Select Your Language

Notifications

webdunia
webdunia
webdunia
webdunia

ಬಾಕ್ಸಿಂಗ್: ಸೆಮಿ ಫೈನಲ್ ಪ್ರವೇಶಿಸಿದ ವಿಜೇಂದರ್

ಬಾಕ್ಸಿಂಗ್: ಸೆಮಿ ಫೈನಲ್ ಪ್ರವೇಶಿಸಿದ ವಿಜೇಂದರ್
ಬೀಜಿಂಗ್ , ಬುಧವಾರ, 20 ಆಗಸ್ಟ್ 2008 (19:14 IST)
PTI
ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ವಿಜೇಂದರ್ ಕುಮಾರ್ ಅವರು ಬಾಕ್ಸಿಂಗ್‌ನ 75ಕೆಜಿ ವಿಭಾಗದಲ್ಲಿ ಈಕ್ವೆಡಾರ್‌ನ ಕಾರ್ಲೋಸ್ ಗೊಂಗೊರಾ ವಿರುದ್ಧ ಗೆಲುವ ಸಾಧಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದಾರೆ.

ಪ್ರಥಮ ಸುತ್ತಿನಲ್ಲಿ ವಿಜೇಂದರ್ ಕುಮಾರ್ ಅವರು ಉತ್ತಮ ಆರಂಭದೊಂದಿಗೆ ಕಾರ್ಲೋಸ್ ವಿರುದ್ಧ 2-0ರ ಅಂತರದಿಂದ ಜಯದ ನಗು ಬೀರಿದರು.

ಎರಡನೇ ಸುತ್ತಿನಲ್ಲೂ ಎದುರಾಳಿಗೆ ಬಲವಾದ ಮುಷ್ಠಿ ಪ್ರಹಾರದೊಂದಿಗೆ ಮಣಿಸುವ ಮೂಲಕ 4-1ರ ಅಂತರ ಮೂಲದ ವಿಜೇಂದರ್ ಮುನ್ನಡೆ ಸಾಧಿಸಿದರು.

ತುಂಬು ಉತ್ಸಾಹದೊಂದಿಗೆ ತಮ್ಮ ಮುಷ್ಠಿ ಪ್ರಹಾರವನ್ನು ಮುಂದುವರಿಸಿದ್ದ ವಿಜೇಂದರ್ ಮೂರನೇ ಸುತ್ತಿನಲ್ಲೂ 7-2ರ ಅಂತರದೊಂದಿಗೆ ಸೆಮಿ ಫೈನಲ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿದರು.

ನಾಲ್ಕನೇ ಸುತ್ತಿನಲ್ಲಿ ಪ್ರಬಲ ಹೋರಾಟ ನೀಡಿದ ವಿಜೇಂದರ್ ಅವರು ಕಾರ್ಲೋಸ್‌ಗೆ ಅವಕಾಶ ನೀಡದೆ 9-4ರ ಮುನ್ನಡೆಯೊಂದಿಗೆ ಗೆಲುವು ಸಾಧಿಸಿ ಸೆಮಿ ಫೈನಲ್ ಅನ್ನು ಯಶಸ್ವಿಯಾಗಿ ಪ್ರವೇಶಿಸಿದ್ದಾರೆ.

Share this Story:

Follow Webdunia kannada