Webdunia - Bharat's app for daily news and videos

Install App

ಒಲಿಂಪಿಕ್: 37ವಿಶ್ವ ದಾಖಲೆಗಳನ್ನು ಮುರಿಯಲಾಗಿದೆ....

Webdunia
ಶನಿವಾರ, 23 ಆಗಸ್ಟ್ 2008 (15:04 IST)
ಈ ಬಾರಿಯ ಒಲಿಂಪಿಕ್ ಗೇಮ್ಸ್‌ನಲ್ಲಿ ಒಟ್ಟು 37 ವಿಶ್ವ ಹಾಗೂ 77ಒಲಿಂಪಿಕ್ ದಾಖಲೆಗಳನ್ನು ಮುರಿಯಲಾಗಿದೆ ಎಂದು ಶುಕ್ರವಾರ ರಾತ್ರಿ ಬೀಜಿಂಗ್ ಗೇಮ್ಸ್ ಸಂಘಟಕರ ಪ್ರಕಟಣೆ ತಿಳಿಸಿದೆ.

29 ನೇ ಒಲಿಂಪಿಕ್ ಗೇಮ್ಸ್‌‌ ಕ್ರೀಡಾ ಸಮಿತಿಯ ಸಹಾಯಕ ನಿರ್ದೇಶಕ ಲಿಯು ವೆನ್‌ಬಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತ,ಈ ಬಾರಿಯ ಗೇಮ್ಸ್‌ನಲ್ಲಿ ಹಲವಾರು ವಿಶ್ವ ದಾಖಲೆಗಳನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿದರು.

ಅಲ್ಲದೇ ಈವರೆಗೆ ಒಟ್ಟು 237 ಸ್ವರ್ಣ ಪದಕ,238 ರಜತ ಹಾಗೂ 273 ಕಂಚಿನ ಪದಕಗಳನ್ನು ವಿಜೇತ ಕ್ರೀಡಾಳುಗಳಿಗೆ ಪ್ರದಾನ ಮಾಡಲಾಗಿದೆ ಎಂದು ಲೀ ಈ ಸಂದರ್ಭದಲ್ಲಿ ಹೇಳಿದರು.

ಅದಕ್ಕಿಂತಲೂ ಬಹು ಮುಖ್ಯವಾದ ಅಂಶ ಈ ಸಲದ ಕ್ರೀಡಾಕೂಟದಲ್ಲಿ ಉದ್ದೀಪನಾ ಮದ್ದು ಸೇವನೆ ಅಂಶ ಗಣನೀಯವಾಗಿ ಕಡಿಮೆಯಾಗಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ವಕ್ತಾರ ಗಿಸೆಲ್ಲೆ ಡಾವಿಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗೇಮ್ಸ್‌ನಲ್ಲಿ 4620 ಉದ್ದೀಪನಾ ಪರೀಕ್ಷೆಗಳನ್ನು ಮಾಡಲಾಗಿದ್ದು,ಅದರಲ್ಲಿ 3681ಮೂತ್ರ ಪರೀಕ್ಷೆ ಹಾಗೂ 939ರಕ್ತ ಪರೀಕ್ಷೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಒಲಿಂಪಿಕ್ ಕ್ರೀಡಾ ವೀಕ್ಷಣೆಗಾಗಿ ಶುಕ್ರವಾರದವರೆಗೆ 408,271ಟಿಕೆಟ್‌‌ಗಳು ಮಾರಾಟವಾಗಿದ್ದರೆ,ಕೇವಲ ಗುರುವಾರದಂದು 30,418ಟಿಕೆಟ್ ಮಾರಾಟವಾಗಿತ್ತು ಎಂದು ಒಲಿಂಪಿಕ್ ಆರ್ಗನೈಜೇಶನ್ ಸಮಿತಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಾಂಗ್ ವೇ ತಿಳಿಸಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments