Webdunia - Bharat's app for daily news and videos

Install App

ಒಲಿಂಪಿಕ್: 2ನೇ ಸುತ್ತಿನಿಂದ ಶರತ್ ಔಟ್

Webdunia
ಬುಧವಾರ, 20 ಆಗಸ್ಟ್ 2008 (11:12 IST)
ಭಾರತದ ಖ್ಯಾತ ಟೇಬಲ್ ಟೆನಿಸ್ ಪಟು ಅಚಂತಾ ಶರತ್ ಕಮಲ್ ಬುಧವಾರ ಬೆಳಿಗ್ಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ನಡೆದ ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್‌‌ ಸ್ಪರ್ಧೆಯಲ್ಲಿ ಆಸ್ಟ್ರೀಯಾದ ವೆಕ್ಸಿಂಗ್ ಚೆನ್ ವಿರುದ್ಧ ಪರಾಭವಗೊಳ್ಳುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಶರತ್ ಕಮಲ್ ಎದುರಾಳಿ ಆಸ್ಟ್ರೀಯಾದ ಚೆನ್ ಅವರು ಎರಡನೇ ಸುತ್ತಿನಲ್ಲಿ 11-5, 14-12, 11-2, 8-11 ಮತ್ತು 10-12ರ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಒಲಿಂಪಿಕ್ ಗೇಮ್ಸ್‌ನಿಂದ ಹೊರಬೀಳುವಂತಾಗಿದೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಪುರುಷರ ಸಿಂಗಲ್ಸ್ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಎದುರಾಳಿ ಸ್ಪೇಯ್ನ್‌‌ನ ಅಲ್‌‌‌ಫ್ರೆಡೋ ಕಾರ್ನೆರೋಸ್ ಅವರನ್ನು 6-11,12-10,11-8,9-11,11-6,11-7ರ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.

ಚೆನ್ನೈನ ಯುವ ಪ್ರತಿಭೆ ಅಚಂತಾ ಶರತ್ ಕಮಲ್ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ಗಳಿಸಿದ್ದರು.ಆ ನಿಟ್ಟಿನಲ್ಲಿ ಒಲಿಂಪಿಕ್ ಗೇಮ್ಸ್‌ನ ಟೇಬಲ್ ಟೆನಿಸ್ ಸಿಂಗಲ್ಸ್‌ನಲ್ಲಿ ಉತ್ತಮ ಆರಂಭದೊಂದಿಗೆ ಮುನ್ನಡೆ ಸಾಧಿಸಿದ್ದರು.

2004 ರ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಶರತ್ ಕೇವಲ ವೈಯಕ್ತಿಕವಾಗಿ ಸ್ವರ್ಣ ಪದಕ ಮಾತ್ರ ಪಡೆದಿದ್ದಲ್ಲದೆ,ಭಾರತೀಯ ತಂಡ ಕೂಡ ಟೀಮ್ ಟೈಟಲ್ ಅನ್ನು ಬಾಚಿ ಕೊಂಡಿತ್ತು. ಅದೂ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸುವ ಮೂಲಕ ಶರತ್ ತಂಡ ಭಾರತೀಯರ ಶ್ಲಾಘನೆಗೆ ಪಾತ್ರವಾಗಿತ್ತು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments