Select Your Language

Notifications

webdunia
webdunia
webdunia
webdunia

ಫೆಲೆಪ್ಸ್‌‌ 8 ಚಿನ್ನದ ಪದಕ ಗಳಿಸುತ್ತಾರೆ: ಹಾಕೆಟ್ಟ್

ಫೆಲೆಪ್ಸ್‌‌ 8 ಚಿನ್ನದ ಪದಕ ಗಳಿಸುತ್ತಾರೆ: ಹಾಕೆಟ್ಟ್
ಕೌಲಾಲಂಪುರ , ಮಂಗಳವಾರ, 29 ಜುಲೈ 2008 (17:41 IST)
ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಮೈಕಲ್ ಫೆಲೆಪ್ಸ್ ಅವರು ಮಾರ್ಕ್ ಸ್ಪಿಡ್ಜ್ಸ್‌‌ ಅವರ ಹೆಸರಿನಲ್ಲಿರುವ 7ಚಿನ್ನದ ಪದಕಗಳ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಆಸ್ಟ್ರೇಲಿಯನ್ ಖ್ಯಾತ ಈಜುಪಟು ಗ್ರಾಂಟ್ ಹಾಕೆಟ್ಟ್ ಅವರು ಮಂಗಳವಾರ ಭರವಸೆ ವ್ಯಕ್ತಪಡಿಸಿದ್ದಾರೆ.

ಆ ನಿಟ್ಟಿನಲ್ಲಿ ಫೆಲೆಪ್ಸ್ ಅವರು ಮಾರ್ಕ್ ಸ್ಪಿಡ್ಜ್ಸ್‌‌ 1972ರಲ್ಲಿ ನಿರ್ಮಿಸಿದ್ದ ಇತಿಹಾಸವನ್ನು, ಮುಂದಿನ ತಿಂಗಳು ಬೀಜಿಂಗ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಎಂಟು ಚಿನ್ನದ ಪದಕ ಗಳಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ ಎಂದು ಹೇಳಿದ್ದಾರೆ.

ಒಂದೇ ಗೇಮ್ಸ್‌ನಲ್ಲಿ ಎಂಟು ಚಿನ್ನದ ಪದಕ ಪಡೆಯಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದು ಎಂದು ಹಾಕೆಟ್ಟ್ ಪ್ರಶ್ನಿಸಿದ್ದಾರೆ. ಆದರೆ ಆಸ್ಟ್ರೇಲಿಯಾದ ಖ್ಯಾತ ಮಾಜಿ ಈಜುಗಾರ ಇಯಾನ್ ತ್ರೋಪೆ ಅವರು ಫೆಲೆಪ್ಸ್ ಅವರಿಗೆ ಆ ರೀತಿ ಸಾಧ್ಯವಾಗುವುದನ್ನು ಅವರು ನಿರಾಕರಿಸಿದ್ದರು.

ಮೈಕಲ್ ನಿಜಕ್ಕೂ ಆ ಸಾಧನೆ ಮಾಡಲಿದ್ದಾರೆ, ಆ ಕಾರಣಕ್ಕಾಗಿ ಅವರು ಖಂಡಿತವಾಗಿಯೂ ತಮ್ಮ ಗುರಿಯನ್ನು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಹಾಕೆಟ್ಟ್ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada