Webdunia - Bharat's app for daily news and videos

Install App

ಬೆಣ್ಣೆಯಂತಿರುವ ಕೆಂಪು ಗಲ್ಲದ ಹುಡುಗಿ ನೀ ಕಾಶ್ಮೀರಿಯಾ? : ಮತ್ತೊಂದು ವಿವಾದದಲ್ಲಿ ಆಸಾರಾಂ ಬಾಪು

Webdunia
ಮಂಗಳವಾರ, 27 ಸೆಪ್ಟಂಬರ್ 2016 (13:05 IST)
ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹೊತ್ತು ಜೈಲು ಪಾಲಾಗಿರುವ ಸ್ವಯಂಘೋಷಿತ ದೇವ ಮಾನವ ಆಸಾರಾಂ ಬಾಪು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ವೈದ್ಯಕೀಯ ಪರೀಕ್ಷೆಗೆಂದು ಏಮ್ಸ್‌ಗೆ ದಾಖಲಾಗಿದ್ದ ಅವರು ಅಲ್ಲಿನ ನರ್ಸ್‌ ಜತೆ ಆಕ್ಷೇಪಾರ್ಹವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅವರಿಗೆ ಮುಂಜಾನೆಯ ಉಪಹಾರವಾಗಿ ಬ್ರೆಡ್ ಮತ್ತು ಬೆಣ್ಣೆಯನ್ನು ತಿನ್ನಿಸಲು ಬಂದ ನರ್ಸ್ ಬಳಿ, ಆಸಾರಾಂ ಬೆಣ್ಣೆ ಬೇಡ, ನೀನೇ ಬೆಣ್ಣೆ ತರಹ ಇದ್ದೀಯಾ. ನಿನ್ನ ಕೆನ್ನೆಗಳು ಸೇಬೆ ಹಣ್ಣಿನಂತಿವೆ. ನೀನು ಕಾಶ್ಮೀರಿಯಾ ಎಂದು 72 ವರ್ಷದ ಆಸಾರಾಂ ಕೇಳಿದ್ದಾರೆ ಎಂದು ವರದಿಯಾಗಿದೆ. ಆಸಾರಾಂ ಅವರ ವರ್ತನೆಯಿಂದ ಕೆರಳಿದ ನರ್ಸ್ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ಈ ಕುರಿತು ದೂರನ್ನಿತ್ತಿದ್ದಾಳೆ.
 
16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪವನ್ನು ಎದುರಿಸುತ್ತಿರುವ ಆಸಾರಾಂ ಆಗಸ್ಟ್ 20, 2013ರಿಂದ  ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
 
ತಾವು ಅನಾರೋಗ್ಯದಿಂದ ಬಳಲುತ್ತಿರುವುದಾಗ ಅವರು ದೂರುತ್ತಿರುವ ಹಿನ್ನೆಲೆಯಲ್ಲಿ ಏಮ್ಸ್‌ನಲ್ಲಿ ಅವರ ಆರೋಗ್ಯ ಪರೀಕ್ಷೆ ಮಾಡುವಂತೆ ಸುಪ್ರಿಂಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್‌ಗೆ ದಾಖಲಿಸಿದಾಗ ಈ ಪ್ರಸಂಗ ನಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಅಡಿಕೆಗೆ ವಾರದ ಆರಂಭದಲ್ಲೇ ಇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ರೇಪ್ ಕೇಸ್: ಸಿಸಿಟಿವಿಯಲ್ಲಿ ದಾಖಲಾಗಿದೆ ಭಯಾನಕ ದೃಶ್ಯ

ಕಾಂಗ್ರೆಸ್ ಬಿಕ್ಕಟ್ಟಿಗೆ ಮದ್ದು ಹಚ್ಚಲು ಬೆಂಗಳೂರಿಗೆ ಸುರ್ಜೇವಾಲ

ಬೈಕ್ ನಲ್ಲಿ ಮಲಗಿ ಸ್ಟಂಟ್ ಮಾಡಲು ಹೋದ ಯುವಕರ ಕತೆ ಕೊನೆಗೆ ಏನಾಯ್ತು: ವಿಡಿಯೋ

ಮುಂದಿನ ಸುದ್ದಿ
Show comments