Select Your Language

Notifications

webdunia
webdunia
webdunia
webdunia

ಕುಸ್ತಿಯಲ್ಲಿ ಕಂಚು ಗೆದ್ದ 'ಸುಶೀಲ್'

ಕುಸ್ತಿಯಲ್ಲಿ ಕಂಚು ಗೆದ್ದ 'ಸುಶೀಲ್'
ಬೀಜಿಂಗ್ , ಬುಧವಾರ, 20 ಆಗಸ್ಟ್ 2008 (17:17 IST)
PTI
ಒಲಿಂಪಿಕ್ ಕ್ರೀಡಾಕೂಟದ 66ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿ ಹಣಾಹಣಿಯ ಅಂತಿಮ ಸುತ್ತಿನಲ್ಲಿ ಭಾರತದ ಸುಶೀಲ್ ಕುಮಾರ್ ಅವರು ಎದುರಾಳಿ ಕಜಕಿಸ್ತಾನದ ಲಿಯೊನಿಡ್ ಸ್ಪಿರಿಡೊನೊವ್ ಅವರನ್ನು ಮಣ್ಣುಮುಕ್ಕಿಸುವ ಮೂಲಕ ಕಂಚಿನ ಪದಕವನ್ನು ಜಯಿಸಿ ಭಾರತದ ಕುಸ್ತಿಪಂದ್ಯದಲ್ಲಿ ನೂತನ ಇತಿಹಾಸವನ್ನೇ ನಿರ್ಮಿಸಿದಂತಾಗಿದೆ.

ಬುಧವಾರ ಬೆಳಿಗ್ಗೆ ಆರಂಭಗೊಂಡ ಫ್ರೀ ಸ್ಟೈಲ್‌ನ 66ಕೆಜಿ ವಿಭಾಗದ ಪ್ರಥಮ ಸುತ್ತಿನಲ್ಲಿ ಸುಶೀಲ್ ಕುಮಾರ್ ಅವರು ಉಕ್ರೇನ್‌ನ ಆಂಡ್ರಿ ಸ್ಟಾಡ್ನಿಕ್ ಎದುರು ಪರಾಭವ ಗೊಂಡಿದ್ದರು.

ಸ್ಟಾಡ್ನಿಕ್ ಅವರು ಉತ್ತಮ ಆರಂಭದೊಂದಿಗೆ ಪ್ರಥಮ ಸುತ್ತಿನಲ್ಲಿ ಸುಶೀಲ್ ವಿರುದ್ಧ ಮೊದಲ ಪಾಯಿಂಟ್ ಗಳಿಸುವ ಮೂಲಕ 2-1ರ ಮುನ್ನಡೆ ಸಾಧಿಸಿದ್ದರು.

ಎರಡನೇ ಸುತ್ತಿನಲ್ಲೂ ಸ್ಟಾಡ್ನಿಕ್ ಅವರು ಸುಶೀಲ್ ಅವರನ್ನು ಹಣಿಯುವ ಮೂಲಕ ಆರು ಅಂಕಗಳನ್ನು ಪಡೆದಿದ್ದರು,ಆದರೆ ಮೂರನೇ ಸುತ್ತಿನಲ್ಲಿ ಸ್ಟಾಡ್ನಿಕ್ ಅವರನ್ನು ಸೋಲಿಸಿ 4-15ರ ಮುನ್ನಡೆ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಸಫಲರಾಗಿದ್ದರು.

ಇದೀಗ ಕುಸ್ತಿ ಕದನದ ಫೈನಲ್ ಹಣಾಹಣಿಯಲ್ಲಿ ಕಜಕಿಸ್ತಾನದ ಲಿಯೊನಿಡ್ ವಿರುದ್ಧ ಮೇಲುಗೈ ಸಾಧಿಸುವ ಮೂಲಕ ಕಂಚಿನ ಪದಕದೊಂದಿಗೆ ಕೋಟ್ಯಂತರ ಭಾರತೀಯರನ್ನು ಪುಳಕಿತರನ್ನಾಗಿಸಿದರು.

ಒಲಿಂಪಿಕ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ ಸುಶೀಲ್ ಕುಮಾರ್ 2005ರಲ್ಲಿ ಅರ್ಜುನ್ ಪ್ರಶಸ್ತಿ ವಿಜೇತರಾಗಿದ್ದರು.

1952ರ ಬಳಿಕ ಕುಸ್ತಿಪಂದ್ಯದಲ್ಲಿ ಪ್ರಥಮ ಬಾರಿಗೆ ಕಂಚಿನ ಪದಕ ಪಡೆದ ಶ್ಲಾಘನೆ.

ಕಸಬಾ ಯಾದವ್ 1952ರಲ್ಲಿ ಪ್ರಥಮವಾಗಿ ಕುಸ್ತಿಯಲ್ಲಿ ಕಂಚಿನ ಪದಕ ಪಡೆದಿದ್ದರು.

4ನೇ ವೈಯಕ್ತಿಕ ಕಂಚು ಪಡೆದ ಹೆಗ್ಗಳಿಕೆ ಸುಶೀಲ್ ಕುಮಾರದ್ದು.

Share this Story:

Follow Webdunia kannada