Select Your Language

Notifications

webdunia
webdunia
webdunia
webdunia

ಮೋದಿಗಾಗಿ ಅರೆನಗ್ನಳಾಗಿ ಪ್ರಚಾರ ಮಾಡಿದ್ದ ನಟಿ ಮೇಘನಾ ಎನ್‌ಸಿಪಿಗೆ

ಮೋದಿಗಾಗಿ ಅರೆನಗ್ನಳಾಗಿ ಪ್ರಚಾರ ಮಾಡಿದ್ದ ನಟಿ ಮೇಘನಾ ಎನ್‌ಸಿಪಿಗೆ
ವಡೋದರಾ , ಮಂಗಳವಾರ, 2 ಆಗಸ್ಟ್ 2016 (12:52 IST)
2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪರವಾಗಿ ಅರೆನಗ್ನಳಾಗಿ ಪ್ರಚಾರ ಮಾಡಿದ್ದ ರೂಪದರ್ಶಿ, ನಟಿ ಮೇಘನಾ ಪಟೇಲ್ ನ್ಯಾಷ್ನಲಿಸ್ಟ್ ಕಾಂಗ್ರೆಸ್ ಪಾರ್ಟಿ ಸೇರ್ಪಡೆಯಾಗಿದ್ದಾರೆ.


ವಡೋದರಾಗೆ ಭೇಟಿ ನೀಡಿದ್ದ ಎನ್‌ಸಿಪಿ ಮುಖಂಡ, ಮಾಜಿ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಉಪಸ್ಥಿತಿಯಲ್ಲಿ ಅವರು ಪಕ್ಷಕ್ಕೆ ಸೇರಿದ್ದಾರೆ.

ಗುಜರಾತ್ ಮೂಲದ ಮೇಘನಾ ಮೋದಿ ಅವರಿಗೆ ಮತ ನೀಡಿ ಎಂದು ಬರೆದಿದ್ದ ಭಿತ್ತಿಪತ್ರಗಳಿಂದ ದೇಹದ ಅಂಗಾಂಗಗಳನ್ನು ಮುಚ್ಚಿಕೊಂಡ ಫೋಟೋ ಮತ್ತು  ಬಿಜೆಪಿಯ ಚಿಹ್ನೆ ಕಮಲದಿಂದ  ತನ್ನ ಅಂಗಾಂಗಗಳನ್ನು ಮುಚ್ಚಿಕೊಂಡ ಫೋಟೋಗಳ ಮೂಲಕ ಅರೆನಗ್ನಳಾಗಿ ಕಾಣಿಸಿಕೊಂಡು ಆಕೆ ಪ್ರಚಾರ ಪಡೆದಿದ್ದಳು.

ದಕ್ಷಿಣ ಭಾರತೀಯ ಸಿನಿಮಾಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಆಕೆಯನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಡೋದರಾದಿಂದ ಕಣಕ್ಕಿಳಿಸುವ ಸಾಧ್ಯತೆಗಳಿವೆ.   

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಮನೂರ ಲಾಠಿ ಚಾರ್ಚ್ ಪ್ರಕರಣ: 6 ಕಾನ್‌ಸ್ಟೆಬಲ್‌ ಅಮಾನತು