Webdunia - Bharat's app for daily news and videos

Install App

ಲಂಡನ್ ರಾಣಿಯ ಕಿರೀಟದಲ್ಲಿನ ಕೊಹಿನೂರು ಸೀಕ್ರೆಟ್ ಏನು..?

geetha
ಮಂಗಳವಾರ, 5 ಮಾರ್ಚ್ 2024 (18:44 IST)
Photo Courtesy: Twitter
ಲಂಡನ್ - ಲಂಡನ್ ರಾಣಿ..! ಈಕೆಯ ವೈಭವಪೇತ ಜೀವನದ ಬಗ್ಗೆ ಅದೆಷ್ಟೂ ಹೇಳಿದ್ರೂ ಕಡಿಮೆನೇ. ಆಗೇ ಬದುಕಿ ಬಾಳಿದವರು ಬ್ರಿಟನ್ನಿನ ರಾಣಿ ೨ನೇ ಎಲಿಜಬೆತ್. ಸುದೀರ್ಘ ೭೦ವರ್ಷಗಳ ಕಾಲ ಆಂಗ್ಲ ನೆಲದಲ್ಲಿ ಇವರ ಆಳ್ವಿಕೆಯ ದರ್ಬಾರ್ ನಡೆದು ಹೋಗಿತ್ತು. ಅದೇ ಅದೇ ಗತ್ತು ಅದೇ ಗೈರತನ್ನು ಇವರು ಇದ್ದಷ್ಟು ದಿನವೂ ಉಳಿಸಿಕೊಂಡು ಬಂದವರು ರಾಣಿ ೨ನೆ ಎಲಿಜಬೆತ್. ಅದಕ್ಕಾಗಿಯೇ ಇವತ್ತಿಗೂ ಸತ್ತ ನಂತರವೂ ಲಂಡನ್ನಿನ ರಾಣಿ ಸದ್ದು ಮಾಡುತ್ತಲೇ ಬಂದು ಬಿಟ್ಟಿರೋದು..!
 
ಬ್ರಿಟನ್ ಕ್ವೀನ್, ಬರೀ ಇದಷ್ಟೆ ಆಗಿರಲಿಲ್ಲ ರಾಣಿ ೨ನೇ ಎಲಿಜಬೆತ್. ಒಂಥರಾ ಜಾಗತಿಕ ಪ್ರಭೆಯನ್ನು ಉಳಿಸಿಕೊಳ್ಳೊದಕ್ಕೆ ಸ್ವತಃ ರಾಣಿಯೇ ಮುಂದಾಗಿದ್ದರು. ಹಾಗಾಗಿ ಬರೀ ಲಂಡನ್‌ಗೆ ಮಾತ್ರ ಸೀಮಿತವಾಗದ ಈಕೆಯ ಪ್ರತಿಷ್ಠೆ ೧೪ದೇಶಗಳಿಗೆ ವಿಸ್ತರಿಸಿ ಬಿಟ್ಟಿತ್ತು. ನೇರವಾಗಿ ಅಲ್ಲದೆ ಹೋದರೂ ಪರೋಕ್ಷವಾಗಿ ಎಲಿಜಬೆತ್ ಜಗತ್ತಿನ ೧೪ ದೇಶಗಳ ಮುಖ್ಯಸ್ಥೆಯೂ ಹೌದು. ಇದು ಹೇಗೆ ಅನ್ನೋದನ್ನ ಆ ಮೇಲೆ ನೋಡ್ತಾ ಹೋಗೋಣ. ಲಂಡನ್ ರಾಣಿಯ ವೈಭವ, ಅದ್ದೂರಿ ಜೀವನದಿಂದ ಹೇಗೆಲ್ಲಾ ಜಾಗತಿಕವಾಗಿ ತಮ್ಮ ವರ್ಚಸ್ಸನ್ನು ವೃದ್ದಿಸಿಕೊಂಡಿದ್ರೋ ಹಾಗೆ ರಾಣಿ ಕಿರೀಟದಲ್ಲಿದ್ದ ಕೊಹಿನೂರು ಡೈಮಂಡ್ ಬಗ್ಗೆಯೂ ಕುತೂಹಲವಂತೂ ಇದ್ದೆ ಇದೆ. ಹೀಗೆ ಬ್ರಿಟನ್‌ನಲ್ಲಿ ಒಂದಷ್ಟು ಸುದಿರ್ಘ ಕಾಲದವರೆಗೆ ಇಡೀ ಲಂಡನ್‌ನಲ್ಲಿ ದರ್ಬಾರು ನಡೆಸಿದವರು ರಾಣಿ ೨ನೇ ಎಲಿಜಬೆತ್.
 
 
ರಾಣಿ ೨ನೇಎಲಿಜಬೆತ್ ೧೯೫೩ರಲ್ಲಿ ಸಿಂಹಾನವನ್ನ ಏರುವ ಮೂಲಕ ಆಂಗ್ಲ ನೆಲದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದವರು. ಸುಮಾರು ೭೦ವರ್ಷಗಳ ಸುದಿರ್ಘ ಅವಧಿಗೆ ಲಂಡನ್ನಿನ ಮಹಾರಾಣಿಯಾಗಿ ಶ್ರೀಮಂತಿಕೆಯ ಅದ್ದೂರಿ ವೈಭವನ್ನು ಕಂಡವರು. ಜಾಗತಿಕವಾಗಿ ರಾಣಿ ೨ನೇ ಎಲಿಜಬೆತ್‌ಗೆ ವಿಶೇಷವಾದ ಗೌರವಗಳು ಸಿಗ್ತಾ ಇದ್ದವು. ಅದರಲ್ಲೂ ರಾಣಿಯ ಕಿರೀಟದಲ್ಲಿರುವ ಕೊಹಿನೂರು ವಜ್ರವೂ ತುಂಬಾನೆ ವಿಶೇಷ. ಹಾಗೂ ಅದಕ್ಕೆ ಅದರದ್ದೆ ಆದ ಹಿನ್ನಲೆವಿದೆ.
 
ಇಡೀ ಜಗತ್ತೆ ಲಂಡನ್ ರಾಣಿ ೨ನೇ ಎಲಿಜಬೆತ್ ಕಿರೀಟದ ಬಗ್ಗೆ ಕುತೂಹಲವನ್ನು ಇಟ್ಟುಕೊಂಡಿದೆ. ಹಲವು ವಿಶೇಷತೆಗಳಿಂದ ಕೂಡಿರುವ ರಾಣಿಯ ಕಿರೀಟ ಬಗ್ಗೆ ಇವತ್ತಿಗೂ ಜಾಗತಿಕವಾಗಿ ಚರ್ಚೆ ಆಗ್ತಿದೆ. ೨ನೇ ಎಲಿಜಬೆತ್ ಧರಿಸುತ್ತಿದ್ದ ಈ ಕಿರೀಟದ ಬೆಲೆ ಬರೋಬ್ಬರಿ ೪,೫೦೦ಕೋಟಿ. ಇಷ್ಟೊಂದು ದುಬಾರಿ ಕಿರೀಟವನ್ನು ಇದುವರೆಗೂ ಜಗತ್ತಿನ ಯಾವ ರಾಜಪ್ರಭುತ್ವದಲ್ಲೂ ಕಂಡಿಲ್ಲ, ಹಾಗೆನೆ ಕೇಳೆ ಇಲ್ಲ. ಇಂತಹದೊAದು ದುಬಾರಿ ಬೆಲೆ ಬಾಳುವ ಕಿರೀಟವನ್ನು ಬ್ರಿಟನ್ನಿನ ರಾಣಿ ಒಬ್ಬರೇ ಧರಿಸೋದಕ್ಕೆ ಸಾಧ್ಯ. 
 
 
ಕೊಹಿನೂರ್ ವಜ್ರ ಬ್ರಿಟನ್ ರಾಣಿಯ ಕಿರೀಟದಲ್ಲಿ ವಿರಾಜಮಾನವಾಗಿ ಪ್ರತಿಷ್ಠಾಪನೆ ಆಗ್ತಾ ಬಂದಿತ್ತು.. ೧೦೫ ಕ್ಯಾರೆಟ್ ಶುಭ್ರತೆಯನ್ನು ಹೊಂದಿರುವ, ಪಳಪಳ ಹೊಳೆಯುವ ಈ ಕೊಹಿನೂರ್ ಡೈಮಂಡ್ ಬಗ್ಗೆ ಇವತ್ತಿಗೂ ಜಾಗತಿಕವಾಗಿ ಚರ್ಚೆ ಆಗ್ತಾ ಇದೆ. ರಾಣಿ ೨ನೇ ಎಲಿಜಬೆತ್ ಧರಿಸುತಿದ್ದ ಕಿರೀಟದಲ್ಲಿರುವ ಈ ಡೈಮಂಡ್ ಬ್ರಿಟನ್ ರಾಜಮನೆತನದ ಮುಕುಟಪ್ರಾಯ. ರಾಣಿಯ ಕಿರೀಟದಲ್ಲಿ ತುಂಬಾ ವಿಶೇಷವಾಗಿ ಹೈಲೆಟ್ ಆಗ್ತಾ ಇದ್ದದ್ದು ಇದೆ ವಜ್ರ. ಆದ್ರೆ ಈ ಕೊಹಿನೂರ್ ವಜ್ರವನ್ನು ರಾಣಿಗೆ ಕೊಟ್ಟೊರು ಯಾರು. ಯಾವಾಗ ಅನ್ನೋ ಪ್ರಶ್ನೆಗಳು ಜೋರಾಗಿಯೇ ಕೇಳಿ ಬಂದಿದ್ದವು.. ಅಪ್‌ಕೋರ್ಸ್ ಇವತ್ತಿಗೂ ಬರ್ತಿವೆ.
 
ಕೊಹಿನೂರ್..! ಇದರ ಬಗ್ಗೆ ಬ್ರಿಟನ್ ಕೂಡ ಸೂಕ್ತವಾದ ಮಾಹಿತಿ ಕೊಡ್ಡೇ ಬಂದು ಬಿಟ್ಟಿದೆ. ಕೊಹಿನೂರ್ ವಜ್ರ ಎಲ್ಲಿಯದ್ದೂ, ರಾಣಿಯ ಕಿರೀಟದಲ್ಲಿ ಪಳಪಳ ಹೊಳೆಯುತ್ತಿರೋ ಇದನ್ನು ಯಾರು ಕೊಟ್ರೋ, ಯಾಕೆ ಕೊಟ್ರೋ ಅನ್ನೊದನ್ನ ಬ್ರಿಟನ್ ಮಾರೆ ಮಾಚ್ತಿದೆ. ಅದೆನೇ ಗೌಪ್ಯತೆಯನ್ನ ಕಾಪಾಡಿದ್ರೂ, ಕೊಹಿನೂರ್ ಡೈಮಂಡ್ ಅದು ಯಾವಾತಿದ್ರೂ ನಮ್ಮದೇ, ಸಿಖ್ ಮತ್ತು ಆಂಗ್ಲೋ ಯುದ್ದದ ಸಮಯದಲ್ಲಿ ಸಿಖ್ ದೊರೆ, ನಮ್ಮದೇ ದೇಶದ ರಾಜ ದಿಲೀಪ್‌ಸಿಂಗ್ ಲಂಡನ್ನಿನ ರಾಣಿಗೆ ಕಪ್ಪಕಾಣಿಕೆಯಾಗಿ ನೀಡಿದ್ದು. ಹಾಗಾಗಿ ಇದು ಯಾವತ್ತಿದ್ರೂ ನಮ್ಮದೇ ಅಂತ ಹೇಳಲಾಲಾಗ್ತಿದೆ. ಇನ್ನೊಂದು ಕಡೆ ಈ ವಜ್ರವನ್ನು ಪಾಕಿಸ್ತಾನ, ಅಪ್ಘಾನಿಸ್ತಾನ, ಹಾಗೂ ಇರಾನ್ ದೇಶಗಳು ಇದು ತಮ್ಮದೆಂದು ಪ್ರತಿಪಾದಿಸುತ್ತಿದ್ದವು....
 
೮೦೦ ವರ್ಷಗಳ ಹಿಂದೆ, ಭಾರತದ್ದೆ ಆದ ಕೊಹಿನೂರ್ ವಜ್ರ, ಆಂಗ್ಲರ ರಾಣಿ ಎಲಿಜಬೆತ್ ಸುಪರ್ದಿಗೆ ಸೇರಿತ್ತು. ಇವತ್ತು ಅದೆನೆ ಚರ್ಚೆಗಳು ಆಗ್ತಿರಬಹುದು, ಆದ್ರೆ ರಾಣಿ ಎಲಿಜಬೆತ್‌ಗೆ ಆಂಗ್ಲ ಮತ್ತು ಸಿಖ್ ವಾರ್ ಸಂದರ್ಭದಲ್ಲಿ ಭಾರತದ ನೆಲದಿಂದಲೆ ಹಸ್ತಾಂತರವಾಗಿರೋದು. ಯಾರು ಏನೇ ಹೇಳಿದ್ರೂ ರಾಣಿಯ ಕಿರೀಟದಲ್ಲಿರುವ ಕೊಹಿನೂರ್ ನಮ್ಮದೇ ಅಲ್ವೇ..!
 
ಲಂಡನ್ನಿನ ರಾಣಿಗೆ ಜಾಗತಿಕವಾಗಿ ಸಿಗ್ತಾ ಇತ್ತು ಗೌರವ....!?
 
ರಾಣಿ ೨ನೇ ಎಲಿಜಬೆತ್ ಬದುಕಿದ್ದೆ ಹಾಗೆ, ಅತ್ಯಂತ ವೈಭೋಗದ ಶ್ರೀಮಂತಿಕೆಯ ಜೀವನ. ಯಾವುದಕ್ಕೂ ಕಡಿಮೆ ಇಲ್ಲದೆ ಅತ್ಯಂತ ಲೀಲಾಜಾಲವಾಗಿ ಅಂದುಕೊAಡಿದ್ದೆಲ್ಲ, ರಾಣಿಗೆ ಸಿಕ್ತಾ ಇತ್ತು. ಬ್ರಿಟನ್ ಪ್ರಜಾಪ್ರಭುತ್ವ ದೇಶವೇ ಆದ್ರೂ, ರಾಜಪ್ರಭುತ್ವವನ್ನು ಜೊತೆ ಜೊತೆಯಲ್ಲೆ ಫೋಷಿಸಿಕೊಂಡು ಬಂದAತಹ ದೇಶ. ಇಲ್ಲಿನ ರಾಣಿ ಅಥವಾ ರಾಜ ಯಾರೇ ಆದರೂ ಸರಿ ಇವರಿಗೆ ಅದ್ದೂರಿ ಮತ್ತು ಶ್ರೀಮಂತ ವೈಭವೂ ಸಿಕ್ಕೆ ಬಿಡುತ್ತಿತ್ತು. ಅದರಲ್ಲೂ ಬ್ರಿಟನ್‌ನಲ್ಲಿ ಸುಮಾರು ೭೦ವರ್ಷಗಳ ಕಾಲ ದರ್ಬಾರ್ ನಡೆಸ್ತಾ ಬಂದಿದ್ದ ರಾಣಿ ೨ನೇ ಎಲಿಜಬೆತ್‌ಗೆ ಜಾಗತಿಕವಾಗಿ ಗೌರವ, ಮನ್ನಣೆಗಳು ಸಿಗ್ತಾ ಬಂದಿದ್ದವು. 
 
 
ಅದರಲ್ಲೂ ಬ್ರಿಟನ್ ರಾಣಿ ಅಂದ್ರೆ ಹೇಳಬೇಕಾ, ಅದೇನು ಗತ್ತು, ಅದೆನೋ ಗೈರತ್ತು, ಇದು ಬರೀ ಇಂಗ್ಲೆAಡಿಗೆ ಮಾತ್ರ ಸೀಮಿತ ಆಗಿರಲಿಲ್ಲ ಜಗತ್ತಿನ ೧೪ ದೇಶಗಳಲ್ಲಿ ಇದೆ ಗತ್ತುನ್ನು ರಾಣಿ ೨ನೇ ಎಲಿಜಬೆತ್ ಹೊಂದಿದ್ದರು. ಹೌದು ಜಗತ್ತಿನ ೧೪ದೇಶಗಳಿಗೆ ಆಂಗ್ಲರ ರಾಣಿಯೆ ಮುಖ್ಯಸ್ಥೆ ಆಗಿದ್ದರು. ಆಸ್ಟೆಲಿಯಾ, ಬಾರ್ಮುಡಾ, ದಿ ಬಹಮಾಸ್, ಕೆನಾಡ, ಜಮೈಕ, ಸೇರಿದಂತೆ, ಒಟ್ಟು ೧೪ ದೇಶಗಳಲ್ಲಿ ರಾಣಿಗೆ ಕೆಲವೊಂದು ವಿಶೇಷ ಅಧಿಕಾರಗಳನ್ನ ನೀಡಲಾಗಿತ್ತು. ಈ ಹಿಂದೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ರಾಷ್ಟçಗಳು ಇವಾಗಿದ್ದರಿಂದ, ರಾಣಿಗೆ ಮುಖ್ಯಸ್ಥೆಯ ಗೌರವ ಸಿಕ್ಕಿತ್ತು. ಈ ದೇಶಗಳಲ್ಲಿ ಸರ್ಕಾರದ ಆಡಳಿತದಲ್ಲಿ ನಿರ್ಧಾರ ತೆಗೆದುಕೊಳ್ಳುವುದು, ಚುನಾಯಿತ ಸಂಸತ್ತು. ಹೀಗೆ ಎಲ್ಲ ಅಲ್ಲಿನ ಪ್ರಧಾನಿಗಳೇ ಆಗಿರುತ್ತಾರೆ. ಇಲ್ಲಿ ರಾಣಿ ಬರೀ ದೇಶದ ಮುಖ್ಯಸ್ಥೆ ಅಷ್ಠೆ, ಸರ್ಕಾರದ ಮುಖ್ಯಸ್ಥೆ ಆಗಿರೋದಿಲ್ಲ. ಆದ್ರೆ ಸರ್ಕಾರವನ್ನು ಅನುಮೋದಿಸುವ ಕೆಲಸ ಬ್ರಿಟನ್ ರಾಣಿಯದ್ದೇ ಆಗಿರುತ್ತಿತ್ತು.
 
ಲಂಡನ್ನಿನ ರಾಣಿ, ಆಂಗ್ಲರ ರಾಣಿ... ಈಕೆ ರ‍್ತಾಳೆ ಅಂದ್ರೆ ಜಗತ್ತಿನ ಯಾವ ದೇಶಗಳು ಪಾಸ್‌ಪೋರ್ಟ್ ಕೇಳುವುದಿಲ್ಲ. ಇದಲ್ಲದೇ ಪ್ರಪಂಚದ ಯಾವುದೇ ದೇಶದ ರಸ್ತೆಯಲ್ಲಿ ಲಕ್ಷÄರಿ ಕಾರನ್ನು ಚಲಾಯಿಸುತ್ತಾಳೆ ಅಂದ್ರೂನೂ, ಎಲೆಜಬೆತ್‌ಗೆ ಡ್ರೆöÊವಿಂಗ್ ಲೈಸನ್ಸ್ ಅಗತ್ಯವೇ ಇರಲಿಲ್ಲ. ಯಾಕಂದ್ರೆ ಲಂಡನ್ನಿನ ಈ ರಾಣಿಗೆ ಇಂತಹದೊAದು ಗೌರವ ಸಿಗ್ತಾ ಇತ್ತು.
 
ಬ್ರಿಟನ್ನಿನ ರಾಣಿ ಹೇಗೆಲ್ಲ ಬದುಕಿದರೂ ಅಂದ್ರೆ, ಜಗತ್ತಿನ ಇನ್ಯಾವುದೇ ರಾಜಮನೆತನ ಬ್ರಿಟನ್ನಿನ ರಾಣಿ ೨ನೇ ಎಲಿಜಬೆತ್‌ರಷ್ಟು ಶ್ರೀಮಂತ ವೈಭವದಂತೆ ಸದ್ದು ಮಾಡಲೇ ಇಲ್ಲ. ಇಲ್ಲಿ ರಾಣಿಗೆ ವಿಶೇಷವಾದ ಗೌರವ, ಮನ್ನಣೆ, ಜೊತೆಗೆ ಸರ್ಕಾರದ ಭಾಗವಾಗಿ ಕೆಲವೊಂದು ರಾಜತಾಂತ್ರಿಕ ನಿರ್ಧಾರಗಳಲ್ಲಿ ಹಸ್ತಕ್ಷೇಪ ಇತ್ತು. 
 
ಅದೇ ರೀತಿ ಇಲ್ಲಿನ ರಾಜಮನೆತನಕ್ಕೆ ಎಲ್ಲ ರೀತಿಯ ಅದ್ದೂರಿ, ಸೌಲಭ್ಯಗಳನ್ನ ಸ್ವತಃ ಬ್ರಿಟನ್ ಸರ್ಕಾರವೇ ಒದಗಿಸುತ್ತಾ ಬಂದಿತ್ತು. ಅದರಲ್ಲೂ ರಾಣಿಯೇ ವಾಸವಿದ್ದ, ಅರಮನೆಯನ್ನು ನೋಡ್ತಾ ಇದ್ರೆ ಎರಡು ಕಣ್ಣುಗಳೇ ಸಾಲದು, ಅಂತಹ ವೈಭವ ಅರಮನೆಯಲ್ಲಿ ಕಾಣ್ತಿತ್ತು. ೧೭೦೩ರಲ್ಲಿ ಬರೋಬ್ಬರಿ ೩೯ ಎಕರೆ ವಿಸ್ತಿರ್ಣದಲ್ಲಿ ಕಟ್ಟಿದ ಬರ್ಮಿಂಗ್ ಹ್ಯಾಂ ಪ್ಯಾಲೆಸ್ ನಿಜಕ್ಕೂ ಮಿನಿ ಸ್ವರ್ಗವೇ ಅನ್ನುವ ಹಾಗೆ ಕಂಗೊಳಿಸುತ್ತಿತ್ತು.... ಈಗಲೂ ರಾಣಿ ಇಹಲೋಕ ತ್ಯಜಿಸಿದ್ದರು ಕೂಡ ಅದೇ ಆಡಂಭರದ ಸಿಂಗಾರವನ್ನ ಹೊಂದಿದೆ ಆ ಅರಮನೆ..!????

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments