Webdunia - Bharat's app for daily news and videos

Install App

ಒಲಿಂಪಿಕ್ಸ್‌ಗೆ ಟರ್ಕಿ ಉಗ್ರರಿಂದ ಬೆದರಿಕೆ

Webdunia
ಶನಿವಾರ, 26 ಜುಲೈ 2008 (13:45 IST)
ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದ ವೇಳೆ ಭಯೋತ್ಪಾದನಾ ದಾಳಿ ಬೆದರಿಕೆ ಇರುವ ವೀಡಿಯೋವನ್ನು ಟರ್ಕಿಶ್ ಇಸ್ಲಾಮಿಕ್ ಪಾರ್ಟಿ ಎಂದು ಕರೆದುಕೊಂಡ ತಂಡವೊಂದು ಬಿಡುಗಡೆಗೊಳಿಸಿದ್ದು, ಇತ್ತೀಚಿನ ಚೀನಾದ ಎರಡು ಬಸ್ ಸ್ಫೋಟಗಳಿಗೆ ತಾನೇ ಹೊಣೆ ಎಂಬುದಾಗಿ ಹೇಳಿಕೊಂಡಿದೆ ಎಂದು ಭಯೋತ್ಪಾದನಾ ಪರಿವೀಕ್ಷಣಾ ಸಂಸ್ಥೆಯು ತಿಳಿಸಿದೆ.

' ಅವರ್ ಬ್ಲೆಸ್ಡ್ ಜಿಹಾದ್ ಇನ್ ಯುನಾನ್' ಎಂಬ ಶೀರ್ಷಿಕೆಯನ್ನು ಹೊಂದಿದ ವೀಡಿಯೋವನ್ನು ಈ ತಂಡವು ಬಿಡುಗಡೆಗೊಳಿಸಿರುವುದಾಗಿ ಅಮೆರಿಕ ಮೂಲದ ಭಯೋತ್ಪಾದನಾ ಪರಿವೀಕ್ಷಣಾ ಸಂಸ್ಥೆ ಇಂಟೆಲ್‌ಸೆಂಟರ್ ತಿಳಿಸಿದ್ದು, ಮುಂದಿನ ತಿಂಗಳಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಬೆದರಿಕೆಯೊಡ್ಡಿದ ತಂಡದ ನಾಯಕ ಕಮಾಂಡರ್ ಸೈಫುಲ್ಲಾ ಅವರ ಹೇಳಿಕೆಯನ್ನು ಈ ವೀಡಿಯೋ ಹೊಂದಿದೆ.

ಬೀಜಿಂಗ್‌ನಲ್ಲಿ 29ನೇ ಒಲಿಂಪಿಕ್ಸ್‌ನ್ನು ನಿಲುಗಡೆಗೊಳಿಸುವ ಬಗ್ಗೆ ಅಂತಾರಾಷ್ಟ್ರೀಯ ಸಮೂಹಗಳು ಮತ್ತು ಟರ್ಕಿಶ್ ಇಸ್ಲಾಮಿಕ್ ಪಾರ್ಟಿ ಎಚ್ಚರಿಕೆಯನ್ನು ನೀಡುತ್ತಿರುವುದರೊಂದಿಗೆ, ಭಯೋತ್ಪಾದನಾ ಬೆದರಿಕೆಯ ಎಚ್ಚರಿಕೆಯನ್ನೂ ಚೀನೀಯರು ತಳ್ಳಿಹಾಕಿದ್ದಾರೆ ಎಂದು ಸೈಫುಲ್ಲಾ ಅವರನ್ನು ಉಲ್ಲೇಖಿಸಿ ಇಂಟೆಲ್‌ಸೆಂಟರ್ ತಿಳಿಸಿದೆ.

ಒಲಿಂಪಿಕ್ಸ್ ವೇಳೆ ಚೀನಾದ ಪ್ರಧಾನ ನಗರಗಳಲ್ಲಿ ದಾಳಿ ಮಾಡಲು ಸಜ್ಜುಗೊಂಡಿರುವುದಾಗಿ ಸೈಫುಲ್ಲಾ ತಿಳಿಸಿದ್ದು, ವಿಶೇಷವಾಗಿ ಮುಸ್ಲಿಂ ಅಥ್ಲೀಟ್‌ಗಳು ಮತ್ತು ವೀಕ್ಷಕರಿಗೆ ಒಲಿಂಪಿಕ್ಸ್‌ಗೆ ಆಗಮಿಸುವ ತಮ್ಮ ನಿರ್ಧಾರವನ್ನು ಬದಲಿಸುವಂತೆ ಒತ್ತಾಯಿಸಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments