Select Your Language

Notifications

webdunia
webdunia
webdunia
webdunia

ಯೋಗಾ ಅಭ್ಯಾಸದಿಂದ ರೇಪ್ ಪ್ರಕರಣಗಳಲ್ಲಿ ಇಳಿಮುಖ: ಮುರುಳಿ ಮನೋಹರ್ ಜೋಷಿ

ಯೋಗಾ ಅಭ್ಯಾಸದಿಂದ ರೇಪ್ ಪ್ರಕರಣಗಳಲ್ಲಿ ಇಳಿಮುಖ: ಮುರುಳಿ ಮನೋಹರ್ ಜೋಷಿ
ನವದೆಹಲಿ , ಸೋಮವಾರ, 23 ಫೆಬ್ರವರಿ 2015 (14:34 IST)
ಒಂದು ವೇಳೆ ಸಾಮಾನ್ಯ ಜನರು ಜೀವನದಲ್ಲಿ ಯೋಗಾ ಅಳವಡಿಸಿಕೊಂಡಲ್ಲಿ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಇಳಿಮುಖವಾಗಲು ನೆರವಾಗಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಹೇಳಿದ್ದಾರೆ. 
 
ಪ್ರವಾದಿ ಮೊಹಮ್ಮದ್ ಶ್ರೇಷ್ಠ ಯೋಗಿಯಾಗಿದ್ದರು. ಆದ್ದರಿಂದ ಮುಸ್ಲಿಮರು ಕೂಡಾ ಪ್ರತಿ ದಿನ ಐದು ಬಾರಿ ಯೋಗ ಅಭ್ಯಾಸದಲ್ಲಿ ತೊಡಗಬೇಕು ಎಂದು ಜೋಷಿ ಹೇಳಿಕೆ ನೀಡಿರುವುದು ಮತ್ತೊಂದು ರಾಜಕೀಯ ಕೋಲಾಹಲಕ್ಕೆ ಕಾರಣವಾಗುವ ನಿರೀಕ್ಷೆಯಿದೆ
 
ನನ್ನ ಅಭಿಪ್ರಾಯದ ಪ್ರಕಾರ, ಒಂದು ವೇಳೆ ಸಾಮಾನ್ಯ ಜನತೆ ಯೋಗಕ್ಕೆ ಮೊರೆಹೋದಲ್ಲಿ ಅತ್ಯಾಚಾರ ಪ್ರಕರಣಗಳು ಅಂತ್ಯವಾಗುತ್ತವೆ ಎಂದು ನಾನು ಭಾವಿಸಿಲ್ಲ. ಆದರೆ, ರೇಪ್ ಪ್ರಕರಣಗಳಲ್ಲಿ ಖಂಡಿತ ಇಳಿಮುಖವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಯೋಗಾಸನಗಳು ಪುರುಷ ಮತ್ತು ಮಹಿಳೆಯರಲ್ಲಿ ಹೊಸಬಗೆಯ ಚಿಂತನೆಯನ್ನು ಸೃಷ್ಟಿಸುತ್ತದೆ. ನಮ್ಮ ದೇಹ ಯಂತ್ರದಂತೆ. ದೇಹವನ್ನು ಬೃಹತ್ ಕಾರ್ಯಗಳಿಗಾಗಿ ಬಳಸಿಕೊಳ್ಳಲು ನಿಸರ್ಗ ಅನುಕೂಲ ಮಾಡಿಕೊಟ್ಟಿದೆ ಎನ್ನುವ ಬಗ್ಗೆ ನಮ್ಮ ಗಮನ ಹರಿಯುತ್ತದೆ ಎಂದರು.
 
ನ್ಯೂಯಾರ್ಕ್‌ನಲ್ಲಿ ಮಹರ್ಷಿ ಮಹೇಶ್ ಯೋಗಿ ಯೋಗ ಪಾಠ ಹೇಳಿಕೊಟ್ಟ ನಂತರ ಅಪರಾಧ ಪ್ರಕರಣಗಳಲ್ಲಿ ಇಳಿಕೆಯಾಗಿವೆ. ಜೈಲಿನ ಕೈದಿಗಳು ಕೂಡಾ ತಮ್ಮ ವರ್ತನೆಯನ್ನು ಬದಲಾವಣೆ ತಂದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
 
ಮುಸ್ಲಿಮರು ನಮಾಜ್ ಮಾಡುವಂತೆ ಯೋಗಾ ಕೂಡಾ ಮಾಡುವುದು ಸೂಕ್ತ. ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿದಲ್ಲಿ ಇತರರು ಕೂಡಾ ಆಕರ್ಷಿತರಾಗುತ್ತಾರೆ ಎಂದು ಹೇಳಿದ್ದಾರೆ. 
 
 
 
 

Share this Story:

Follow Webdunia kannada