Select Your Language

Notifications

webdunia
webdunia
webdunia
webdunia

ಬಾಕ್ಸಿಂಗ್: 'ಕಂಚಿ'ಗೆ ತೃಪ್ತಿಪಟ್ಟುಕೊಂಡ ವಿಜೇಂದರ್

ಬಾಕ್ಸಿಂಗ್: 'ಕಂಚಿ'ಗೆ ತೃಪ್ತಿಪಟ್ಟುಕೊಂಡ ವಿಜೇಂದರ್
ಬಾಕ್ಸಿಂಗ್ , ಶುಕ್ರವಾರ, 22 ಆಗಸ್ಟ್ 2008 (13:24 IST)
PTI
ಒಲಿಂಪಿಕ್ ಕ್ರೀಡಾಕೂಟದಲ್ಲಿ ಶುಕ್ರವಾರ ಮಧ್ನಾಹ್ನ 12.45ಕ್ಕೆ ಆರಂಭಗೊಂಡ ಸೆಮಿ ಫೈನಲ್ ಬಾಕ್ಸಿಂಗ್ ಹಣಾಹಣಿಯಲ್ಲಿ ಭಾರತದ ವಿಜೇಂದರ್ ಕುಮಾರ್ ಅವರು ಕ್ಯೂಬಾದ ಎಮಿಲಿಯೋ ಕೊರೈಯಾ ಪೇಯಾಕ್ಸ್ ವಿರುದ್ಧ 8-05ರ ಅಂತರದಲ್ಲಿ ಪರಾಜಯಗೊಳ್ಳುವ ಮೂಲಕ ಫೈನಲ್ ಪ್ರವೇಶ ಭಗ್ನಗೊಂಡಂತಾಗಿದ್ದು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಕ್ಯೂಬಾದ ಎಮಿಲಿಯೋ ಅವರ ವಿರುದ್ಧ ಪ್ರಥಮ ಸುತ್ತಿನಲ್ಲಿ ಎಮಿಲಿಯೋ ಅವರು ವಿಜೇಂದರ್ ಮೇಲೆ ತೀವ್ರ ಪಂಚ್ ಮಾಡುವ ಮೂಲಕ 2-0ಅಂತರದಲ್ಲಿ ಮುನ್ನಡೆ ಸಾಧಿಸಿದರು.

ಎರಡನೇ ಸುತ್ತಿನಲ್ಲಿ ವಿಜೇಂದರ್ ಅವರು ಪೂರ್ಣ ವಿಶ್ವಾಸದೊಂದಿಗೆ ಎಮಿಲಿಯೋ ವಿರುದ್ಧ ಬಲವಾದ ಮುಷ್ಠಿ ಪ್ರಹಾರ ಮಾಡುವ ಮೂಲಕ 4-3ರ ಅಂಕಗಳೊಂದಿಗೆ ಭರವಸೆಯನ್ನು ಮೂಡಿಸಿದರು.

ಆದರೆ ಮೂರನೇ ಸುತ್ತಿನಲ್ಲಿ ವಿಜೇಂದರ್ ಡಿಫೆನ್ಸ್ ಮೂಲಕ ಎದುರಾಳಿಯ ಹೊಡೆತಗಳಿಂದ ರಕ್ಷಣೆ ಪಡೆದರೂ ಕೂಡ ಎಮಿಲಿಯೋ 7-03 ರ ಅಂತರದೊಂದಿಗೆ ಮುನ್ನಡೆ ಸಾಧಿಸಿದರು.

ನಾಲ್ಕನೇ ಹಾಗೂ ಅಂತಿಮ ಸುತ್ತಿನ ಕದನದಲ್ಲಿ ವಿಜೇಂದರ್ ಅವರು ಪಂಚ್‌‌ಗಾಗಿ ಪರದಾಡಿದರೂ ಕೂಡ, ಎಮಿಲಿಯೋ ಅದಕ್ಕೆ ಅವಕಾಶ ನೀಡದೆ ಮೇಲುಗೈ ಸಾಧಿಸುವ ಮೂಲಕ 8-05ರ ಅಂತರದಲ್ಲಿ ಫೈನಲ್ ಪ್ರವೇಶಿಸಿ, ಭಾರತದ ಚಿನ್ನದ ಕನಸಿಗೆ ತಡೆ ಬಿದ್ದಂತಾಗಿದ್ದು, ಕಂಚಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ವಿಜೇಂದರ್ ಕುಮಾರ್ ಅವರು ಆ.20ರಂದು ನಡೆದ ಬಾಕ್ಸಿಂಗ್‌ನ 75ಕೆಜಿ ವಿಭಾಗದಲ್ಲಿ ಈಕ್ವೆಡಾರ್‌ನ ಕಾರ್ಲೋಸ್ ಗೊಂಗೊರಾ ವಿರುದ್ಧ ಗೆಲುವ ಸಾಧಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದರು.

ಕನಸುಗಾರ ವಿಜೇಂದರ್ ಅವರು ತನ್ನ ಗುರಿ ಚಿನ್ನದ ಪದಕ ಪಡೆಯುವುದು ಎಂಬುದಾಗಿ ಈಗಾಗಲೇ ಘೋಷಿಸಿದ್ದು, ಆ ನಿಟ್ಟಿನಲ್ಲಿ ಇಂದು ನಡೆದ ಸೆಮಿ ಫೈನಲ್ ಹಣಹಣಿಯಲ್ಲಿ ಬಹಳಷ್ಟು ಹೋರಾಟ ನಡೆಸಿದರೂ ಕೂಡ ಕ್ಯೂಬಾದ ಎಮಿಲಿಯೋ ಅದಕ್ಕೆ ಅವಕಾಶ ನೀಡದೆ ಭಾರತದ ಬಂಗಾರದ ಬೇಟೆಗೆ ತಡೆಯೊಡ್ಡಿದರು.

ಆದರೆ ಭಾರತ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಕಂಚು ಪಡೆಯುವ ಮೂಲಕ ಕ್ರೀಡಾ ಇತಿಹಾಸದಲ್ಲಿ ದಾಖಲೆಯನ್ನ ಬರೆದಂತಾಗಿದೆ.ನಡೆಯಲಿರುವ ಹಣಾಹಣಿಯಲ್ಲಿ ವಿಜೇಂದರ್ ಅವರ ಅದೃಷ್ಟ ಪರೀಕ್ಷೆ ನಡೆಯಲಿದೆ.

Share this Story:

Follow Webdunia kannada