Webdunia - Bharat's app for daily news and videos

Install App

ಒಲಿಂಪಿಕ್ ಗೇಮ್ಸ್‌ಗೆ 'ವರ್ಣರಂಜಿತ ತೆರೆ'

Webdunia
ಭಾನುವಾರ, 24 ಆಗಸ್ಟ್ 2008 (18:28 IST)
PTI
29 ನೇ ಐತಿಹಾಸಿಕ ಒಲಿಂಪಿಕ್ ಕ್ರೀಡಾಕೂಟ ಭಾನುವಾರ ಸಂಜೆ ಬರ್ಡ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು.

16 ದಿನಗಳ ಕಾಲ ನಡೆದ ಮಹಾನ್ ಕ್ರೀಡಾಕೂಟಕ್ಕೆ ಚೀನಾ ಅಧ್ಯಕ್ಷ ಹೂ ಜಿಂಟಾವೋ ಅವರು ದೇಶದ ರಾಷ್ಟ್ರಗೀತೆಯೊಂದಿಗೆ ಧ್ವಜವನ್ನು ಮೇಲಕ್ಕೆ ಹಾರಿ ಬಿಡುವ ಮೂಲಕ ಮ ು ಕ್ತಾಯ ಸಮಾರಂಭಕ್ಕೆ ಚಾಲನೆ ನೀಡಿದರು.'ಫುವಾ'ಎಂಬ ಚೀನಾದ ಸಂಗೀತದ ಮೂಲಕ ಬೀಜಿಂಗ್ ಒಲಿಂಪಿಕ್ ಗೇಮ್ಸ್ ಸಮಾರಂಭಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.

ವಿರಾಮ ಎಂಬ ಸಂದೇಶದೊಂದಿಗೆ 'ಫುವಾ' ಸಂಗೀತದ ನಾದದೊಂದಿಗೆ ಒಲಿಂಪಿಕ್ ಗೇಮ್ಸ್ ಅನ್ನು ಅದ್ದೂರಿಯಾಗಿ ಸಂಯೋಜಿಸಿ ಜಾಗತಿಕ ಮಟ್ಟದಲ್ಲಿ ಚೀನಾ ಸೂಪರ್ ಪವರ್ ಅನ್ನು ಜಗಜ್ಜಾಹೀರುಗೊಳಿಸಿದೆ.

ಈ ಬಾರಿ ಕೆಂಪುಕೋಟೆ ಚೀನಾ ನೆಲದಲ್ಲಿ ನಡೆದ ಅದ್ದೂರಿ ಐತಿಹಾಸಿಕ ಒಲಿಂಪಿಕ್ ಕ್ರೀಡಾಕೂಟ ನೂತನ ಇತಿಹಾಸವೊಂದನ್ನು ಸೃಷ್ಟಿಸಿದೆ.

ಇಡೀ ದೇಶವೇ ನಿಬ್ಬೆರಗಾಗುವ ರೀತಿಯ ಸುಡುಮದ್ದುಗಳ ಪ್ರದರ್ಶನ,ಇಡೀ ಬರ್ಡ್ಸ್ ನೆಸ್ಟ್ ‌ಕ್ರೀಡಾಂಗಣವೇ ಮಾಯಾಲೋಕವನ್ನೇ ಸೃಷ್ಟಿಸುವ ಮೂಲಕ ನ ಭೂತೋ ನ ಭವಿಷ್ಯತಿ ಎಂಬಂತೆ ಕಾರ್ಯಕ್ರಮಗಳ ಮೂಲಕ ಕ್ರೀಡಾಭಿಮಾನಿಗಳನ್ನು ಮೂಕವಿಸ್ಮಿತರನ್ನಾಗಿಸಿತು.

ಮೈನವಿರೇಳಿಸುವಂತಹ ಆಕರ್ಷಕ ಸಾಂಪ್ರದಾಯಿಕ ಕಲೆಗಳ ನರ್ತನ,ಬಾನಂಗಳದಲ್ಲಿ ಮೂಡಿದ ಬಣ್ಣಬಣ್ಣದ ಚಿತ್ತಾರ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು.

ಪ್ಲ್ಯಾಗ್ ಹಸ್ತಾಂತರ: ಮುಕ್ತಾಯ ಸಮಾರಂಭದಲ್ಲಿ ಅಧ್ಯಕ್ಷ ಜಿ ಹುಂಟಾವೋ ಅವರು 2012ರಲ್ಲಿ ಲಂಡನ್‌ನಲ್ಲಿ ಒಲಿಂಪಿಕ್ ನಡೆಯಲಿದ್ದು,ಒಲಿಂಪಿಕ್ ಪ್ಲ್ಯಾಗ್ ಅನ್ನು ಲಂಡನ್ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

ಪದಕ ಪಟ್ಟಿಯಲ್ಲಿ ಅಮೆರಿಕ ಪ್ರಥಮ:16 ದಿನಗಳ ಕಾಲ ನಡೆದ ಒಲಿಂಪಿಕ್ ಪದಕ ಗಳಿಕೆಯಲ್ಲಿ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ 110 ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿದೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments