ಉಲಾನ್‌ಬಾತರ್‌ನಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರನ್ನು ಕರೆತರಲು ಹೊರಟ ಮತ್ತೊಂದು AI ವಿಮಾನ

Sampriya
ಮಂಗಳವಾರ, 4 ನವೆಂಬರ್ 2025 (16:34 IST)
ನವದೆಹಲಿ: ಸ್ಯಾನ್‌ಫ್ರಾನ್ಸಿಸ್ಕೊ – ದೆಹಲಿ ಮಾರ್ಗದಲ್ಲಿ 228 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏರ್‌ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಮಂಗೋಲಿಯಾದ ರಾಜಧಾನಿ ಉಲಾನ್‌ಬಾತರ್‌ನಲ್ಲಿ ಲ್ಯಾಂಡ್ ಆಗಿದೆ. ಇದೀಗ ಪ್ರಯಾಣಿಕರನ್ನು ಕರೆತರಲು ಮತ್ತೊಂದು ಏರ್‌ ಇಂಡಿಯಾ ವಿಮಾನ ಹೋಗಿದೆ. 

ಕಂಪನಿ ಹೊರಡಿಸಿರುವ ಪ್ರಕಟನೆ ಪ್ರಕಾರ, ವಿಮಾನವು ಬುಧವಾರ ಬೆಳಿಗ್ಗೆ ಭಾರತಕ್ಕೆ ಮರಳಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಏರ್‌ ಇಂಡಿಯಾಗೆಸೇರಿದ ಬೋಯಿಂಗ್ 777 ವಿಮಾನದಲ್ಲಿ 17 ಸಿಬ್ಬಂದಿ ಹಾಗೂ 228 ಪ್ರಯಾಣಿಕರು ಸೇರಿ ಒಟ್ಟು 245 ಜನ ಇದ್ದರು. ಸ್ಯಾನ್‌ಫ್ರಾನ್ಸಸಿಸ್ಕೊದಿಂದ ಈ ವಿಮಾನವು ನ. 2ರಂದು ಹೊರಟಿತ್ತು. ಕೋಲ್ಕತ್ತ ಮಾರ್ಗವಾಗಿ ಈ ವಿಮಾನವು ದೆಹಲಿಗೆ ಪ್ರಯಾಣಿಸುತ್ತಿತ್ತು.

ಆದರೆ ಮಾರ್ಗ ಮಧ್ಯೆ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಉಲಾನ್‌ಬಾತರ್‌ನಲ್ಲಿ ತುರ್ತು ಭೂಸ್ಪರ್ಶವಾಗಿದೆ. 

ಇಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವನ್ನು ಏರ್ ಇಂಡಿಯಾ ಕಳುಹಿಸುತ್ತಿದೆ. ಈ ಕುರಿತಂತೆ ಸ್ಥಳೀಯ ಅಧಿಕಾರಿಗಳು ಮತ್ತು ಭಾರತೀಯ ರಾಯಭಾರ ಕಚೇರಿಗೆ ಕಂಪನಿ ಮಾಹಿತಿ ನೀಡಿದೆ. ಪ್ರಯಾಣಿಕರಿಗೆ ವಸತಿ ಸೌಕರ್ಯ ನೀಡಲಾಗಿದೆ ಎಂದೂ ಹೇಳಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಲಾನ್‌ಬಾತರ್‌ನಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರನ್ನು ಕರೆತರಲು ಹೊರಟ ಮತ್ತೊಂದು AI ವಿಮಾನ

ಬೆಂಗಳೂರು: ನಾಯಿಯನ್ನು ಕೊಂದು ಕ್ರೌರ್ಯ ಮೆರೆದಿದ್ದ ಪಾಪಿ ಕೊನೆಗೂ ಅರೆಸ್ಟ್‌

ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಮೋದಿ ಯುವಜನತೆಯನ್ನು ರೀಲ್ಸ್ ದಾಸರನ್ನಾಗಿಸಿದ್ದಾರೆ: ರಾಹುಲ್

ಕೊಯಮತ್ತೂರು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌, ಆರೋಪಿಗಳಿಗೆ ಕಾಲಿಗೆ ಗುಂಡೇಟು

ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಚ್‌.ವೈ.ಮೇಟಿ ವಿಧಿವಶ

ಮುಂದಿನ ಸುದ್ದಿ
Show comments