Webdunia - Bharat's app for daily news and videos

Install App

ಕಾಶ್ಮಿರದ ಹಗಲು ಗನಸು ಕಾಣುವುದು ಬಿಡಿ: ಷರೀಫ್‌ಗೆ ಸುಷ್ಮಾ ಸ್ವರಾಜ್ ಖಡಕ್ ಎಚ್ಚರಿಕೆ

Webdunia
ಭಾನುವಾರ, 24 ಜುಲೈ 2016 (13:11 IST)
ಕಾಶ್ಮಿರದ ಬಗೆಗಿರುವ ನಿಮ್ಮ ಕನಸು ಯಾವತ್ತೂ ನನಸಾಗುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನಕ್ಕೆ ನೇರ ಸಂದೇಶ ರವಾನಿಸಿದ್ದಾರೆ.
 
ನಿಷೇಧಿತ ಉಗ್ರಗಾಮಿ ಸಂಘಟನೆಯ ಕಮಾಂಡರ್‌ ಅಗಿದ್ದ ಬುರ್ಹಾನ್ ವನಿಯ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರೂ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹುತಾತ್ಮ ಎಂದು ಕರೆದಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಕಾಶ್ಮಿರವನ್ನು ಪಾಕಿಸ್ತಾನದ ಭಾಗವಾಗಿಸಬೇಕು ಎನ್ನುವ ಪಾಕಿಸ್ತಾನದ ಅಪಾಯಕಾರಿ ಕನಸು ಎಂದೆಂದಿಗೂ ನನಸಾಗುವುದಿಲ್ಲ ಎನ್ನುವುದನ್ನು ಪಾಕಿಸ್ತಾನ ಅರಿತುಕೊಳ್ಳಲಿ ಎಂದರು. 
 
ಕಾಶ್ಮಿರ ಒಂದಿಲೊಂದು ದಿನ ಪಾಕಿಸ್ತಾನದ ಭಾಗವಾಗುವುದನ್ನು ನೋಡಲು ಕಾಯುತ್ತಿದ್ದೇವೆ ಎನ್ನುವ ಪಾಕ್ ಪ್ರಧಾನಿ ಷರೀಫ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್, ಜಮ್ಮು ಕಾಶ್ಮಿರದ ಸಂಪೂರ್ಣ ಭಾಗ ಭಾರತದ ಸ್ವರ್ಗವಾಗಿದೆ. ಸ್ವರ್ಗವನ್ನು ನರಕ ಮಾಡಲು ನಾವು ಬಿಡುವುದಿಲ್ಲ ಎಂದು ಗುಡುಗಿದರು.
 
ಪಾಕಿಸ್ತಾನದ ಕೆಟ್ಟ ಹಣ, ಅಪಾಯಕಾರಿ ಭಯೋತ್ಪಾದಕರು ಮತ್ತು ಅಸ್ಥಿರ ಸರಕಾರದಿಂದ ಭಾರತವನ್ನು ಅಸ್ತವ್ಯಸ್ಥಗೊಳಿಸುವ ಹುನ್ನಾರ ನಡೆದಿದೆ. ಆದರೆ, ಪಾಕಿಸ್ತಾನ ಹಗಲು ಗನಸು ಕಾಣುವುದು ಬಿಟ್ಟರೆ ಸೂಕ್ತ ಎಂದು ಲೇವಡಿ ಮಾಡಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟ್ಯಾಬ್ಲೆಟ್ ತೆಗೆದುಕೊಳ್ಳದೇ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಉಪಾಯ

ಗುರುವಾರದ ಸಂಪುಟ ಸಭೆಯೂ ಸುರ್ಜೆವಾಲಾ ಅವರ ಅಧ್ಯಕ್ಷತೆನಾ: ಆರ್ ಅಶೋಕ್ ವಾಗ್ದಾಳಿ

ರಾಹುಲ್ ಗಾಂಧಿ ಜೊತೆ ಜಡ್ಜ್ ಸೆಲ್ಫೀ ನಿಜಾನಾ: ಇಲ್ಲಿದೆ ರಿಯಾಲಿಟಿ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಮುಂದಿನ ಸುದ್ದಿ
Show comments