Webdunia - Bharat's app for daily news and videos

Install App

ಬಾಕ್ಸಿಂಗ್: 'ಕಂಚಿ'ಗೆ ತೃಪ್ತಿಪಟ್ಟುಕೊಂಡ ವಿಜೇಂದರ್

Webdunia
ಶುಕ್ರವಾರ, 22 ಆಗಸ್ಟ್ 2008 (13:24 IST)
PTI
ಒಲಿಂಪಿಕ್ ಕ್ರೀಡಾಕೂಟದಲ್ಲಿ ಶುಕ್ರವಾರ ಮಧ್ನಾಹ್ನ 12.45ಕ್ಕೆ ಆರಂಭಗೊಂಡ ಸೆಮಿ ಫೈನಲ್ ಬಾಕ್ಸಿಂಗ್ ಹಣಾಹಣಿಯಲ್ಲಿ ಭಾರತದ ವಿಜೇಂದರ್ ಕುಮಾರ್ ಅವರು ಕ್ಯೂಬಾದ ಎಮಿಲಿಯೋ ಕೊರೈಯಾ ಪೇಯಾಕ್ಸ್ ವಿರುದ್ಧ 8-05ರ ಅಂತರದಲ್ಲಿ ಪರಾಜಯಗೊಳ್ಳುವ ಮೂಲಕ ಫೈನಲ್ ಪ್ರವೇಶ ಭಗ್ನಗೊಂಡಂತಾಗಿದ್ದು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಕ್ಯೂಬಾದ ಎಮಿಲಿಯೋ ಅವರ ವಿರುದ್ಧ ಪ್ರಥಮ ಸುತ್ತಿನಲ್ಲಿ ಎಮಿಲಿಯೋ ಅವರು ವಿಜೇಂದರ್ ಮೇಲೆ ತೀವ್ರ ಪಂಚ್ ಮಾಡುವ ಮೂಲಕ 2-0ಅಂತರದಲ್ಲಿ ಮುನ್ನಡೆ ಸಾಧಿಸಿದರು.

ಎರಡನೇ ಸುತ್ತಿನಲ್ಲಿ ವಿಜೇಂದರ್ ಅವರು ಪೂರ್ಣ ವಿಶ್ವಾಸದೊಂದಿಗೆ ಎಮಿಲಿಯೋ ವಿರುದ್ಧ ಬಲವಾದ ಮುಷ್ಠಿ ಪ್ರಹಾರ ಮಾಡುವ ಮೂಲಕ 4-3ರ ಅಂಕಗಳೊಂದಿಗೆ ಭರವಸೆಯನ್ನು ಮೂಡಿಸಿದರು.

ಆದರೆ ಮೂರನೇ ಸುತ್ತಿನಲ್ಲಿ ವಿಜೇಂದರ್ ಡಿಫೆನ್ಸ್ ಮೂಲಕ ಎದುರಾಳಿಯ ಹೊಡೆತಗಳಿಂದ ರಕ್ಷಣೆ ಪಡೆದರೂ ಕೂಡ ಎಮಿಲಿಯೋ 7-03 ರ ಅಂತರದೊಂದಿಗೆ ಮುನ್ನಡೆ ಸಾಧಿಸಿದರು.

ನಾಲ್ಕನೇ ಹಾಗೂ ಅಂತಿಮ ಸುತ್ತಿನ ಕದನದಲ್ಲಿ ವಿಜೇಂದರ್ ಅವರು ಪಂಚ್‌‌ಗಾಗಿ ಪರದಾಡಿದರೂ ಕೂಡ, ಎಮಿಲಿಯೋ ಅದಕ್ಕೆ ಅವಕಾಶ ನೀಡದೆ ಮೇಲುಗೈ ಸಾಧಿಸುವ ಮೂಲಕ 8-05ರ ಅಂತರದಲ್ಲಿ ಫೈನಲ್ ಪ್ರವೇಶಿಸಿ, ಭಾರತದ ಚಿನ್ನದ ಕನಸಿಗೆ ತಡೆ ಬಿದ್ದಂತಾಗಿದ್ದು, ಕಂಚಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ವಿಜೇಂದರ್ ಕುಮಾರ್ ಅವರು ಆ.20ರಂದು ನಡೆದ ಬಾಕ್ಸಿಂಗ್‌ನ 75ಕೆಜಿ ವಿಭಾಗದಲ್ಲಿ ಈಕ್ವೆಡಾರ್‌ನ ಕಾರ್ಲೋಸ್ ಗೊಂಗೊರಾ ವಿರುದ್ಧ ಗೆಲುವ ಸಾಧಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದರು.

ಕನಸುಗಾರ ವಿಜೇಂದರ್ ಅವರು ತನ್ನ ಗುರಿ ಚಿನ್ನದ ಪದಕ ಪಡೆಯುವುದು ಎಂಬುದಾಗಿ ಈಗಾಗಲೇ ಘೋಷಿಸಿದ್ದು, ಆ ನಿಟ್ಟಿನಲ್ಲಿ ಇಂದು ನಡೆದ ಸೆಮಿ ಫೈನಲ್ ಹಣ ಾ ಹಣಿಯಲ್ಲಿ ಬಹಳಷ್ಟು ಹೋರಾಟ ನಡೆಸಿದರೂ ಕೂಡ ಕ್ಯೂಬಾದ ಎಮಿಲಿಯೋ ಅದಕ್ಕೆ ಅವಕಾಶ ನೀಡದೆ ಭಾರತದ ಬಂಗಾರದ ಬೇಟೆಗೆ ತಡೆಯೊಡ್ಡಿದರು.

ಆದರೆ ಭಾರತ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಕಂಚು ಪಡೆಯುವ ಮೂಲಕ ಕ್ರೀಡಾ ಇತಿಹಾಸದಲ್ಲಿ ದಾಖಲೆಯನ್ನ ಬರೆದಂತಾಗಿದೆ.ನಡೆಯಲಿರುವ ಹಣಾಹಣಿಯಲ್ಲಿ ವಿಜೇಂದರ್ ಅವರ ಅದೃಷ್ಟ ಪರೀಕ್ಷೆ ನಡೆಯಲಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments