Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್‌ ಪದಕದತ್ತ ಟೆನಿಸ್ ದಿಗ್ಗಜರ ಕಣ್ಣು

ಒಲಿಂಪಿಕ್ಸ್‌ ಪದಕದತ್ತ ಟೆನಿಸ್ ದಿಗ್ಗಜರ ಕಣ್ಣು
ಬೀಜಿಂಗ್ ಒಲಿಂಪಿಕ್ಸ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪದಕದ ಗೆಲುವಿಗಾಗಿ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಟೆನಿಸ್ ಪಂದ್ಯಗಳನ್ನು 1988ರಿಂದ ಆರಂಭಿಸಲಾಗಿದ್ದು ಸತತ ಸ್ಪೇನ್ ಆಟಗಾರರು ಮಾತ್ರ ಚಿನ್ನದ ಪದಕಗಳನ್ನು ಗೆಲ್ಲುತ್ತಿದ್ದು, ಬೀಜಿಂಗ್‌ನಲ್ಲಿ ಕೂಡಾ ತಮ್ಮ ಸಾಧನೆಯೊಂದಿಗೆ ಪದಕವನ್ನು ಗಳಿಸುವತ್ತ ಚಿತ್ತ ಹರಿಸಿದ್ದಾರೆ.

ಹ್ಯಾಂಬರ್ಗ್‌ನಲ್ಲಿ ನಡೆದ ಮಾಸ್ಟರ್‌ ಸರಣಿ ಹಾಗೂ ರೋಲ್ಯಂಡ್ ಗ್ಯಾರೋಸ್‌ನಲ್ಲಿ ಸತತ ನಾಲ್ಕನೆ ಭಾರಿಗೆ ಗೆಲುವು, ಕ್ವಿನ್ಸ್ ಕ್ಲಬ್‌ ಸರಣಿಯಲ್ಲಿ ಗೆಲುವು, ಅತಿ ಮಹತ್ವದ್ದಾದ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ಅವರನ್ನು ಸೋಲಿಸಿ ಗೆಲುವು ಪಡೆದ ವಿಂಬಲ್ಡನ್ ನಂತರ ಒಲಿಂಪಿಕ್ಸ್‌ ಪದಕವನ್ನು ಪಡೆಯಲು ರಾಫೆಲ್ ನಡಾಲ್ ತಯಾರಿ ನಡೆಸುತ್ತಿದ್ದಾರೆ.

22ರ ಹರೆಯದ ರಾಫೆಲ್ ನಡಾಲ್ 2ನೇ ಶ್ರೇಯಾಂಕವನ್ನು ಹೊಂದಿದ್ದು ಒಂದು ವೇಳೆ ಸಿನ್ಸಿನ್ನಾಟಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದಲ್ಲಿ ಅಥವಾ ಫೆಡರರ್ ಸೆಮಿಫೈನಲ್ ಪ್ರವೇಶಿಸದಿದ್ದಲ್ಲಿ ಭಾನುವಾರದ ಎಟಿಪಿ ಶ್ರೇಯಾಂಕದಲ್ಲಿ ರಾಫೆಲ್ ನಡಾಲ್ ನಂಬರ್ ಒನ್ ಸ್ಥಾನಕ್ಕೆ ಏರಲಿದ್ದಾರೆ.

Share this Story:

Follow Webdunia kannada