿಸಿದರೂ ಕೂಡ ಕಂಚಿನ ಪದಕ ನಿಶ್ಚಿತ.

ಆದರೆ ಕನಸುಗಾರ ವಿಜೇಂದರ್ ಅವರು ತನ್ನ ಗುರಿ ಚಿನ್ನದ ಪದಕ ಪಡೆಯುವುದು ಎಂಬುದಾಗಿ ಈಗಾಗಲೇ ಘೋಷಿಸಿದ್ದು,ಆ ನಿಟ್ಟಿನಲ್ಲಿ ಇಂದು ನಡೆಯಲಿರುವ ಹಣಾಹಣಿಯಲ್ಲಿ ವಿಜೇಂದರ್ ಅವರ ಅದೃಷ್ಟ ಪರೀಕ್ಷೆ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲಿ ಎಂಬುದೇ ಕ್ರೀಡಾಭಿಮಾನಿಗಳ ಆಶಯವಾಗಿದೆ.

ವಿಜೇಂದರ್ ಕನಸು: ಸ್ವಂತ ಪರಿಶ್ರಮದಿಂದ ಬಾಕ್ಸಿಂಗ್‌ ಪಂದ್ಯದಲ್ಲಿ ಎತ್ತರಕ್ಕೆ ಏರಿದ್ದ ವಿಜೇಂದರ್ ಅವರು ಹರ್ಯಾಣದ ಭಿವಾನಿ ಎಂಬ ಗ್ರಾಮದಲ್ಲಿ 1985ರಲ್ಲಿ ಜನಿಸಿದ್ದರು.

ತನ್ನ ಅಣ್ಣನ ಸ್ಫೂರ್ತಿಯೊಂದಿಗೆ ಚಿಕ್ಕಂದಿನಲ್ಲಿಯೇ ಬಾಕ್ಸಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ವಿಜೇಂದರ್‌ಗೆ ಸರ್ಕಾರ ನೆರವು ಮಾತ್ರ ಶೂನ್ಯವಾಗಿತ್ತು. ಆದರೂ ಛಲಬಿಡದ ವಿಕ್ರಮನಂತೆ ಬಾಕ್ಸಿಂಗ್‌ನಲ್ಲಿಯೇ ಮುಂದುವರಿದ ವಿಜೇಂದರ್ 2004ರಲ್ಲಿ ನಡೆದ ಅಥೆನ್ಸ್ ಕ್ರೀಡಾಕೂಟದಲ್ಲಿ 17ನೇ ಸ್ಥಾನ ಪಡೆದಿದ್ದರು.

2006ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 2ನೇ ಸ್ಥಾನ,2006ರ ಏಷ್ಯನ್ ಗೇಮ್ಸ್‌ನಲ್ಲಿ 3ನೇ ಸ್ಥಾನ ಪಡೆದಿದ್ದ ಅವರು ಮುಂದೊಂದು ದಿನ ತಾನು ಪದಕ ಗೆದ್ದೇ ಗೆಲ್ಲುತ್ತೇನೆ ಎಂಬ ದೃಢ ವಿಶ್ವಾಸ ಹೊಂದಿದ್ದರು.

ಆ ಕನಸು ಇಂದು ಬೀಜಿಂಗ್ ಒಲಿಂಪಿಕ್ ಗೇಮ್ಸ್‌ನಲ್ಲಿ ನನಸಾಗುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲಿಯೇ ದಾಖಲೆಯ ಪುಟಗಳು ಸೇರಿದಂತಾಗಲಿದೆ.

Share this Story:

Follow Webdunia kannada