Webdunia - Bharat's app for daily news and videos

Install App

ಬೀಚ್ ವಾಲಿಬಾಲ್-ಅಮೆರಿಕ ಮುಡಿಗೆ ಸ್ವರ್ಣ

Webdunia
ಗುರುವಾರ, 21 ಆಗಸ್ಟ್ 2008 (21:15 IST)
ಅಮೆರಿಕದ ಖ್ಯಾತ ಬೀಚ್ ವಾಲಿಬಾಲ್ ಆಟಗಾರ್ತಿಯರಾದ ಮಿಸ್ಟಿಮೇ-ಟ್ರಿನೊರ್ ಮತ್ತು ಕೆರ್ರಿ ವಾಲ್ಷ್ ಅವರು ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಗುರುವಾರ ನಡೆದ ಮಹಿಳೆಯರ ಬೀಚ್ ವಾಲಿಬಾಲ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ.

ಬೀಜಿಂಗ್‌ನ ವಾಲಿಬಾಲ್ ಅಂಗಳದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಅಮೆರಿಕ ಚೀನಾವನ್ನು 21-18,21-18ರ ಅಂಕಗಳಿಂದ ಸೋಲಿಸಿತು.

ಬೀಚ್ ವಾಲಿಬಾಲ್ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿದ್ದ ಚೀನಾ-ಅಮೆರಿಕ ತಂಡಗಳ ಗೆಲುವಿಗಾಗಿ ಭಾರೀ ಪೈಪೋಟಿ ನಡೆದು,ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.

ಪ್ರಥಮ ಸೆಟ್‌ನಲ್ಲಿ ಅತ್ಯುತ್ತಮ ಶಾಟ್‌ಗಳನ್ನು ಹೊಡೆದ ಅಮೆರಿಕ 21-18ರಿಂದ ಗೆದ್ದುಕೊಂಡಿತು. ನಂತರ ದ್ವಿತೀಯ ಸೆಟ್‌ನಲ್ಲಿ ಪೈಪೋಟಿ ನೀಡಲು ಮುಂದಾದ ಚೀನಾವನ್ನು ಅಮೆರಿಕ ಸದೆ ಬಡಿದು,ಪ್ರಥಮ ಮೂರು ಪಾಯಿಂಟ್‌ಗಳನ್ನು ತನ್ನ ಬಗಲಿಗೇರಿಸಿಕೊಂಡಿತು.

ಕೊನೆಗೂ ಅಮೆರಿಕ ಚೀನಾವನ್ನು 21-18ರಿಂದ ಸೋಲಿಸಿತು. ಇದರಿಂದ ಅಮೆರಿಕ ಡ್ರೀಮ್ ಟೀಮ್ ಬೀಚ್ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಸ್ವರ್ಣ ಪದಕವನ್ನು ತನ್ನ ಮುಡಿಗೇರಿಸಿಕೊಂಡಿತು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments