Webdunia - Bharat's app for daily news and videos

Install App

ಪದಕದ ಅವಕಾಶವಿತ್ತೆಂದು ತಿಳಿದಿತ್ತು: ಸುಶೀಲ್

Webdunia
ಗುರುವಾರ, 21 ಆಗಸ್ಟ್ 2008 (09:56 IST)
WD
ಸುಶೀಲ್ ಕುಮಾರ್‌ರ ಒಲಿಂಪಿಕ್ಸ್ ಕಂಚು ಭಾರತೀಯರಿಗೆ ವಿಸ್ಮಯಕಾರಿ ಆನಂದವನ್ನು ತಂದಿತ್ತಿರಬಹುದು, ಆದರೆ ದೆಹಲಿಯ ಕುಸ್ತಿಪಟು ಹೇಳುವಂತೆ ಅವರಿಗೆ ದೊರೆತ ಪದಕ ಅಮಾವಾಸ್ಯೆಯಲ್ಲಿ ಮೂಡಿದ ಚಂದ್ರನಲ್ಲ.

" ಬಹುಶಃ ನೀವು ಹೇಳಬಹುದು ದೇಶದ ಜನರು ಮತ್ತು ಮಾಧ್ಯಮಗಳು ಕೂಡ ಯಾವುದೇ ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲವೆಂದು, ಆದರೆ ನಾನು ಮತ್ತು ನನ್ನ ಕೋಚ್ ನನಗೆ ಪದಕ ಗೆಲ್ಲುವ ಸೂಕ್ತ ಅವಕಾಶವಿದೆ ಎಂಬುದನ್ನು ತಿಳಿದ್ದಿದ್ದೆವು ಮತ್ತು ನಾನು ಅದನ್ನು ಸಾಧಿಸಿದುದರ ಬಗ್ಗೆ ನಾನು ಬಹಳ ಸಂತೋಷಗೊಂಡಿದ್ದೇನೆ" ಎಂದು ಮಂದಸ್ಮಿತ ಸುಶೀಲ್ ಚೀನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

" ನಮ್ಮ ಮೇಲೆ ನಿರೀಕ್ಷೆಗಳ ಭಾರವಿಲ್ಲದಿರುವುದು ಉತ್ತಮವಾದರೂ, ನನ್ನ ಪ್ರಕಾರ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದಲ್ಲಿ ಹೆಚ್ಚಿನ ಸಾಧನೆಗಳು ಮೂಡಿಬರಬಹುದು" ಎಂದ ಸುಶೀಲ್ ಈ ಸಂದರ್ಭವನ್ನು ಸೂಕ್ತ ಸಂದೇಶವೊಂದನ್ನು ರವಾನಿಸಲು ಬಳಸಿಕೊಂಡರು.

" ನಾನು ನನ್ನ ಪದಕವನ್ನು ನನ್ನ ಕೋಚ್ ಸತ್ಪಾಲ್‌ರಿಗೆ ಅರ್ಪಿಸಲು ಬಯಸುತ್ತೇನೆ" ಎಂದು ವಿಶ್ವದಲ್ಲಿ 7ನೇ ಸ್ಥಾನದಲ್ಲಿರುವ ಸುಶೀಲ್ ಹೇಳಿದ್ದಾರೆ.

ಸುಶೀಲ್ ಮೊದಲ ಸುತ್ತಿನಲ್ಲಿ ಆಂಡ್ರಿ ಸ್ಟಾಡ್ನಿಕ್(ಬೆಳ್ಳಿ ಪದಕ ವಿಜೇತ) ವಿರುದ್ಥ ಸೋಲು ಕಂಡಾಗ ಉತ್ಸಾಹ ವಿಹೀನವಾದುದನ್ನು ಒಪ್ಪಿಕೊಂಡ ಸುಶೀಲ್, ರೆಪೆಶಾಜ್ ಆಶಾಕಿರಣವೊಂದನ್ನು ಒದಗಿಸಿತು ಮತ್ತು ತಾನು ಈ ಅವಕಾಶವನ್ನು ಕೈಬಿಡದಿರಲು ನಿರ್ಧರಿಸಿದ್ದಾಗಿ ಹೇಳಿದರು.

" ಆದರೆ ಇದು ಸುಲಭದ ಕೆಲಸವಾಗಿರಲಿಲ್ಲ. ನಾನು ಒಂದೇ ದಿನದಲ್ಲಿ ನಾಲ್ಕು ಸುತ್ತುಗಳಲ್ಲಿ ಸ್ಪರ್ಧಿಸಬೇಕಿತ್ತು, ದಿನದಂತ್ಯದಲ್ಲಿ ನಾನು ಬಹಳ ದಣಿದಿದ್ದೆ. ನಾನು ಡೌಜ್ ಶ್ವಾಬ್(ಅಮೆರಿಕಾ) ಮತ್ತು ಆಲ್ಬರ್ಟ ಬಾಟಿರೊವ್‌( ಬೆಲಾರುಸ್‌) ಅವರನ್ನು ಹಿಂದೆಂದೊ ಎದುರಿಸಿರಲಿಲ್ಲ. ಆದ್ದರಿಂದ ಅವರುಗಳು ನನಗೆ ಅಪರಿಚಿತ ಪ್ರತಿಸ್ಫರ್ಧಿಗಳಾಗಿದ್ದರು. ನಾನು ಅವರಿಬ್ಬರನ್ನು ಹಿಂದಿಕ್ಕಿದ ಮೇಲೆ ಲಿಯೊನಿಡ್ ಸ್ಪಿರಿಡೊನೊವ್(ಕಜುಕಿಸ್ತಾನ್) ನನ್ನ ಮುಂದಿದ್ದರು, ಪದಕ ಗೆಲ್ಲುವ ಅವಕಾಶವನ್ನು ಕಂಡುಕೊಂಡೆ. ನಾನು ನನ್ನಲ್ಲಿಯೇ ಹೇಳಿಕೊಂಡೆ 'ಪದಕದ ಇಷ್ಟು ಸಮೀಪ ಬಂದ ನಂತರ ನಾನು ಅದನ್ನು ಕೈ ಜಾರಗೊಡಬಾರದು'. ಮತ್ತು ನಾನು ದಣಿದಿದ್ದರೆ ಆತನೂ ಕೂಡ ಅಷ್ಟೇ ದಣಿದಿರುತ್ತಾನೆ ಎಂದು ನನ್ನನ್ನು ನಾನು ಉತ್ತೇಜಿಸಿಕೊಂಡೆ" ಎಂದರು ಸುಶೀಲ್.

" ನಾನು ಇದನ್ನು ಸಾಧಿಸಲು ಏನೆಲ್ಲಾ ಬೇಕೋ ಅದನ್ನೆಲ್ಲವನ್ನು ಮಾಡುತ್ತೇನೆ ಎಂದು ಯೋಚಿಸಿಕೊಂಡೆ ಮತ್ತು ಅಂತಿಮ ಫಲಿತಾಂಶ, ಪದಕ ನನ್ನದಾಯಿತು. ಇದು ನನ್ನ ಜೀವನದಲ್ಲಿ ಮರೆಯಲಾರದ ಕ್ಷಣ ಮತ್ತು ನಾನು ಕನಸಿನ ಲೋಕದಲ್ಲಿರುವಂತೆ ನನಗೆ ಅನಿಸುತ್ತಿದೆ" ಎಂದರು ಭಾರತದ ಹೆಮ್ಮೆಯ ಕುಸ್ತಿ ಪಟು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments