Select Your Language

Notifications

webdunia
webdunia
webdunia
webdunia

ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ

ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ವಿದ್ಯಾಗಿರಿ (ಮೂಡುಬಿದಿರೆ) , ಶುಕ್ರವಾರ, 28 ನವೆಂಬರ್ 2008 (19:14 IST)
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ ಪ್ರಕಾರಗಳ ಅನುರಣನದೊಂದಿಗೆ ಅದ್ದೂರಿಯೊಂದಿಗೆ ಆರಂಭವಾಯಿತು.

WD

ಬೆಳಿಗ್ಗೆ 9.15ರಿಂದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ನಾಡೋಜ, ಡಾ.ಚೆನ್ನವೀರ ಕಣವಿ ಅವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವ್ಯಾಸರಾಯ ಬಲ್ಲಾಳ ಸಭಾ ಮಂಟಪಕ್ಕೆ ಕರೆದು ತರಲಾಯಿತು. ಸಮ್ಮೇಳನದ ಉದ್ಘಾಟಕ, ನಾಡೋಜ ಕವಿ ಕೆ.ಎಸ್.ನಿಸಾರ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಶಾಸಕ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ನುಡಿಸಿರಿ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನದ ರೂವಾರಿ ಡಾ.ಮೋಹನ ಆಳ್ವ ಹಾಗೂ ಅವರ ತಂದೆ ಮಿಜಾರುಗುತ್ತು ಆನಂದ ಆಳ್ವ ಅವರನ್ನು ವೇದಿಕೆಗೆ ಸಡಗರದ ಮೆರವಣಿಗೆಯಲ್ಲಿ ಕರೆದು ತರಲಾಯಿತು.

ಕೊಂಬು ಕಹಳೆ, ಚೆಂಡೆವಾದನ, ಬೊಂಬೆ ಕುಣಿತ, ಹುಲಿವೇಷ ಇತ್ಯಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಸಮ್ಮೇಳನದ ಉದ್ಘಾಟನೆಗೆ ಕಳೆ ನೀಡಿದವು.

webdunia
WD


Share this Story:

Follow Webdunia kannada